Unity is essential to combat human trafficking. 
ರಾಜ್ಯ

ಮಾನವ ಕಳ್ಳ ಸಾಗಣೆೆ ತಡೆಗೆ ಒಗ್ಗಟ್ಟು ಅಗತ್ಯ

ಕೋಲಾರ ಡೆಸ್ಕ್
ಕೆಜಿಎಫ್: ಮಾನವ ಕಳ್ಳ ಸಾಗಣೆೆ ಮಾನವ ಹಕ್ಕುಗಳ ಉಲ್ಲಂನೆಯಾಗಿದೆ. ಈ ಸಮಸ್ಯೆ ತಡೆಗಟ್ಟಲು ಎಲ್ಲರೂ ಸೇರಿ ಶ್ರಮಿಸಬೇಕು ಎಂದು ಅಪರ ಸಿವಿಲ್​ ನ್ಯಾಯಧೀಶೆ ಹಾಗೂ ತಾಲೂಕು ಕಾನೂನು ಸೇವೆಗಳ ಸದಸ್ಯೆ ಕೆ.ಶೆಮಿದಾ ತಿಳಿಸಿದರು.
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂ, ಪೊಲೀಸ್​ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯರಿಗೆ ಮೋಸ, ಬೆದರಿಕೆ ಅಥವಾ ಬಲವಂತದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು, ಲೈಂಗಿಕ ಶೋಷಣೆ ಅಥವಾ ಇತರೆ ಕೆಲಸ ಮಾಡಿಸುವುದು, ಅಂಗಾಂಗ ಕಳ್ಳಸಾಗಣೆಯಂತಹ ಅಮಾನವೀಯ ಚಟುವಟಿಕೆಗಳಿಗೆ ಬಳಸುವುದೇ ಮಾನವ ಕಳ್ಳ ಸಾಗಣೆಯಾಗಿದೆ ಎಂದರು.
ಮಾನವ ಕಳ್ಳ ಸಾಗಣೆ ತಡೆಗಟ್ಟಲು ಸರ್ಕಾರ, ಪೊಲೀಸ್​ ಇಲಾಖೆ, ಸಾಮಾಜಿಕ ಸಂಟನೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಾನವ ಹಕ್ಕುಗಳ ಉಲ್ಲಂನೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಡಿವೈಎಸ್ಪಿ ಲಕ್ಷ$್ಮಯ್ಯ ಮಾತನಾಡಿ, ಮಕ್ಕಳ ರಕ್ಷಣಾ ನೀತಿ 2016 ಪರಿಷತ ಮತ್ತು 2022ರ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪಾಲಿಸಬೇಕಾದ ನಿಯಮ ಕುರಿತು ಪ್ರತಿ ಶಾಲೆ, ಕಾಲೇಜು ತನ್ನದೇ ಆದ ಲಿಖಿತ ಮಕ್ಕಳ ರಕ್ಷಣಾ ನೀತಿ ಹೊಂದಿರಬೇಕು. ಶಾಲಾ ಆವರಣದಲ್ಲಿ ದೈಹಿಕ, ಮಾನಸಿಕ, ಲೈಂಗಿಕ, ಭಾವನಾತ್ಮಕ ಹಿಂಸೆ, ಬೆದರಿಕೆ, ರ್ಯಾಗಿಂಗ್​ ಹಾಗೂ ತಾರತಮ್ಯಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ತಾಲೂಕು ವಕೀಲರ ಸಂದ ಅಧ್ಯಕ್ಷ ಎಸ್​.ಎನ್​.ರಾಜಗೋಪಾಲಗೌಡ ಮಾತನಾಡಿ, ಪ್ರಪಂಚದ ಎರಡನೇ ಅತಿ ದೊಡ್ಡ ದಂಧೆ ಎಂದೇ ಪರಿಗಣಿಸಲಾಗುತ್ತಿರುವ ಮಾನವ ಕಳ್ಳ ಸಾಗಣೆ ರಾಜ್ಯದಲ್ಲೂ ನಿರಾತಂಕವಾಗಿ ನಡೆಯುತ್ತಿದೆ. ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ 763 ಪ್ರಕರಣ ದಾಖಲಾಗಿವೆ. ಇವುಗಳು ಅಧಿಕೃತವಾಗಿ ದಾಖಲಾಗಿರುವ ಪ್ರಕರಣಗಳಾದರೆ ಕಾನೂನಿನ ಕಣ್ಣು ತಪ್ಪಿಸಿ ದೊಡ್ಡ ಮಟ್ಟದಲ್ಲಿ ಈ ಜಾಲ ಹರಡಿಕೊಂಡಿದೆ. ಹಲವು ಕಾರಣಗಳಿಂದಾಗಿ ನಡೆಯುತ್ತಿರುವ ಮಾವನ ಕಳ್ಳ ಸಾಗಾಣಿಕೆಗೆ ಮಹಿಳೆಯರು, ಅಪ್ರಾಪ್ತರು, ಬಡವರು ಬಲಿಯಾಗುತ್ತಿದ್ದಾರೆ. ಈ ದಂಧೆ ನಿಯಂತ್ರಣ ಮಾಡಲು ಪೊಲೀಸ್​ ಇಲಾಖೆ ಮುಂದಾಗಬೇಕೆಂದು ತಿಳಿಸಿದರು.
ಒಂದನೇ ಅಪರ ಸಿವಿಲ್​ ನ್ಯಾಯಾಧೀಶೆ ವಿ.ಅಶ್ವಿನಿ, ೇತ್ರ ಶಿಕ್ಷಣಾಧಿಕಾರಿ ಬಿ.ಜಿ. ನಾರಾಯಣಸ್ವಾಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್​.ನಾಗರಾಜ್​, ತಾಲೂಕು ಸರ್ಕಾರಿ ನೌಕರರ ಸಂದ ಅಧ್ಯಕ್ಷ ಎಲ್​.ನರಸಿಂಹಮೂರ್ತಿ ಇದ್ದರು.