ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಇತ್ತೀಚೆಗೆ ಹೊಸಮನೆ ನಿರ್ಮಿಸುವವರು ಯಾವುದೇಶಕ್ತಿ ಸಂಪನ್ಮೂಲವನ್ನು ಅಪವ್ಯಯವಾಗದಂತೆತಡೆಗಟ್ಟಲು ವಿವಿಧ ನಿಯಂತ್ರಣಮಾರ್ಗಗಳನ್ನು ಕಂಡು ಕೊಂಡಿದ್ದಾರೆ.ಉದಾಹರಣೆಗೆವಿದ್ಯುತ್ ಶಕ್ತಿಯ ಕಡಿಮೆ ಬಳಕೆಗೆಎಲ್‌ಇಡಿ ಬಲ್ಪ್ ಬಳಸುತ್ತಾರೆ.ಅಂತೆಯೇ ನೀರಿನಸದ್ಭಳಕೆಗೆ ಇರುವ ಸರಳ ಉಪಾಯಏರೇಟರ್ ಬಳಕೆ.
‘ಪೃಥಿವ್ಯಾಂತ್ರೀಣಿ ರತ್ನಾಣಿ ಅನ್ನಂ,ಜಲಂ,ಸುಭಾಷಿತಂ’ ಎಂಬಮಾತಿನಂತೆ ಪ್ರಪಂಚದಲ್ಲಿ ಅನ್ನ,ನೀರು ಮತ್ತುಜ್ಞಾನ ಈ ಮೂರು ಅಮೂಲ್ಯವಾದರತ್ನಗಳಿದ್ದಂತೆ.ಆದ್ದರಿಂದನೀರನ್ನು ಅನಾವಶ್ಯಕವಾಗಿವ್ಯಯಗೊಳಿಸಬಾರದು.ನೀರನ್ನು ಮಿತವಾಗಿಬಳಸುವುದು ಅತ್ಯಗತ್ಯ ಮತ್ತುಎಲ್ಲರ ಕರ್ತವ್ಯ ಕೂಡಾ.ಈ ಹಿನ್ನಲೆಯಲ್ಲಿಹಿಂದೊಮ್ಮೆ ಜಲಮಂಡಳಿಯು ಏರೇಟರ್ಬಳಕೆಯನ್ನು ಕಡ್ಡಾಯಗೊಳಿಸಿಜನರಲ್ಲಿ ನೀರನ್ನು ಮಿತವಾಗಿಬಳಸಲು ಜಾಗೃತಿ ಮೂಡಿಸಿತ್ತು.ಸರ್ಕಾರದ ನಿಯಮ,ಕಾನೂನುಗಳಿಗಿಂತಲೂಹೆಚ್ಚಾಗಿ ಸ್ವಯಂ ಪ್ರೇರಿತವಾಗಿನೀರನ್ನು ವ್ಯರ್ಥ ಮಾಡದ ಹಾಗೆಎಚ್ಚರಿಕೆ ವಹಿಸಬೇಕು. ಎಂತಹುದ್ದೇಚಿಕ್ಕ ಮನೆಯಾದರೂ ಸ್ನಾನದ ಕೋಣೆ,ಟಾಯ್ಲೆಟ್,ಅಡುಗೆ ಕೋಟೆ,ಸಿಂಕ್ ಇತ್ಯಾದಿ10 ಟ್ಯಾಪ್ಇರುತ್ತವೆ.ಅವುಗಳಿಗೆ ಏರೇಟರ್ಬಳಸುವುದರಿಂದ ಪ್ರತಿಶತ 30ರಿಂದ 40ರಷ್ಟುನೀರು ಉಳಿತಾಯ ಸಾಧ್ಯ ಇದರಿಂದನೀರಿನ ಶುಲ್ಕವೂ ಉಳಿತಾಯವಾಗುತ್ತದೆ.ಮನುಷ್ಯ ದುಡ್ಡುಕೊಟ್ಟು ಏನು ಬೇಕಾದರೂ ಸೃಷ್ಟಿಸಬಹುದುಆದರೆ ಗಾಳಿ,ಬೆಳಕು,ನೀರಿನಂತಹನೈಸರ್ಗಿಕ ಶಕ್ತಿ ಸಂಪನ್ಮೂಲಗಳನ್ನುಸೃಷ್ಟಿಸುವುದಕ್ಕೆ ಸಾಧ್ಯವಿಲ್ಲ.ಆದ್ದರಿಂದ ಅವುಗಳಸಂರಕ್ಷಣೆ ಎಲ್ಲರ ಜವಾಬ್ದಾರಿ.
