ಸವದತ್ತಿಯಲ್ಲಿ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾರ್ಯನಿರ್ವಾಹಕ ಅಭಿಯಂತ ಎಸ್.ಇ. ಸುಭಾಸ ನಾಯ್ಕ ಮಾತನಾಡಿದರು. ಮಹಾವೀರ ಗಣಿ, ವಿರೂಪಾ ಮಾಮನಿ, ಶಂಕರಗೌಡ ಪಾಟೀಲ, ಮುತ್ತು ಕೌಜಗೇರಿ ಇತರರಿದ್ದರು.
ಸವದತ್ತಿ: ಮಲಪ್ರಭಾ ಜಲಾಶಯದಿಂದ ಮಾರ್ಚ್ ಮೊದಲ ವಾರದವರೆಗೆ ನಿರಂತರವಾಗಿ ನೀರು ಹರಿಸಬೇಕೆಂದು ಒತ್ತಾಯಿಸಿ ಸವದತ್ತಿಯ ಮಲಪ್ರಭಾ ಬಲದಂಡೆಯ ಕಾಲುವೆ ಬಳಿ ನರಗುಂದ, ನವಲಗುಂದ, ರಾಮದುರ್ಗ, ರೋಣ ಹಾಗೂ ಸವದತ್ತಿ ಭಾಗದ ರೆತರು ಮತ್ತು ಹಸಿರು ಸೇನೆಯ ಕಾರ್ಯಕರ್ತರು ಶನಿವಾರ ಸವದತ್ತಿ& ಗೋಕಾಕ ರಸ್ತೆ ತಡೆದು ಪ್ರತಿಭಟಿಸಿದರು.
ರೆತ ಸಂದ ಮುಖಂಡರಾದ ಲಕ್ಷ$್ಮಣ ಬಕ್ಕಾಯಿ, ಶಂಕರ ಅಂಬಲಿ ಹಾಗೂ ಮಹಾಂತೇಶ ಪಂಚೆನ್ನವರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾ ಮಾಮನಿ ಮಾತನಾಡಿ, ಹಿಂಗಾರು ಬೆಳೆಗಳಿಗಾಗಿ ನೀರು ಅವಶ್ಯವಾಗಿದ್ದು, ಈ ಸಮಯದಲ್ಲಿ ನೀರು ನಿಲ್ಲಿಸಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕನಿಷ್ಠ ಮಾರ್ಚ್ 15ರ ವರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ನೀರಾವರಿ ಇಲಾಖೆಯ ಧಾರವಾಡ ವತ್ತದ ಅಧೀಕ ಅಭಿಯಂತ ಮಹಾವೀರ ಗಣಿ ಮಾತನಾಡಿ, ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದ್ದು, ೆಬ್ರವರಿ 25ರವರೆಗೆ ನೀರು ಬಿಡಲು ಅವಕಾಶ ಕಲ್ಪಿಸಲಾಗುವುದು ಎಂದರು. ಇದಕ್ಕೆ ರೈತರು ಒಪ್ಪದೇ ಪ್ರತಿಭಟನೆ ಮುಂದುವರಿಸಿದಾಗ ಸ್ಥಳಕ್ಕಾಗಮಿಸಿದ ನವೀಲುತೀರ್ಥ ವೃತ್ತದ ಕಾರ್ಯನಿರ್ವಾಹಕ ಅಭಿಯಂತ ಎಸ್.ಇ. ಸುಭಾಸ ನಾಯ್ಕ ಮಾತನಾಡಿ, ೆ.28ರ ವರೆಗೆ ನೀರು ಬಿಡಲಾಗುವುದು. ಸಮಿತಿಯ ಸಭೆ ಕರೆಯಿಸಿ ರೆತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೆಗೊಳ್ಳುವುದಾಗಿ ತಿಳಿಸಿದಾಗ ಪ್ರತಿಭಟನೆ ಹಿಂಪಡೆಯಲಾಯಿತು. ರಾಮದುರ್ಗ ಡಿವೆಎಸ್ಪಿ ಚಿದಂಬರ ಮಡಿವಾಳರ, ಶಂಕರಗೌಡ ಪಾಟೀಲ, ಮುತ್ತು ಕೌಜಗೇರಿ, ಗದಗ ಜಿಲ್ಲಾ ಅಧ್ಯ ಬಸವರಾಜ ಸಾಬಳೆ, ಗಂಗಪ್ಪ ಕಾಲವಾಡ, ಮಹಾಂತೇಶ ಹೆಬಸೂರ, ಕೆಂಚನಗೌಡ ರಾಯನಗೌಡ್ರ, ಇಸ್ಮಾಯಿಲ್ ನದಾಫ್, ನಾಗನಗೌಡ ರೋಣದ, ಹೆಮರಡ್ಡಿ ಹುಚರಡ್ಡಿ, ಬಾಳಮ್ಮ ಮುದೇನೂರ, ಸವಿತಾ ಮುದೇನೂರ, ಸಂಗೀತಾ ಪೂಜೇರ ಇತರರು ಇದ್ದರು.