Unknown person dies after falling from a cliff
ಚಿಂತಾಮಣಿ: ಮುರಗಮಲ್ಲಾ ಗ್ರಾಮದ ಬಂಡೆ ಮೇಲೆ ಮಲಗಿದ್ದ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ. ತರಕಾರಿ ಅಂಗಡಿ ಮುಂಭಾಗದ ಬಂಡೆ ಮೇಲೆ ವ್ಯಕ್ತಿ ಮಲಗಿದ್ದ. ಶನಿವಾರ ಸಂಜೆ ಎಬ್ಬಿಸಿದರೂ ಎದ್ದೇಳಲಿಲ್ಲ.
ರಾತ್ರಿ 9ರ ಸಮಾರಿನಲ್ಲಿ ನೋಡಿದಾಗ ಆತ ಬಂಡೆ ಮೇಲಿಂದ ಬಿದ್ದು ಮುಖಕ್ಕೆ ಗಾಯವಾಗಿತ್ತು, ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅವರು ಬಂದು ನೋಡಿದಾಗ ಆತ ಮೃತಪಟ್ಟಿರುವುದು ಗೊತ್ತಾಯಿತು ಎಂದು ಪ್ರತ್ಯಕ್ಷದರ್ಶಿ ಮಾಲೀನ್ ತಾಜ್ ತಿಳಿಸಿದರು.
ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಶವ ಸಾಗಿಸಲಾಗಿದ್ದು, ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.