ಹೊಸದಾಗಿಮನೆ ನಿರ್ಮಿಸುವವರು ಮೊದಲೇ ಕಡಿಮೆನೀರು ಸುರಿಯುವ ಟ್ಯಾಪ್‌ಗಳನ್ನುಬಳಸುತ್ತಿದ್ದಾರೆ. ಒಂದು ವೇಳೆ ಹಳೇಮನೆಗಳಲ್ಲಿರುವ ಟ್ಯಾಪ್‌ಗಳಲ್ಲಿನೀರು ದೊಡ್ಡದಾಗಿ ಸುರಿಯುತ್ತಿದ್ದರೆಅವುಗಳಿಗೆ ಎರೇಟರ್ ಬಳಸಬೇಕು.ಮುಂದಿನ ದಿನಗಳುಬೇಸಿಗೆ ಕಾಲ ಆಗಿರುವುದರಿಂದಮನೆಯ ನೀರಿನ ಬಳಕೆಯನ್ನು ಎಷ್ಟುಸಾಧ್ಯವೋ ಅಷ್ಟು ತಗ್ಗಿಸಬೇಕು.ಹಾಗೆ ನಿರಿನಬಳಕೆ ತಗ್ಗಿಸುವುದಕ್ಕೆ ಏರೇಟರ್ಬಳಕೆ ಸಹಕಾರಿ.ಏರೇಟರ್ ಬಳಕೆಯಿಂದನೀರು ಅಗಲವಾಗಿ ಚಿಮ್ಮುವುದರಿಂದ ತರಕಾರಿ, ಅಕ್ಕಿಇತರೆ ಆಹಾರ ಪದಾರ್ಥ,ಪಾತ್ರೆ,ಬಟ್ಟೆ ತೊಳೆಯುವುದಕ್ಕೂಅನುಕೂಲವಾಗುತ್ತದೆ.ಆದರೆ ನೀರು ಕಡಿಮೆಖರ್ಚಾಗುತ್ತದೆ. ಒಂದು ವೇಳೆನೀರಿನಲ್ಲಿ ಏನಾದರೂ ಸಣ್ಣ ಪುಟ್ಟಕಸ ಕಡ್ಡಿ ಇದ್ದರೂ ಏರೇಟರ್‌ನಲ್ಲೇಲಾಕ್ ಆಗುತ್ತದೆ.ಕಾರು,ಬೈಕು ಇತರೆ ವಾಹನತೊಳೆಯುವ ವಾಷಿಂಗ್ ಟ್ಯಾಪ್‌ಗೂಕೂಡ ಏರೇಟರ್ ಬಳಸುವುದು ಉತ್ತಮ.
ಏರೇಟರ್‌ಗಳಲ್ಲಿವಿವಿಧ ಮಾದರಿಗಳಿದ್ದು,ಕೇವಲ ಹತ್ತು,ಇಪ್ಪತ್ತುರೂಪಾಯಿಯ ಪ್ಲಾಸ್ಟಿಕ್ ಏರೇಟರ್‌ಗಳಿಂದಹಿಡಿದು ದುಬಾರಿ ಬೆಲೆಯ ಏರೇಟರ್‌ಗಳುಮಾರುಕಟ್ಟೆಯಲ್ಲಿ ಲಭ್ಯ. ಉತ್ತಮ ಬ್ರ್ಯಾಂಡೆಡ್ಕಂಪನಿಗಳ ಏರೇಟರ್‌ಗಳಲ್ಲಿ ಸ್ಟೀಲ್,ಕಾಪರ್,ಬ್ರಾಸ್ ಹೀಗೆಅವರವರ ಸಾಮರ್ಥ್ಯ ಮತ್ತು ಅಭಿರುಚಿಗೆತಕ್ಕ ಮಾದರಿಗಳಲ್ಲಿ ಸಿಗುತ್ತವೆ.ಇವುಗಳಲ್ಲಿ ಆಟೋಮ್ಯಾಟಿಕ್ ಸ್ವಿಚ್,90 ಡಿಗ್ರಿ ೆಲ್ಡಿಂಗ್ಏರೇಟರ್‌ಗಳಿದ್ದು,ಸಿಂಕ್‌ನಲ್ಲಿಅವುಗಳನ್ನು ಬೇಕಾದ ಕಡೆ ತಿರುಗಿಸಿಕೊಂಡುಬಳಸಬಹುದು.ಇವುಗಳನ್ನುಆಗಾಗ ತೆಗೆದು ಸ್ವಚ್ಛಗೊಳಿಸಿಕೊಳ್ಳಬಹುದು.ಒಟ್ಟಾರೆ ನೀರಿನಉಳಿತಾಯಕ್ಕೆ ಏರೇಟರ್ ಉತ್ತಮಪರಿಹಾರ