ಪ್ರಮುಖ ಮುಖ್ಯಾಂಶಗಳು
ವಿಜಯವಾಣಿ: ಯುನಿವರ್ಸಲ್ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್(ಯುಜಿಐ)ಬೆಂಗಳೂರುವತಿಯಿಂದ ಆವಿಷ್ಕಾರ 2026 ವಿಜ್ಞಾನೋತ್ಸವಮತ್ತು ಕಾಮರ್ಸ್ ಕಾರ್ನಿವಲ್ನಡೆಯಿತು.ವಿದ್ಯಾರ್ಥಿಗಳಲ್ಲಿವೈಜ್ಞಾನಿಕ ಮನೋಭಾವ,ನಾವೀನ್ಯತೆ,ಸೃಜನಶೀಲತೆ,ಉದ್ಯಮಶೀಲತೆಮತ್ತು ನಾಯಕತ್ವ ಗುಣಗಳನ್ನುಬೆಳೆಸುವ ಉದ್ದೇಶದಿಂದ ಈಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ65 ಶಾಲೆಗಳ110ಕ್ಕೂಹೆಚ್ಚು ತಂಡಗಳು ವಿಜ್ಞಾನೋತ್ಸವಹಾಗೂ 50 ತಂಡಗಳುಕಾಮರ್ಸ್ ಕಾರ್ನಿವಲ್‌ನಲ್ಲಿಪಾಲ್ಗೊಂಡಿದ್ದವು.ವಿದ್ಯಾರ್ಥಿಗಳುವೈಜ್ಞಾನಿಕ ಮಾದರಿಗಳು,ಪ್ರಯೋಗಗಳು,ತಂತ್ರಜ್ಞಾನಆಧಾರಿತ ಪರಿಕಲ್ಪನೆಗಳು,ನವೀನ ಆವಿಷ್ಕಾರಗಳು,ವ್ಯವಹಾರ ಮಾದರಿಗಳು,ಉದ್ಯಮಶೀಲತಾಕಲ್ಪನೆಗಳು ಹಾಗೂ ಸಮಕಾಲೀನಸಮಸ್ಯೆಗಳಿಗೆ ಸೃಜನಾತ್ಮಕಪರಿಹಾರಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿವಿಶ್ವ ಒಕ್ಕಲಿಗರ ಪೀಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿಸಾನ್ನಿಧ್ಯ ವಹಿಸಿದ್ದರು.ಎಚ್‌ಎಎಲ್ನಿವೃತ್ತ ಕಾರ್ಯನಿರ್ವಾಹ ನಿರ್ದೆಶಕಸಿ. ವೇಣುಗೋಪಾಲ್, ಡಿಡಿಪಿಐ ಡಾ.ಜಯಪ್ರಕಾಶ್, ಸಿಬಿಎಸ್‌ಸಿಶಿಕ್ಷಣ ಸಚಿವಾಲಯದ ಅಧೀನ ಕಾರ್ಯದರ್ಶಿಅನಿತಾ ಜೆ.ಸಾಸ್ವೆನ್ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.ಯುಜಿಐ ಅಧ್ಯಕ್ಷಆರ್.ಉಪೇಂದ್ರಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.ನಿರ್ದೇಶಕಿ ಡಾ.ಮೀರಾ ಕೃಷ್ಣಪ್ಪಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳನ್ನುಉದ್ದೇಶಿಸಿ ಮಾತನಾಡಿದ ಗಣ್ಯರು,ವೈಜ್ಞಾನಿಕಮನೋಭಾವ, ಕುತೂಹಲ,ನಾವೀನ್ಯತೆಹಾಗೂ ಸಮಸ್ಯೆಗಳನ್ನು ಪರಿಹರಿಸುವಸಾಮರ್ಥ್ಯವನ್ನು ಶಾಲಾ ಹಂತದಿಂದಲೇಬೆಳೆಸಬೇಕು ಎಂದು ಕರೆ ನೀಡಿದರು.ವಿದ್ಯಾರ್ಥಿಗಳುಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರಸೀಮಿತರಾಗದೆ,ಪ್ರಶ್ನಿಸುವ,ಪ್ರಯೋಗಿಸುವ,ಅನ್ವೇಷಿಸುವಹಾಗೂ ತಮ್ಮ ಆಲೋಚನೆಗಳನ್ನುಪ್ರಾಯೋಗಿಕ ಪರಿಹಾರಗಳಾಗಿ ರೂಪಿಸುವಮನೋಭಾವವನ್ನು ಬೆಳೆಸಿಕೊಳ್ಳಬೇಕುಎಂದು ಸಲಹೆ ನೀಡಿದರು.