ಶಹಾಪುರ ಪ್ರವಾಸಿ ಮಂದಿರದಲ್ಲಿ ಕೃಷಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡ ಮುಂಗಾರು ಹಂಗಾಮು ಬಿತ್ತನೆ ಕುರಿತ ಭಿತ್ತಿಪತ್ರವನ್ನು ಸಹಾಯಕ ನಿರ್ದೇಶಕ ಸುನೀಲಕುಮಾರ ಯಾಳವಾರ ಬಿಡುಗಡೆ ಮಾಡಿದರು. ಮಲ್ಲಣ್ಣ ಪರಿವಾಣ, ಶರಣು ಮಂದಾರವಾಡ, ಚಂದನಗೌಡ ಹಬ್ಬಳ್ಳಿ, ಶರಣಗೌಡ ಪಾಟೀಲ್, ಚನ್ನಪ್ಪ ಆನೆಗುಂದಿ, ರಮೇಶ ಗಾಂಜಿ, ಅಶೋಕ ಸಾಹುಕಾರ ಬಲ್ಕಲ್ ಇತರರಿದ್ದರು.
- ಸಹಾಯಕ ನಿರ್ದೇಶಕ ಸುನೀಲಕುಮಾರ ಸಲಹೆ
- ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾಸಭೆ
ಶಹಾಪುರ: ಆಧುನಿಕ ತಂತ್ರಾನ ಅಳವಡಿಸಿಕೊಂಡ ಕಡಿಮೆ ಖರ್ಚಿನ ಸುಧಾರಿತ ಬೇಸಾಯ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ರೈತರಿಗೆ ಲಾಭದಾಯಕ ಕೃಷಿ ಮಾಡಲು ಸಾಧ್ಯ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲಕುಮಾರ ಯಾಳವಾರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕೃಷಿ ಇಲಾಖೆಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಮುಂಗಾರು ಹಂಗಾಮಿನ ಪೂರ್ವಸಿದ್ಧತೆ ಹಾಗೂ ಕಡಿಮೆ ಖರ್ಚಿನ ಸುಧಾರಿತ ಬೇಸಾಯ ಲಾಭದಾಯಕ ಕೃಷಿಗೆ ಅಡಿಪಾಯ ವಿಷಯದ ಮೇಲೆ ಕರೆದಿದ್ದ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 75628 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಭತ್ತ 16530, ಹತ್ತಿ 38798, ತೊಗರಿ 16788 ಹಾಗೂ ಹೆಸರು 2265 ಹೆಕ್ಟೇರ್ ಪ್ರದೇಶವಿದೆ. ವಡಗೇರಾ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 57285 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಭತ್ತ 14717, ಹತ್ತಿ 26798, ತೊಗರಿ 13923 ಹಾಗೂ ಹೆಸರು 962 ಹೆಕ್ಟೇರ್ ಪ್ರದೇಶವಿದೆ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೃಷಿ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲು ಎಫ್ಐಡಿ ನೋಂದಣಿ ಅಗತ್ಯವಾಗಿದೆ. ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣ ಸಬ್ಸಿಡಿ, ಬೆಳೆ ವಿಮೆ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ರೈತರು ತಮ್ಮ ದಾಖಲೆಗಳನ್ನು ಸರಿಯಾಗಿ ನೋಂದಣಿ ಮಾಡಿಸಬೇಕು ಎಂದರು.
