‘ಬೆಳಕಿನ ಬೆಳೆ’ಯಲ್ಲಿ ಸೃಜನಶೀಲತೆಯ ಅನಾವರಣ; ಡಾ.ಬಿ.ಟಿ.ರುದ್ರೇಶರ ಸಮಗ್ರ ಸಾಹಿತ್ಯ  
ರಾಜ್ಯ

‘ಬೆಳಕಿನ ಬೆಳೆ’ಯಲ್ಲಿ ಸೃಜನಶೀಲತೆಯ ಅನಾವರಣ; ಡಾ.ಬಿ.ಟಿ.ರುದ್ರೇಶರ ಸಮಗ್ರ ಸಾಹಿತ್ಯ

ಪ್ರಮುಖ ಮುಖ್ಯಾಂಶಗಳು

  • ‘ಬೆಳಕಿನ ಬೆಳೆ’ಯಲ್ಲಿ ಸೃಜನಶೀಲತೆಯ ಅನಾವರಣ
  • ಡಾ.ಬಿ.ಟಿ.ರುದ್ರೇಶ ಅವರ ಸಮಗ್ರ ಸಾಹಿತ್ಯದ ಸಂಪಾದನೆ
  • ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಕೃತಿ ಲೋಕಾರ್ಪಣೆ

ಜಾಗತಿಕಚಿಕಿತ್ಸಾ ಪದ್ದತಿಗಳಲ್ಲಿ ಅನೇಕವಿಧಾನಗಳಿವೆ.ಅವುಗಳಲ್ಲಿಹೋಮಿಯೋಪತಥಿ ಕೂಡಾ ಒಂದು.18ನೇ ಶತಮಾನದಲ್ಲಿಜರ್ಮನಿಯ ಡಾ.ಸಾಮ್ಯುಯೆಲ್ಹಾನಿಮನ್ ಅವರ ಸಂಶೋಧನೆ ಮತ್ತುಪರಿಶ್ರಮದ ಸಾರ್ಥಕ ಲವೇ ಹೋಮಿಯೋಪತಥಿಚಿಕಿತ್ಸಾ ಪದ್ದತಿ.ಯಾವುದೇ ಅಡ್ಡಪರಿಣಾಮವಿಲ್ಲದ,ಜನರ ಕೈಗೆಟಕುವದರದಲ್ಲಿ ಲಭ್ಯವಿರುವ ಈ ವೈದ್ಯಪದ್ದತಿನಿರೀಕ್ಷಿತ ಮಟ್ಟದಲ್ಲಿ ಜನರನ್ನುತಲುಪಿಲ್ಲ ಎಂಬ ಅಸಮಾಧಾನದಿಂದಕಳೆದ 50 ವರ್ಷಗಳಹಿಂದೆ ಬೆಂಗಳೂರಿನ ಅಶ್ವಿನಿಹೋಮಿಯೋ ಕ್ಲಿನಿಕ್‌ಗೆ ಪ್ರವೇಶಮಾಡಿದ ಡಾ.ಬಿ.ಟಿ.ರುದ್ರೇಶ್ಅವರ ಹೆಸರು ಇಂದು ಯಾರಿಗೆ ತಾನೇಗೊತ್ತಿಲ್ಲ ?

