ಬಸವಕಲ್ಯಾಣ ತಾಲೂಕಿನ ಉರ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ನಂದಿ ಬಸವಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಶ್ರೀ ಡಾ. ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಜಗನ್ನಾಥ ಪಾಟೀಲ ಮಂಠಾಳ, ಪುಷ್ಪರಾಜ ಹಾರಕೂಡೆ, ಸಂಗಮೇಶ ನಂದಿ, ಭದ್ರಯ್ಯ ಸ್ವಾಮಿ, ಅಂದಪ್ಪ ಖಸಗೆ, ಜಗನ್ನಾಥ ಮುಗಳೆ ಇದ್ದರು. 
ರಾಜ್ಯ

ಗುರುವಿನ ಕೃಪೆಗೆ ಬೇಕು ಅಚಲ ಶ್ರದ್ಧೆ

ಬಸವಕಲ್ಯಾಣ: ಅಚಲವಾದ ಶ್ರದ್ಧೆ ಮತ್ತು ನಿಷ್ಠೆಯಿಂದ ಗುರುವಿನ ಕೃಪೆ ದೊರಕುತ್ತದೆ. ಬ್ರಹ್ಮಾಂಡದ ಪರಮ ಸತ್ಯದ ದರ್ಶನವನ್ನು ಮಾಡಿಸುವಂತಹ ಗುರುವಿನ ವಾಕ್ಯ ಅದ್ಭುತವಾದ ಶಕ್ತಿಯ ಆಗರವಾಗಿರುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ನುಡಿದರು.
ತಾಲೂಕಿನ ಉರ್ಕಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ನಂದಿ ಬಸವಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯರನ್ನು ಹೊಯ್ದಾಡುವ ಮನಸ್ಸಿನ ಸುಳಿಯಿಂದ ದಾಟಿಸಿ, ದೇಹಭಾವದಿಂದ ದೇವ ಭಾವದೆಡೆಗೆ ಕೊಂಡೊಯ್ಯುವ ಶಕ್ತಿ ಗುರುವಿನಲ್ಲಿರುತ್ತದೆ. ಗುರುವಿನ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ನಿರ್ಭೀತಿಯಿಂದ ಬದುಕಿನ ದಡ ಸೇರಬಲ್ಲರು ಎಂದರು.
ಜಗನ್ನಾಥ ಪಾಟೀಲ ಮಂಠಾಳ, ಪುಫ್ಪಿರಾಜ ಹಾರಕೂಡೆ, ಅನಿಲ ಕಾರಭಾರಿ ಮಾತನಾಡಿದರು. ಅಂದಪ್ಪ ಖಸಗೆ, ರಾಮಲಿಂಗ ಪಾಟೀಲ, ತಾನಾಜಿ ಬಿರಾದಾರ, ಬಸವರಾಜ ಭಾವಿ, ಭದ್ರಯ್ಯ ಸ್ವಾಮಿ, ಸಿದ್ರಾಮ ಪಾಟೀಲ, ಸಂಗಮೇಶ ನಂದಿ ಇದ್ದರು.
ಸಂಗಮೇಶ ನಂದಿ ಸ್ವಾಗತಿಸಿದರು. ಜಗನ್ನಾಥ ಮುಗಳೆ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಉರ್ಕಿ ಗ್ರಾಮದ ವತಿಯಿಂದ ಹಾರಕೂಡ ಶ್ರೀಗಳ 1029ನೇ ತುಲಾಭಾರ ಜರುಗಿತು. ಕಾರ್ಯಕ್ರಮಕ್ಕೂ ಮುನ್ನ ಅಲಂಕೃತ ಸಾರೋಟಿನಲ್ಲಿ ಹಾರಕೂಡ ಶ್ರೀಗಳ ಭವ್ಯ ಮೆರವಣಿಗೆ ಜರುಗಿತು.