ಚನ್ನರಾಯಪಟ್ಟಣ ಹೋಬಳಿ ಯಲಿಯೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಸಮಾಜಸೇವಕ ಹನುಮಂತರಾಯಪ್ಪ, ನಿವೃತ್ತ ಇಂಜಿನಿಯರ್​ ಕೆ.ಮುತ್ತಣ್ಣ, ಕಲಾವಿದ ಮುನಿರಾಜು, ಚಿಂತಕ ಸತೀಶ್​, ಶಿಕ್ಷಕಿ ರೇಣುಕಾ ಭಟ್​ ಅವರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್​.ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಆರ್​. ಕೆ.ನಂಜೇಗೌಡ ಇತರರು ಇದ್ದರು. 
ರಾಜ್ಯ

ಎಲ್ಲೆಡೆ ಕನ್ನಡ ಬಳಸಿ ಉಳಿಸಿ / CHANARAYAPATTANA

ಬೆಂಗಳೂರು ಗ್ರಾಮಾಂತರ ಡೆಸ್ಕ್
ಚನ್ನರಾಯಪಟ್ಟಣ : ಕನ್ನಡ ಶಾಲೆಗಳನ್ನು ಉಳಿಸಬೇಕು, ಸರ್ಕಾರಿ ಕಚೇರಿಗಳು, ನ್ಯಾಯಾಲಯ ಸೇರಿದಂತೆ ಮತ್ತಿತರ ಕಡೆಗಳಲ್ಲೂ ಕನ್ನಡ ಬಳಕೆಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್​.ಕೃಷ್ಣಪ್ಪ ಒತ್ತಾಯಿಸಿದರು.
ಹೋಬಳಿ ಯಲಿಯೂರು ಗ್ರಾಮದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್​ನಿಂದ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯಕ್ಕೆ ಬಹುಮುಖಿ ನೆಲೆ ಇದೆ. ಅದು ಕಲಿಕೆ, ಚಿಂತನೆ, ಅನುಭವ ಕಥನವಾಗಿ ನಮ್ಮ ಅರಿವನ್ನು ವಿಸ್ತರಿಸಲಿದೆ. ಈ ಕ್ಷೇತ್ರದ ಸಾಧಕರನ್ನು ಗುರುತಿಸುವುದು ಬಹಳ ಮುಖ್ಯವಾದ ಕಾರ್ಯ ಎಂದರು.
ತಾಲೂಕು ಕಸಾಪ ಅಧ್ಯಕ್ಷಆರ್​.ಕೆ.ನಂಜೇಗೌಡ ಮಾತನಾಡಿ, ದತ್ತಿನಿಧಿ ಎಂದರೆ ತಮ್ಮ ಹಿರಿಯರ ನೆನಪಿಗೆ ಅಥವಾ ತಮಗೆ ಉಪಕಾರ ಮಾಡಿದವರ ವಾರ್ಷಿಕ ಸ್ಮರಣೆಗೆ ಅಥವಾ ನಾಡು, ನುಡಿ ಕಾರ್ಯಕ್ರಮಗಳನ್ನು ನಡೆಸಬೇಕೆಂಬ ಆಶಯ ಹೊಂದಿದ್ದವರು ಸ್ಥಾಪಿಸುವ ನಿಧಿಯೇ ದತ್ತಿಯಾಗಿದೆ. ಪ್ರತಿ ವರ್ಷ ದತ್ತಿದಾನಿಗಳ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಯಲಿಯೂರು ದೇವರಾಜ್​ ಮಾತನಾಡಿ, ಕಸಾಪ ಆಯೋಜಿಸುವ ಸಾಹಿತ್ಯ ಸಮ್ಮೇಳನ ಕನ್ನಡಿಗರು, ಸಾಹಿತ್ಯ ಪ್ರೇಮಿಗಳಿಗೆ ಅತಿದೊಡ್ಡ ಹಬ್ಬ ಎಂದರು.
ಈ ಸಂದರ್ಭದಲ್ಲಿ ಶಸಾಪ ಜಿಲ್ಲಾಧ್ಯಕ್ಷ ಚಂದ್ರಶೇಖರ್​ ಹಡಪದ್​, ಕಲಾವಿದ ದೇವನಹಳ್ಳಿ ದೇವರಾಜ್​, ಯಲಿಯೂರು ಗ್ರಾಪಂ ಮಾಜಿ ಸದಸ್ಯ ಆನಂದ, ಜಿಲ್ಲಾ ಕಸಾಪ ಪೋಷಕ ಸಿ.ಪಿ.ರೆಡ್ಡಿ, ಪ್ರಭು ಆಚಾರ್​ ಮತ್ತು ಕಲಾವಿದ ನಾರಾಯಣಸ್ವಾಮಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷಡಾ.ಮುನಿರಾಜು, ಸಾಹಿತಿ ಶರಣಯ್ಯ ಹಿರೇಮಠ, ಬಿ.ಕೆ. ಸಂಪತ್​ ಕುಮಾರ್​, ಎಸ್​.ರಮೇಶ್​ ಕುಮಾರ್​, ರಾಮಾಂಜಿನಪ್ಪ,ಐ.ಟಿ.ರಾಮಾಂಜಿನಪ್ಪ, ಭೂ ಅಭಿವೃದ್ಧಿ ಬ್ಯಾಂಕ್​ ಉಪಾಧ್ಯಕ್ಷ ವೆಂಕಟೇಶ್​, ಡೇರಿ ಅಧ್ಯಕ್ಷಪ್ರಕಾಶ್​, ಚನ್ನರಾಯಪಟ್ಟಣ ಹೋಬಳಿ ಕಸಾಪ ಅಧ್ಯಕ್ಷ ರಮೇಶ್​ ಗೌಡ, ವೇಣುಗೋಪಾಲ, ವಸಂತ ಕುಮಾರ್​, ನಾಗರಾಜ್​, ಕಿರುತೆರೆ ನಿರ್ದೇಶಕ ಪಿಳ್ಳೇಗೌಡ ಇತರರು ಇದ್ದರು.