ಕರ್ನಾಟಕದಮಟ್ಟಿಗೆ ಹೋಮಿಯೋಪಥಿ ಚಿಕಿತ್ಸಾವಿಧಾನವನ್ನು ಜನಮಾನಸಕ್ಕೆತಲುಪಿಸಿದ ಕೀರ್ತಿ ಡಾ.ಬಿ.ಟಿ.ರುದ್ರೇಶ್ಅವರಿಗೆ ಸಲ್ಲುತ್ತದೆ.ಅಂತಹ ರುದ್ರೇಶ್ಅವರು ಕಳೆದ 50ವರ್ಷಗಳಿಂದನಿರಂತರವಾಗಿ ಹೋಮಿಯೋಪತಥಿಚಿಕಿತ್ಸೆಯ ಮೂಲಕ ವೃತ್ತಿಬದುಕಿನಸುವರ್ಣ ಸಂಭ್ರಮದಲ್ಲಿದ್ದಾರೆ. ಜೊತೆಗೆ ಅವರವೈವಾಹಿಕ ಜೀವನದ ನಾಲ್ಕು ದಶಕಗಳನ್ನುಯಶಸ್ವಿಯಾಗಿ ಪೂರೈಸಿದ್ದಾರೆ.ಈ ಸಂದರ್ಭದಲ್ಲಿತಮ್ಮ ಸುದೀರ್ಘ ಅನುಭವ,ಹೋಮಿಯೋಪಥಿಚಿಕಿತ್ಸೆಯ ವಿಸ್ತೃತ ಅಂಶಗಳನ್ನುನಾಡಿನ ಬಹುತೇಕ ಎಲ್ಲ ಪ್ರಮುಖದಿನಪತ್ರಿಕೆಗಳು,ನಿಯತಕಾಲಿಕೆಗಳು,ಸ್ಮರಣ ಸಂಚಿಕೆಗಳು,ವಿವಿಧ ಪುಸ್ತಕಗಳಮೂಲಕ ದಾಖಲಿಸಿದ್ದಾರೆ.ಅವರ ಸಮಗ್ರಸಾಹಿತ್ಯವನ್ನು ಸಂಪಾದಿಸುವಮೌಲಿಕ ಕಾರ್ಯವನ್ನು ಡಾ.ಬೆಳವಾಡಿಮಂಜುನಾಥ ಮಾಡಿದ್ದಾರೆ. ‘ಬೆಳಕಿನ ಬೆಳೆ’ಎಂಬ ಬೃಹತ್ ಗ್ರಂಥ ಓದುಗರ ಕೈಸೇರಲುಸಿದ್ಧವಾಗಿದ್ದು,ಮಡಿಲು ಪ್ರಕಾಶನದಲ್ಲಿಸ್ವ್ಯಾನ್ ಪ್ರಿಂಟರ್ಸ್‌ ಕೃತಿಯನ್ನುಮುದ್ರಿಸಿದೆ.

ಗ್ರಾಮೀಣಪ್ರದೇಶದಲ್ಲಿ ಹುಟ್ಟಿ ಸತತಪರಿಶ್ರಮ ಮತ್ತು ಕಾರ್ಯಕ್ಷಮತೆಯಿಂದವೈದ್ಯಕೀಯ ಕ್ಷೇತ್ರದಲ್ಲಿ ಬೆಳೆದಯಶೋಗಾಥೆಗಳ ಸಾಲು ಸಾಲು ಉದಾಹರಣೆಗಳುಗ್ರಂಥದ ಮೌಲ್ಯಭಂಡಾರವನ್ನುಅನಾವರಣಗೊಳಿಸಿವೆ.ಸಾಮಾನ್ಯ ರೋಗದಿಂದಹಿಡಿದು ಮಾರಣಾಂತಿಕ ಕಾಯಿಲೆಗಳನ್ನುಕೂಡಾ ಹೋಮಿಯೋಪಥಿ ವೈದ್ಯಪದ್ಧತಿಮೂಲಕ ಗುಣಪಡಿಸಲು ಸಾಧ್ಯ ಎಂಬಹಲವು ಉದಾಹರಣೆಗಳು ಗ್ರಂಥದಲ್ಲಿವೆ.ಬಿ.ಟಿ.ರುದ್ರೇಶ್ಅವರು ಕೇವಲ ವೈದ್ಯರಷ್ಟೇ ಅಲ್ಲತಾವೊಬ್ಬ ವೈದ್ಯಸಾಹಿತಿ ಎಂಬುದನ್ನುಈಗಾಗಲೇ ಸಾಭೀತು ಮಾಡಿದವರು.ಅವರ ಸಾಹಿತ್ಯದಸಾಲಿಗೆ ‘ಬೆಳಕಿನ ಬೆಳೆ’ಕಿರೀಟವನ್ನಿಟ್ಟಂತೆ ಮೂಡಿ ಬಂದಿದೆ.ಸಾಮಾನ್ಯವಾಗಿವೈದ್ಯಸಾಹಿತ್ಯವನ್ನು ಅನುವಾದಸಾಹಿತ್ಯ ಎಂಬ ಕಿರುಗಣ್ಣಿನಲ್ಲಿನೋಡುವವರು ಹೆಚ್ಚು.ಆದರೆ ಅನುಭವಮತ್ತು ಶೋಧನೆಗಳು ಅಕ್ಷರರೂಪವನ್ನುಪಡೆದಾಗ ಸೃಜನಶೀಲತೆಯ ಪ್ರತಿರೂಪವೇಅಗಲಿವೆ ಎಂಬುದಕ್ಕೆ ಬಿ.ಟಿ.ರುದ್ರೇಶ್ಅವರ ಬರಹಗಳು ಸಾಕ್ಷಿಯಾಗಿವೆ.

