ಬಸರೆಡ್ಡಿ ಅನಪುರ  
ರಾಜ್ಯ

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅನಪುರ ಆಗ್ರಹ
  • ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ
ಯಾದಗಿರಿ: ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ನೀಟ್​ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಡಲೇ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಬಸರೆಡ್ಡಿ ಪಾಟೀಲ್​ ಅನಪುರ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯಿಂದ ಮನನೊಂದ 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಆದರೂ ಪ್ರಧಾನಿ ಸೇರಿ ಕೇಂದ್ರದ ಯಾರೋಬ್ಬರು ಸಾಂತ್ವನ ಕೂಡ ಹೇಳಲಿಲ್ಲ, ಅವರ ಮನೆಗಳಿಗೆ ಭೇಟಿ ನೀಡಲಿಲ್ಲ ಎಂದು ದೂರಿದರು. ದೇಶದಲ್ಲಿ ಪೇಪರ್​ ಲೀಕ್​ ಮಾಫಿಯಾ ವೆಂಡರ್​ಗಳು, ಅಧಿಕಾರಿಗಳು ಮತ್ತು ರಾಜಕೀಯ ರಕ್ಷಣೆ ಜಾಲಗಳೊಂದಿಗೆ ಅವರಿಗಿರುವ ಸಂಪರ್ಕದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ರಾಷ್ಟ್ರೀಯ ಕಾಂಗ್ರೆಸ್​ ಪಕ್ಷ  ರಾಹುಲ್​ ಗಾಂಧಿ ನೇತೃತ್ವದಲ್ಲಿ ದೇಶದ ಪ್ರಮುಖ 28 ನಗರಗಳಲ್ಲಿ ಛಾತ್ರೋನ್​ ಕಿ ಗೂಂಜ್​ ಎಂಬ ದೇಶವ್ಯಾಪಿ ವಿಧ್ಯಾರ್ಥಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಬೆಂಗಳೂರು ನಗರವೂ ಸೇರಿದೆ ಎಂದ ಅವರು ಅನೇಕ ಕಡೆ ನೇರವಾಗಿ ವಿದ್ಯಾರ್ಥಿಗಳೊಂದಿಗೆ ರಾಹಯಲ್​ ಗಾಂಧಿ ಅವರು ಚರ್ಚೆ ನಡೆಸಲಿದ್ದಾರೆ ಎಂದರು. ಇದರ ಮುಖ್ಯ ಉದ್ದೇಶ ದೇಶದಲ್ಲಿ ಸರಣಿಯಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ, ಪರೀಾ ಭ್ರಷ್ಟಾಚಾರ ಮತ್ತು ಪರೀಾ ಮಂಡಳಿಗಳ ವೈಫಲ್ಯದ ವಿರುದ್ಧ ವಿಧ್ಯಾರ್ಥಿಗಳಲ್ಲಿರುವ ಆಕ್ರೋಶವನ್ನು ಒಂದು ಸಂಘಟಿಕ ಚಳುವಳಿಯನ್ನಾಗಿ ರೂಪಿಸುವುದಾಗಿದೆ ಎಂದರು.