ಹುಣಸಗಿಯ ಸೂಫಿ ಸಂತ ಹಜರತ್ ಸೈಯ್ಯದ್ ಶಹಾ ಹಬೀಬುಲ್ಲಾ ಖಾದರಿ ಅವರ ಉರುಸ್ನಲ್ಲಿ ಹಜರತ್ ಸೈಯ್ಯದ್ ಶಹಾ ಸುಲ್ತಾನ್ ಅಹ್ಮದ್ ಖಾದ್ರಿ ಕಣಕಲ್, ಜಾಯೆ ನಶೀನ್ ಸೈಯ್ಯದ್ ಅಬ್ದುಲ್ ಖಾದರ್, ಸೈಯ್ಯದ್ ಬಂದೆ ಅಲಿ ಮೊಯೊನುದ್ದೀನ್ ಖಾದ್ರಿ, ದಸ್ತಗಿರ್ ಶಾನಿ ಇತರರಿದ್ದರು.
ಹುಣಸಗಿ: ಪಟ್ಟಣದ ಸೂಫಿ ಸಂತ ಹಜರತ್ ಸೈಯ್ಯದ್ ಶಹಾ ಹಬೀಬುಲ್ಲಾ ಖಾದ್ರಿ ಅವರ ಉರುಸ್ ಎಲ್ಲ ಧರ್ಮದವರು ಭಾಗವಹಿಸುವ ಮೂಲಕ ಸಂಭ್ರಮದಿಂದ ಜರುಗಿತು.
ಸೈಯ್ಯದ್ ಮಹ್ಮದ್ ಅಲಿ ಬೆಣ್ಣೂರ್ ಮನೆಯಿಂದ ಮುಖ್ಯ ರಸ್ತೆ ಮೂಲಕ ಸಂತರ ಸಮಾಧಿ ಸ್ಥಳವಾದ ಖಾನ್ಕಾಹ್ ಖಾದ್ರಿವರೆಗೆ ಮಂಗಳವಾದ್ಯಗಳ ಮೆರವಣಿಗೆಯೊಂದಿಗೆ ಸಂದಲ್(ಗಂಧ)ನ್ನು ತರಲಾಯಿತು. ನಂತರ ಇಸ್ಲಾಂನ ಸೂಫಿ ಪಂಥದ ಖಾದ್ರಿಯಾ ಸಂಪ್ರದಾಯದಂತೆ ಸಂದಲ್, ಗಲೀಫ್, ಚಾದರ್ನ್ನು ಸಮರ್ಪಣೆ ಮಾಡಿ ಪ್ರಾರ್ಥಿಸಲಾಯಿತು. ಬಳಿಕ ಉರುಸ್ನಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಈ ವೇಳೆ ಸಜ್ಜಾದ್ ಹಜರತ್ ಸೈಯ್ಯದ್ ಶಹಾ ಸುಲ್ತಾನ್ ಅಹ್ಮದ್ ಖಾದ್ರಿ ಕಣಕಲ್, ಜಾಯೆ ನಶೀನ್ ಸೈಯ್ಯದ್ ಅಬ್ದುಲ್ ಖಾದರ್, ಸೈಯ್ಯದ್ ಬಂದೆ ಅಲಿ ಮೊಯೊನುದ್ದೀನ್ ಖಾದ್ರಿ, ದಸ್ತಗಿರ್ ಶಾನಿ, ಅಲ್ಲಾಭ್ ಹೊಳಿ, ಸೈಯ್ಯದ್ ಮುಹ್ಮದ ಹನೀಫ್, ಪ್ರಮುಖರಾದ ಬಸಲಿಂಗಯ್ಯ ಸ್ವಾಮಿ ಹಿರೇಮಠ, ಬಸವರಾಜ ಸಾಹು ಮಲಗಲದಿನ್ನಿ, ವೀರೇಶ ಬಿ.ಚಿಂಚೋಳಿ, ಚಂದ್ರಶೇಖರ ಸಾಹು ದಂಡಿನ್, ತಿಪ್ಪಣ್ಣ ಸಾಹು ಚಂದಾ, ಸಿದ್ರಾಮಪ್ಪ ಸಾಹು ಮುದಗಲ್, ಶಿವಲಿಂಗಸ್ವಾಮಿ ವಿರಕ್ತಮಠ, ಎಂ.ಎಸ್ ಚಂದಾ ಹುಣಸಗಿ, ವಜ್ಜಲ್ ಮಾಳನೂರ್, ದ್ಯಾಮನಹಾಳ, ಪೇಠ ಅಮ್ಮಾಪುರ, ಸುರಪುರ, ಕಲಬುರಗಿ ಸೇರಿ ವಿವಿಧೆಡೆಯಿಂದ ಸಂತರು ಹಾಗೂ ಭಕ್ತರು ಭಾಗವಹಿಸಿದ್ದರು.