ಯಳಂದೂರು ತಾಲೂಕು ವಕೀಲರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಎಂ.ಜೈಶಂಕರ್, ಉಪಾಧ್ಯಕ್ಷ ಎಂ.ಮುತ್ತುರಾಜು, ಕಾರ್ಯದರ್ಶಿ ಜಿ.ಎನ್.ಸಂಪತ್ ಅವರನ್ನು ಸನ್ಮಾನಿಸಲಾಯಿತು. ಬಿ.ಎಂ.ಮಹದೇವಸ್ವಾಮಿ, ಗೌಡಹಳ್ಳಿ ಮಹೇಶ್, ಸಿ.ನಾಗರಾಜ್, ಸಿ.ಸಿದ್ದರಾಜು, ಎನ್.ಕೃಷ್ಣ ಇತರರಿದ್ದರು.
- ಯಳಂದೂರು ತಾಲೂಕು ವಕೀಲರ ಸಂಘ
- ಅಧ್ಯಕ್ಷರಾಗಿ ಎಂ.ಜೈಶಂಕರ್, ಉಪಾಧ್ಯಕ್ಷರಾಗಿ ಎಂ.ಮುತ್ತುರಾಜು, ಕಾರ್ಯದರ್ಶಿಯಾಗಿ ಜಿ.ಎನ್.ಸಂಪತ್ ಅವಿರೋಧವಾಗಿ ಆಯ್ಕೆ
ಯಳಂದೂರು: ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ಜೈಶಂಕರ್, ಉಪಾಧ್ಯಕ್ಷರಾಗಿ ಎಂ.ಮುತ್ತುರಾಜು, ಕಾರ್ಯದರ್ಶಿಯಾಗಿ ಜಿ.ಎನ್.ಸಂಪತ್ ಅವಿರೋಧವಾಗಿ ಆಯ್ಕೆಯಾದರು.
ಇದಕ್ಕೂ ಮುನ್ನ ವಕೀಲರ ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಗೌಡಹಳ್ಳಿ ಮಹೇಶ್ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧ ಸಭೆ ನಡೆಯಿತು. ಸಭೆಯಲ್ಲಿ ಸರ್ವ ಸದಸ್ಯರು ಅವಿರೋಧ ಆಯ್ಕೆಗೆ ಸಹಮತ ಸೂಚಿಸಿದ್ದರಿಂದ ಅಂತಿಮವಾಗಿ ಜೈಶಂಕರ್ ಅಧ್ಯಕ್ಷರಾಗಿಯೂ, ಎಂ.ಮುತ್ತುರಾಜು ಬೂದಿತಿಟ್ಟು ಉಪಾಧ್ಯಕ್ಷರಾಗಿ, ಜಿ.ಎನ್.ಸಂಪತ್ ಕಾರ್ಯದರ್ಶಿಯಾಗಿ, ಮೇಘಾ ಜಂಟಿ ಕಾರ್ಯದರ್ಶಿಯಾಗಿ, ರಂಜಿತಾ ಖಜಾಂಚಿಯಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳಿಗೆ ಹಿರಿಯ ವಕೀಲ ಬಿ.ಎಂ.ಮಹದೇವಸ್ವಾಮಿ ಪ್ರತಿಜ್ಞಾ ವಿಧಿ ಬೋಧಿಸಿದರು.
ನೂತನ ಅಧ್ಯಕ್ಷ ಎಂ.ಜೈಶಂಕರ್ ಮಾತನಾಡಿ, ವಕೀಲರು ಹಾಗೂ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಸಂಘವನ್ನು ಮಾದರಿಯಾಗಿ ರೂಪಿಸಲು ಶ್ರಮಿಸಲಾಗುವುದು ಎಂದರು.
ಉಪಾಧ್ಯಕ್ಷ ಎಂ.ಮುತ್ತುರಾಜು ಮಾತನಾಡಿ, ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಸದಸ್ಯರ ನಿರೀಕ್ಷೆಯನ್ನೂ ಮೀರಿ ಸಂಘದ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲಾಗುವುದು ಎಂದರು.
ಕಾರ್ಯದರ್ಶಿ ಜಿ.ಎನ್.ಸಂಪತ್ ಮಾತನಾಡಿ, ಯಳಂದೂರು ವಕೀಲರ ಸಂಘವನ್ನು ಮಾದರಿಯನ್ನಾಗಿ ರೂಪಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಸಂಘವನ್ನು ಬಲಪಡಿಸಲಾಗುವುದು ಎಂದರು.
ವಕೀಲರಾದ ಬಿ.ಎಂ.ಮಹದೇವಸ್ವಾಮಿ, ಸಿ.ನಾಗರಾಜ್, ಸಿ.ಸಿದ್ದರಾಜು, ಎನ್.ಕೃಷ್ಣ, ರಾಜಣ್ಣ, ಸಿ.ಮಹದೇವಸ್ವಾಮಿ, ಶ್ರೀನಿವಾಸಮೂರ್ತಿ, ಶಶಿಧರ, ರವೀಶ, ಅಶ್ವಿನ್ ಕುಮಾರ್, ಎಂ.ನಾಗರಾಜ್, ನಾಗರತ್ನಾ, ಪರಶಿವಮೂರ್ತಿ, ನಂಜುಂಡಸ್ವಾಮಿ, ಕಾಂತರಾಜು, ಚಂದನಾ, ಎಂ.ಕುಮಾರಸ್ವಾಮಿ, ಶಾಂತರಾಜು, ಆರ್.ಕುಮಾರಸ್ವಾಮಿ ಉಪಸ್ಥಿತರಿದ್ದರು.