US Woman Raped 
ರಾಜ್ಯ

ಕೊಡಗಿನ ಹೋಂ ಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ; ಇಬ್ಬರ ಬಂಧನ..US Woman Raped

ಪ್ರಮುಖ ಮುಖ್ಯಾಂಶಗಳು

  • ಕುಟ್ಟಾ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇ ಒಂದರಲ್ಲಿ ತಂಗಿದ್ದ ವಿದೇಶಿ ಮಹಿಳೆ
  • ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂ ಸ್ಟೇ ಮಾಲೀಕ, ಜವಾನ ಅರೆಸ್ಟ್
  • ಜ್ಯೂಸ್​ನಲ್ಲಿ ಮತ್ತು ಬರುವ ವಸ್ತು ಮಿಕ್ಸ್​​ ಮಾಡಿ ದೌರ್ಜನ್ಯ ಎಸಗಿದ ಆರೋಪ
ಕೊಡಗು: ಇಲ್ಲಿನ ಕುಟ್ಟಾ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇ(Home Stay) ಒಂದರಲ್ಲಿ ವಿದೇಶಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾದ ಆರೋಪ ಕೇಳಿಬಂದಿದೆ. ಸದ್ಯ ಪೊನ್ನಂಪೇಟೆ ಪೊಲೀಸರು ಮಾಲೀಕ ಮತ್ತು ಅಲ್ಲಿ ಕೆಲಸ ಮಾಡುವವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಕುಟ್ಟಾ ಗ್ರಾಮದಲ್ಲಿರುವ ದೇವಿ ವಿಲ್ಲಾ ಎಂಬ ಹೋಂ ಸ್ಟೇ ಒಂದರಲ್ಲಿ ಅಮೆರಿಕದ ವಾಷಿಂಗ್ಟನ್​​ ಪ್ರಜೆ(United States ) ಉಳಿದುಕೊಂಡಿದ್ದರು. ಹೋಂ ಸ್ಟೇನಲ್ಲಿ ಕೆಲಸ ಮಾಡುತ್ತಿದ್ದ  ಜಾರ್ಖಂಡ್​ನ ಮೂಲದ ಯುವಕ  ವೃಜೇಶ್ ಕುಮಾರ್ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.  ಮೇ 3ರವರೆಗೂ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಕುಟ್ಟಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಅಮೆರಿಕ ಪ್ರಜೆ ಮೇಲೆ ಅತ್ಯಾಚಾರ?

ಅಮೆರಿಕ ಪ್ರಜೆ ಏಪ್ರಿಲ್​ 19ರಂದು ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಕೂಲ್​ ಡ್ರಿಂಕ್ಸ್​ನಲ್ಲಿ ಮತ್ತು ಬರುವಂತಹ ವಸ್ತುವನ್ನು ಬೆರೆಸಿ ಕೊಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ಹೋಂ ಸ್ಟೇನಿಂದ ವಾಪಸ್ಸಾದ ನಂತರ ಅಮೆರಿಕ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಇಲ್ಲಿಗೆ ಮುಚ್ಚಿಹಾಕಲು ಮಾಲೀಕರು ಯತ್ನಿಸಿದ್ದರು ಎನ್ನುವ ಆರೋಪವು ಕೇಳಿಬಂದಿದೆ.  

ಹೋಂ ಸ್ಟೇ ಮಾಲೀಕನ ಬಂಧನ ಯಾಕೆ?

ಪ್ರಕರಣ ಯಾರಿಗೂ ತಿಳಿಯದಂತೆ ಮುಚ್ಚಿ ಹಾಕಲು ಹೋಂ ಸ್ಟೇ ಮಾಲೀಕ ಮೂರು ದಿನಗಳ ಕಾಲ ವೈಫೈ ರದ್ದು ಗೊಳಿಸಿದ್ದ. ಈ ಅವಧಿ ಯಾರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.  ಎನೂ ಮಾಡುವುದು ಎಂದು ತೋಚದೆ ಸಂತ್ರಸ್ತೆ  ಮೈಸೂರಿಗೆ ಪ್ರಯಾಣಿಸುವ ನೆಪದಲ್ಲಿ ಹೋಂ ಸ್ಟೇಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ವಿದೇಶಿ ಮಹಿಳೆ ಮೈಸೂರಿಗೆ ತೆರಳಿ ದೂರು ಕೊಟ್ಟಿದ್ದಾರೆ. ಪ್ರಕರಣವನ್ನು ಕುಟ್ಟ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸದ್ಯ ಅತ್ಯಾಚಾರ ನಡೆಸಿದ್ದಾನೆ ಎಂದು  ಆರೋಪ ಕೇಳಿಬಂದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜೊತೆಗೆ ವಿಚಾರ ಹೊರಬರದಂತೆ ತಡೆದ ಮಾಲೀಕರನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ,.  
ಕೊಡಗಿನ ಕುಟ್ಟ ಗ್ರಾಮದಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದ ಭೀಕರ ಹಲ್ಲೆ ಅತ್ಯಂತ ನಾಚಿಕೆಗೇಡಿನ ಸಂಗತಿ. ಇಂತಹ ಘಟನೆಗಳು ಅತಿಥಿ ದೇವೋಭವ ಎನ್ನುವ ನಮ್ಮ ನೀತಿಯ ಕಟ್ಟಳೆಯನ್ನೇ ಹೊಡೆದು ಹಾಕುತ್ತವೆ. ಇದು ಕೇವಲ ವ್ಯಕ್ತಿಯ ವಿರುದ್ಧದ ಅಪರಾಧವಲ್ಲ, ಬದಲಾಗಿ ನಮ್ಮ ರಾಷ್ಟ್ರದ ಪ್ರತಿಷ್ಠೆ ಮತ್ತು ಮೌಲ್ಯಗಳ ಮೇಲಿನ ಕಳಂಕವಾಗಿದೆ ಎಂದು ಕಿಡಿಕಾರಿದರು. ಇನ್ನು ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಬೇಕು ಎಂದು  ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಗ್​ ಮಾಡಿ ಮನವಿ ಮಾಡಿಕೊಂಡಿದ್ದಾರೆ, (ಏಜೆನ್ಸೀಸ್​).