ರೈತರು ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಖಾತೆ ವಿವರ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ಎಫ್ಐಡಿ ನೋಂದಣಿ ಇಲ್ಲದ ರೈತರಿಗೆ ಮುಂದಿನ ದಿನಗಳಲ್ಲಿ ಸರ್ಕಾರದ ಸಬ್ಸಿಡಿ ಹಾಗೂ ವಿವಿಧ ಯೋಜನೆಗಳ ಲಾಭ ದೊರೆಯಲು ಸಮಸ್ಯೆಯಾಗಲಿದೆ. ಹೀಗಾಗಿ ತಣ ರೈತರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಮಲ್ಲಣ್ಣ ಪರಿವಾಣ, ಶರಣು ಮಂದಾರವಾಡ, ಚಂದನಗೌಡ ಹಬ್ಬಳ್ಳಿ, ಶರಣಗೌಡ ಪಾಟೀಲ್, ಚನ್ನಪ್ಪ ಆನೆಗುಂದಿ, ರಮೇಶ ಗಾಂಜಿ, ಅಶೋಕ ಸಾಹುಕಾರ ಬಲ್ಕಲ್, ಮಲ್ಲಣ್ಣ ಬೀರ್ನೂರ, ಸಂಗಣ್ಣಸಾಹು ಅಣಬಿ, ಸಿದ್ದಣ್ಣ ದೊರೆ ಇತರರಿದ್ದರು.
ತಾಲೂಕಿನಲ್ಲಿ ಬೆಳೆಗೆ ಅಗತ್ಯಕ್ಕನುಗುಣವಾಗಿ ಯೂರಿಯಾ, ಡಿಎಪಿ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರವನ್ನು ಹಂತ, ಹಂತವಾಗಿ ದಾಸ್ತಾನು ವ್ಯವಸ್ಥೆ ಮಾಡಲಾಗುತ್ತಿದ್ದು, ಯೂರಿಯಾ ಗೊಬ್ಬರ ಖರೀದಿಗೆ ಮಾತ್ರ ಕಡ್ಡಾಯವಾಗಿರುತ್ತದೆ. ಹೀಗಾಗಿ ರೈತರು ಕೃಷಿ ಸೌಲಭ್ಯಗಳನ್ನು ಪಡೆಯಲು ಎಫ್ಐಡಿ ಮಾಡಿಸಬೇಕು ಹಾಗೂ ಉಳಿದ ಸರ್ವೇ ನಂಬರ್ ಕೂಡ ಎಫ್ಐಡಿ ಗೆ ಜೋಡಣೆ ಮಾಡಿಸಿಕೊಳ್ಳಬೇಕು. ರೈತರು ವೈಾನಿಕವಾಗಿ ಶಿಫಾರಸು ಮಾಡಿದ ರಸಗೊಬ್ಬರಗಳನ್ನೇ ಬಳಸಲು ಸಲಹೆ ಅವರು ನೀಡಿದರು.
ಯೂರಿಯಾ ಹಾಗೂ ಡಿಎಪಿ ಗೊಬ್ಬರ ಪರ್ಯಾಯವಾಗಿ ರೈತರು ಕಾಂಪ್ಲೆಕ್ಸ್ ಗೊಬ್ಬರಗಳನ್ನು ಹಾಗೂ ಜೈವಿಕ ಗೊಬ್ಬರಗಳು ಹಾಗೂ ನ್ಯಾನೋ ಯೂರಿಯಾ, ಡಿಎಪಿ ಬಳಸಲು ಸಲಹೆ ನೀಡಿದರು. ಖರೀದಿಸಿದ ಗೊಬ್ಬರಕ್ಕೆ ಅಧಿಕೃತ ರಶೀದಿ ಪಡೆಯಿರಿ. ರೈತರು ಖರೀದಿಸಿದ ಕೃಷಿ ಪರಿಕರಗಳಿಗೆ ಕಡ್ಡಾಯವಾಗಿ ಅಧಿಕೃತ ರಶೀದಿ ಪಡೆಯುವುದು ಮತ್ತು ಹೆಚ್ಚಿನ ಬೆಲೆಯಲ್ಲಿ ಅಥವಾ ಕೃತಕ ಅಭಾವ ಸೃಷ್ಟಿಸಿದರೆ ರೈತರು ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಂತಹ ಮಾರಾಟಗಾರರ ಪರವಾನಿಗೆ ರದ್ದು ಪಡಿಸುವುದಲ್ಲದೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುನೀಲಕುಮಾರ ಹೇಳಿದರು.