ನೆಲಮಂಗಲ ತಾಲೂಕಿನ ಬೂದಿಹಾಲ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬೂದಿಹಾಲ್ ಮಧುಕುಮಾರ್, ಉಪಾಧ್ಯಕ್ಷರಾಗಿ ವೆಂಕಟೇಶ್ ಅವಿರೋಧ ಆಯ್ಕೆಯಾದರು. ಸಂದ ನಿಕಟಪೂರ್ವ ಅಧ್ಯಕ್ಷೆ ಭಾಗ್ಯಮ್ಮರಮೇಶ್ , ಉಪಾಧ್ಯಕ್ಷೆ ಲಕ್ಷ$್ಮಮ್ಮ, ನಿರ್ದೇಶಕರಾದ ಆರ್.ಗಿರೀಶ್, ಚಂದ್ರಶೇಖರ್, ನಾಗರಾಜು, ತಿಮ್ಮರಾಯಪ್ಪ, ಕೃಷ್ಣಪ್ಪ ಇದ್ದರು.
ನೆಲಮಂಗಲ : ತಾಲೂಕಿನ ಬೂದಿಹಾಲ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಅಧ್ಯಕ್ಷರಾಗಿ ಬೂದಿಹಾಲ್ ಮಧುಕುಮಾರ್, ಉಪಾಧ್ಯಕ್ಷರಾಗಿ ವೆಂಕಟೇಶ್ ಅವಿರೋಧ ಆಯ್ಕೆಯಾದರು.
ಫೆ.14ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಧುಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿ ಭಾಸ್ಕರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಬೂದಿಹಾಲ್ ಮಧುಕುಮಾರ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಉತ್ತಮ ಆಡಳಿತ ನೀಡಲಾಗುವುದು. ವಿಶೇಷವಾಗಿ ಶಾಸಕರ ಸಹಕಾರದಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆ. ಈಗಾಗಲೇ ಸಂಘದಿಂದ ವಿವಿಧ ಗ್ರಾಮದಲ್ಲಿ ಪಡಿತರ ವಿತರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪಡಿತರ ವಿತರಣೆ ಮಾಡಲು ಕಟ್ಟಡ ನಿಮಾರ್ಣ ಮಾಡುವ ಗುರಿ ಹೊಂದಿದ್ದೇವೆ ಎಂದರು.
ನಿರ್ದೇಶಕರಾದ ರಾಮಯ್ಯ, ನರಸಿಂಹಮೂರ್ತಿ, ನಳಿನಾ, ಸಿಇಒ ಉಮೇಶ್ , ಸಲಹೆಗಾರ ಲಕ್ಷಿ$್ಮನಾರಾರಣ, ಸಿಬ್ಬಂದಿ ನಾಗರಾಜು, ಲಕ್ಷ$್ಮಮ್ಮ, ಗ್ರಾಪಂ ಮಾಜಿ ಸದಸ್ಯ ಆನಂದ್ಕುಮಾರ್, ಮುನಿರಾಜು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ನಾಗರಾಜು, ಮುಖಂಡ ತಿಮ್ಮೇಗೌಡ, ರವಿ, ಬೂದಿಹಾಲ್ಕಿಟ್ಟಿ, ಪ್ರಕಾಶ್, ವೇಣುಗೋಪಾಲ್, ರಮೇಶ್, ಯಲ್ಲಪ್ಪ, ಕೆಂಪಯ್ಯ ಇದ್ದರು.