ಪ್ರಾಥಮಿಕ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ Teachers' Association
ಕೆಜಿಎಫ್: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲ ಸ್ಥಾನಗಳಿಗೆ ಶಿಕ್ಷಕರು ಅವಿರೋಧವಾಗಿ ಆಯ್ಕೆಯಾದರು.
ತಾಲೂಕು ಶಿಕ್ಷರ ಸಂಕ್ಕೆ ಚುನಾವಣೆ ನಿಗದಿಯಾಗಿತ್ತು. ಎಲ್ಲ ಸ್ಥಾನಗಳಿಗೆ ಕೇವಲ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ತ್ಯಾಗರಾಜ್, ಕಾರ್ಯದರ್ಶಿಯಾಗಿ ಪಿ.ವಿ. ಶ್ರೀನಿವಾಸ್, ಖಂಜಾಂಚಿಯಾಗಿ ಟಿ. ಶ್ರೀನಿವಾಸ್, ಮಹಿಳಾ ಉಪಾಧ್ಯಕ್ಷರಾಗಿ ಭಾರತಿ, ಸಹ ಕಾರ್ಯದರ್ಶಿಯಾಗಿ ಛಾಯಾದೇವಿ, ಜಿಲ್ಲಾ ಪ್ರತಿನಿಧಿಗಳಾಗಿ ನಾಗವೇಣಿ, ಜಿ.ಶ್ರೀನಿವಾಸಮೂರ್ತಿ ಆಯ್ಕೆಯಾಗಿದ್ದಾರೆ.
ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಎಲ್. ನರಸಿಂಹಮೂರ್ತಿ ಮಾತನಾಡಿ, 5 ವರ್ಷಗಳ ಅವಧಿಯಲ್ಲಿ ಎರಡುವರೆ ವರ್ಷಗಳು ನಾರಾಯಣಸ್ವಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದು, ಉಳಿದ ಅವಧಿಗೆ ಮತ್ತೋರ್ವ ಸದಸ್ಯರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಈಗಾಗಲೇ ಎಲ್ಲರ ಸಮ್ಮುಖದಲ್ಲಿ ತೀಮಾರ್ನಿಸಲಾಗಿದೆ ಎಂದರು.
ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಪಿ.ವಿ.ಶ್ರೀನಿವಾಸ್ ಮಾತನಾಡಿದರು. ನೌಕರರ ಸಂಘದ ಎಸ್.ಕೆ. ಕೃಷ್ಣಮೂರ್ತಿ, ರವಿಚಂದ್ರನ್ ನಾಯ್ಡು, ವಿವಿಧ ವೃಂದ ಸಂಘಗಳ ಅಧ್ಯಕ್ಷರಾದ ಮಾಲತೇಶ್, ಡಾ.ಬಾಬು, ಅಶ್ವತ್ಥ್, ಗಂಗಾಧರ್, ಸುಬ್ರಮಣಿ, ಅಂಬಿಕಾ, ಮಲ್ಲಿಕಾ, ಆನಂದ ಕುಮಾರ್, ಎಲ್ಐಸಿ ಶ್ರೀನಿವಾಸ್ ದವಣೇಶ್, ಕೆ.ವಿ.ಆನಂದ್, ಕೃಷ್ಣಪ್ಪ, ನಾರಾಯಣಸ್ವಾಮಿ ಇದ್ದರು.