ಬೆಳಕಿನಬೆಳೆಯಲ್ಲಿ ಸಮೃದ್ಧ ಫಸಲು

ಸುಮಾರು50 ವರ್ಷಗಳಬಿ.ಟಿ.ರುದ್ರೇಶ್ಅವರ ಹೋಮಿಯೋಪಥಿ ಪ್ರಾಕ್ಟೀಸ್‌ನಲ್ಲಿಕ್ಯಾನ್ಸರ್,ಬಂಜೆತನ,ಕೋವಿಡ್-19ನಂತಹ ಆತಂಕಕಾರಿರೋಗಗಳಿಗೂ ಯಶಸ್ವಿ ಚಿಕಿತ್ಸೆನೀಡಿದ್ದಾರೆ. ಅಂತಹ ಅಪರೂಪದಪ್ರಕರಣಗಳ ಸ್ಥಿತಿ-ಗತಿ-ಚಿಕಿತ್ಸೆಮತ್ತು ಲಿತಾಂಶ ಎಲ್ಲವನ್ನು ತಮ್ಮಲೇಖನಗಳ ಮೂಲಕ ದಾಖಲಿಸಿದ್ದಾರೆ.ಅಂತಹ ಪ್ರಮುಖಕನ್ನಡ ಮತ್ತು ಇಂಗ್ಲಿಷ್ ಲೇಖನಗಳುಗ್ರಂಥದಲ್ಲಿವೆ. ಈ ಲೇಖನಗಳುಹೋಮಿಯೋಪಥಿ ಚಿಕಿತ್ಸೆಯ ಪ್ರಯೋಜನ,ರೋಗಿ ಅನುಸರಿಸಬೇಕಾದಕ್ರಮ, ಮುನ್ನೆಚ್ಚರಿಕೆ,ಸಮಾಲೋಚನೆಯಿಂದಲೇಅರ್ಧ ಗುಣವಾದ ಉದಾಹರಣೆಗಳುಬದುಕಿನಲ್ಲಿ ಭರವಸೆ ಕಳೆದುಕೊಂಡಅಸಂಖ್ಯಾತ ಜನರಿಗೆ ಹೊಸ ಆಶಾಭಾವನೆಮೂಡಿಸುವುದರಲ್ಲಿ ಸಂದೇಹವಿಲ್ಲ.

ಗಣ್ಯರಮೆಚ್ಚುಗೆ ಮತ್ತು ಶುಭಹಾರೈಕೆ

ದಶಕಗಳಕಾಲ ಸರಣಿ ಲೇಖನದ ಮೂಲಕ ಹೋಮಿಯೋಪಥಿಚಿಕಿತ್ಸೆಯ ಪ್ರಯೋಜನ ಕುರಿತು,ಪ್ರಕರಣಗಳಉದಾಹರಣೆ ಸಮೇತ ಡಾ.ರುದ್ರೇಶ್ಅವರು ಬರೆದ ಬರಹಗಳಿಗೆ ನಾಡಿನಹಲವಾರು ಖ್ಯಾತನಾಮರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ.ಎಷ್ಟೋ ಕವಿ-ಕಲಾವಿದರು,ಸಾಹಿತಿಗಳುರುದ್ರೇಶ್ ಅವರ ಕುರಿತು ಪತ್ರ,ಲೇಖನ ಬರೆದುಪ್ರಕಟಿಸಿದ್ದಾರೆ.ಅಂತಹ ಗಣ್ಯರಆಯ್ದ ಪತ್ರ,ಲೇಖನಗಳನ್ನು‘ಬೆಳಕಿನ ಬೆಳೆ'ಯಲ್ಲಿಪ್ರಕಟಿಸಲಾಗಿದೆ.ಪ್ರೊ.ಕೆ.ಎಸ್.ನಿಸಾರ್ಅಹಮದ್, .ರಾ.ಮಿತ್ರ,ಡಾ.ಸಿದ್ದಲಿಂಗಯ್ಯ,ಬರಗೂರು ರಾಮಚಂದ್ರಪ್ಪ,ಡಾ.ಬಿ.ಎಂ.ಹೆಗಡೆ,ಪ್ರೊ.ದೊಡ್ಡರಂಗೇಗೌಡ,ಸುಮತೀಂದ್ರನಾಡಿಗ್ ಮತ್ತಿತರ ಗಣ್ಯರ ಬರಹಗಳುಗ್ರಂಥದ ಮೌಲ್ಯವನ್ನು ಹೆಚ್ಚಿಸಿವೆ.