ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ  
ರಾಜ್ಯ

ರಾಜ್ಯದ ಗುತ್ತಿಗೆದಾರರಿಗೆ ಔತಣಕೂಟ ಕೊಟ್ಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ- H.D. Kumaraswamy hosted a banquet for contractors

ಬೆಂಗಳೂರು: ದೆಹಲಿಯಲ್ಲಿ ಸೆ.15ರಂದು ಆಯೋಜಿಸಿದ್ದ ‘ಬೌಮಾ ಕಾನ್‌ಎಕ್ಸ್‌ಪೋ ಪ್ರದರ್ಶನ’ಕ್ಕೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ.ಎಂ. ನಂದಕುಮಾರ್ ನೇತೃತ್ವದಲ್ಲಿ 65 ಗುತ್ತಿಗೆದಾರರ ಭೇಟಿ ನೀಡಿದರು.
ಎಕ್ಸ್‌ಪೋದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮಳಿಗೆಗಳಿಗೆ ಭೇಟಿ ನೀಡಿ ಉಪಯುಕ್ತ ಮಾಹಿತಿ ಪಡೆದರು. ಕೆಲ ಗುತ್ತಿಗೆದಾರರು ಯಂತ್ರೋಪಕರಣಗಳ ಖರೀದಿಸಲು ಮುಂದಾದರು.
ಸೆ.16ರಂದು ಗುತ್ತಿಗೆದಾರರು ರಾಷ್ಟ್ರಪತಿ ಭವನ ವೀಕ್ಷಿಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ತಮ್ಮ ಕಚೇರಿಗೆ ಔತಣಕೂಟಕ್ಕೆ ಆಹ್ವಾನಿಸಿದ ಗುತ್ತಿಗೆದಾರರಿಗೆ ಭೋಜನ ವ್ಯವಸ್ಥೆ ಮಾಡಿದರು. ಈ ವೇಳೆ ಗುತ್ತಿಗೆದಾರರೊಂದಿಗೆ ಸೌಹಾರ್ದಯುತವಾಗಿ ಸಮಯ ಕಳೆದರು.
ಸೆ.17ರಂದು ಎಚ್‌ಡಿಕೆ ಅವರ ಶಿಫಾರಸ್ಸಿನ ಮೇರೆಗೆಸಂಸತ್ತು ಭವನ, ಪ್ರಧಾನಮಂತ್ರಿಗಳ ವಸ್ತು ಸಂಗ್ರಾಹಲಯ ವೀಕ್ಷಿಸಿದರು. ಪ್ರವಾಸ ಯಶಸ್ವಿಗೆ ಕಾರಣೀಭೂತರಾದ ಕೇಂದ್ರ ಸಚಿವರಿಗೆ ಸೇರಿ ಹಲವರಿಗೆ ಗುತ್ತಿಗೆದಾರರು ಧನ್ಯವಾದ ಸಲ್ಲಿಸಿದರು.