ಕ್ಯಾನ್‌ಗಳಲ್ಲಿ ಡೀಸೆಲ್, ಪೆಟ್ರೋಲ್ ವಿತರಿಸಲು ಬಂಕ್ ಮಾಲೀಕರಿಗೆ ಸೂಚಿಸುವಂತೆ ಕರುನಾಡ ರಕ್ಷಣಾ ವೇದಿಕೆ ಮುಖಂಡರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಅಪ್ಪಾಸಾಬ ಲಕ್ಕುಂಡಿ, ಆನಂದಗೌಡ ಪಾಟೀಲ, ಪುಂಡಲೀಕ ಹೋಟಿ ಇತರರಿದ್ದರು. 
ರಾಜ್ಯ

ರೈತರಿಗೆ ಕ್ಯಾನ್‌ಗಳಲ್ಲಿ ಡೀಸೆಲ್ ನೀಡಲು ಆಗ್ರಹ

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ರೈತರು ಹೊಲಗಳಲ್ಲಿ ಕೃಷಿ ಕಾಯಕ ಮಾಡಲು ಡೀಸೆಲ್ ಅಗತ್ಯವಾಗಿದ್ದು, ಕ್ಯಾನ್‌ಗಳಲ್ಲಿ ಡಿಸೇಲ್, ಪೆಟ್ರೋಲ್ ವಿತರಿಸಲು ಬಂಕ್ ಮಾಲೀಕರಿಗೆ ಸೂಚಿಸುವಂತೆ ಕರುನಾಡ ರಕ್ಷಣಾ ವೇದಿಕೆ ಮುಖಂಡರು ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘಟನೆ ಉತ್ತರ ಕರ್ನಾಟಕ ರೈತ ಘಟಕದ ರಾಜ್ಯಾಧ್ಯಕ್ಷ ಅಪ್ಪಾಸಾಬ್ ಲಕ್ಕುಂಡಿ ಮಾತನಾಡಿ, ರೈತರು ಹೊಲಗಳಲ್ಲಿ ಟ್ರ್ಯಾಕ್ಟರ್ ಮೂಲಕ ಕೆಲಸದಲ್ಲಿ ತೊಡಗಿದಾಗ ಕೆಲವೊಮ್ಮೆ ಡೀಸೆಲ್ ಖಾಲಿ ಆಗುವುದರಿಂದ ಪೆಟ್ರೋಲ್ ಪಂಪ್‌ಗಳಿಗೆ ತೆರಳಿದರೆ ಕ್ಯಾನ್‌ಗಳಲ್ಲಿ ಡೀಸೆಲ್ ನೀಡುತ್ತಿಲ್ಲ. ಇದರಿಂದ ಕೃಷಿ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಕಾರಣ ರೈತರಿಗೆ ಕ್ಯಾನ್‌ಗಳಲ್ಲಿ 10 ಲೀ. ಡೀಸೆಲ್ ನೀಡಲು ಸೂಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಆನಂದಗೌಡ ಪಾಟೀಲ ಮಾತನಾಡಿ, ಪ್ರತಿನಿತ್ಯ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಗ್ರಾಮೀಣ ಭಾಗದ ರೈತರಿಗೆ ಕ್ಯಾನ್‌ಗಳಲ್ಲಿ ಕನಿಷ್ಠ 5 ಲೀ. ಪೆಟ್ರೋಲ್ ನೀಡಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಪುಂಡಲೀಕ ಹೋಟಿ, ಹರ್ಷ ಪೂಜೇರಿ, ರಿಯಾಜ್ ಡೊಂಕೆವಾಲಿ, ಶಂಭು ಹಣಗುಡಿಮಠ, ಬಸವರಾಜ ಮುಳಕೂರ, ರಾಜು ಸಂಗೊಳ್ಳಿ, ಚನ್ನಪ್ಪ ಗೀರನವರ, ಸಿದ್ದಪ್ಪ ಪೊಳ್ಳಿ, ಕೀರಪ್ಪ ತಳವಾರ ಇತರರಿದ್ದರು.