ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಟಿ.ವಿ.ಶಿವಾನಂದನ್, ಶಿವರಂಜನ್ ಸತ್ಯಂಪೇಟೆ, ಡಾ.ಎಸ್.ಎಸ್.ಪಾಟೀಲ್, ಡಾ.ಸುಮಂಗಲಾ ರೆಡ್ಡಿ, ಸುನಿತಾ ಇದ್ದರು.
- ಶಿವರಂಜನ್ ಸತ್ಯಂಪೇಟೆ ಅನಿಸಿಕೆ
- ಶರಣಬಸವ ವಿವಿಯಲ್ಲಿ ಪತ್ರಿಕಾ ದಿನಾಚರಣೆ
ಕಲಬುರಗಿ: ಪತ್ರಿಕೋದ್ಯಮ ವೃತ್ತಿಯ ನೈಜ ಮೌಲ್ಯ ಕಾಪಾಡುವುದು, ಈ ವೃತ್ತಿಯಲ್ಲಿ ಉಂಟಾಗುತ್ತಿರುವ ಅವನತಿ ತಡೆಹಿಡಿಯುವುದು ತುರ್ತು ಅಗತ್ಯ ಎಂದು ಹಿರಿಯ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಅನುಭವ ಮಂಟಪದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಲ್ಲಿ ವೃತ್ತಿಪರ ನೈತಿಕತೆ ಹಾಗೂ ಪ್ರಾಮಾಣಿಕತೆ ಮೌಲ್ಯ ಕುಸಿಯುತ್ತಿವೆ. ಉದಾತ್ತ ವೃತ್ತಿ ಎಂದು ಪರಿಗಣಿಸಿದ ಪತ್ರಿಕೋದ್ಯಮವು ಇಂದು ಭ್ರಷ್ಟಾಚಾರದ ನೆರಳಿನಲ್ಲಿ ತನ್ನ ಗೌರವ ಕಳೆದುಕೊಳ್ಳುತ್ತಿದೆ. ಕೆಲವರ ತಪ್ಪು ನಡೆ-ನುಡಿಗಳಿಂದ ವೃತ್ತಿಯ ನತೆಗೆ ಧಕ್ಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯೂಟ್ಯೂಬ್ ಚಾನಲ್, ಇನ್ಸ್ಟಾಗ್ರಾಮ್ ರೀಲ್ಸ್, ಟೆಲಿಗ್ರಾಂ ಹಾಗೂ ವಿವಿಧ ಆನ್ಲೈನ್ ಸುದ್ದಿ ವೇದಿಕೆಗಳಂತಹ ಡಿಜಿಟಲ್ ಮಾಧ್ಯಮಗಳ ಆಗಮನದಿಂದ ಪತ್ರಿಕೋದ್ಯಮದ ಸ್ವರೂಪವೇ ಬದಲಾಗಿದೆ. ಹೀಗಾಗಿ ಒಂದಿಷ್ಟು ಪ್ರತಿಭೆ ಹಾಗೂ ಆಂಡ್ರಾಯ್ಡ್ ಮೊಬೈಲ್ ಹೊಂದಿರುವ ಯಾರಾದರೂ ಪತ್ರಕರ್ತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸತ್ಯಾಸತ್ಯತೆ ಹಾಗೂ ವಿಶ್ವಾಸಾರ್ಹತೆ ದೃಷ್ಟಿಯಿಂದ ಮುದ್ರಣ ಮಾಧ್ಯಮ ಇನ್ನೂ ತನ್ನ ಸ್ಥಾನ ಉಳಿಸಿಕೊಂಡಿದೆ ಎಂದರು.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂ.ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಪತ್ರಿಕೋದ್ಯಮ ೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾವರ್ಧಕ ಸಂದಲ್ಲಿ ಮುದ್ರಣಾಲಯ ಸ್ಥಾಪಿಸಿ, ಸಂದ ಚಟುವಟಿಕೆ ಹಾಗೂ ಸಂಸ್ಥಾನದ ಧಾರ್ಮಿಕ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ದಾಸೋಹ ಜ್ಞಾನರತ್ನ ಎಂಬ ಪಾಕ ಪತ್ರಿಕೆ ಆರಂಭಿಸಿದ್ದರು ಎಂದು ಸ್ಮರಿಸಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪಾಟೀಲ್ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸುಮಂಗಲಾ ರೆಡ್ಡಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್, ಸುನಿತಾ ಇತರರಿದ್ದರು.