ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಗುರುವಾರ ದಸಂಸ ಜಿಲ್ಲಾ ಘಟಕದ ಪದಾಽಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಽಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು. ಶಿವಪುತ್ರ ಜವಳಿ, ಚಂದಪ್ಪ ಮುನಿಯಪ್ಪನವರ್, ಶಿವಲಿಂಗ ಹಸನಾಪುರ, ಮರೆಪ್ಪ ಕ್ರಾಂತಿ, ಮಲ್ಲಪ್ಪ ಪೂಜÁರಿ ಕುರುಕುಂದ, ದೊಡ್ಡಪ್ಪ ಕಾಡಿಂಗೇರ ಇತರರಿದ್ದರು. 
ರಾಜ್ಯ

ಕೇಂದ್ರ ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ದಸಂಸ ಜಿಲ್ಲಾ ಘಟಕ ಕಾರ್ಯಕರ್ಯರ ಆಗ್ರಹ
  • ಡಿಸಿ ಮೂಲಕ ಪ್ರಧಾನ ಮಂತ್ರಿಗೆ ಮನವಿ
ಯಾದಗಿರಿ : ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ದೇಶದ ಇನ್ನಿತರ ಪರೀಕ್ಷೆಗಳ ಅವ್ಯವಸ್ಥೆ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಗುರುವಾರ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ ಬಣ) ಜಿಲ್ಲಾ ಘಟಕದ ಪದಾಽಕಾರಿಗಳು ಮತ್ತು ಕಾರ್ಯಕರ್ತರು ಜಿ¯್ಲÁಽಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ವಿವಿಧ ಪರೀಕ್ಷಾ ಅಕ್ರಮಗಳಿಗೆ ನೈತಿಕ ಹೋಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಇಲ್ಲವಾದರೆ ಅವರನ್ನು ಸಂಪುಟದಿAದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಇದೇ ವಿಷಯಕ್ಕಾಗಿ ಕಳೆದ ೧೯ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸುವುದಾಗಿ ಅವರು ಹೇಳಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಽಕಾರಿಗಳಾದ ಚಂದಪ್ಪ ಮುನಿಯಪ್ಪನವರ್, ಶಿವಲಿಂಗ ಹಸನಾಪುರ, ಮರೆಪ್ಪ ಕ್ರಾಂತಿ, ಮಲ್ಲಪ್ಪ ಪೂಜÁರಿ ಕುರುಕುಂದ, ದೊಡ್ಡಪ್ಪ ಕಾಡಿಂಗೇರ, ದೇವು ಹುಲಕಲï, ಶರಣಪ್ಪ ಮಾಲಹಳ್ಳಿ, ಶರಬಣ್ಣ ದೋರನಹಳ್ಳಿ, ತಾಯಪ್ಪ ಭಂಡಾರಿ, ಭೀಮಶಂಕರ ಗುಂಡಹಳ್ಳಿ, ರಂಗಸ್ವಾಮಿ ಕೊಂಕಲï, ಶರಣಪ್ಪ ಕುರುಕುಂದಿ, ಎಂ ಪಟೇಲï, ಸಂತೋಷï, ನಾಗರಾಜï, ಚನ್ನಪ್ಪ ದೇವಪುರ, ವೆಂಕಟೇಶ ದೇವಪುರ, ಖಾಜÁ ಅಜ್ಮೀರï, ಹನುಮಂತ ದೇವಪುರ, ಹೊನ್ನಪ್ಪ ಕುರಕುಂದಿ, ದಶರಥ ಗುಂಡಳ್ಳಿ, ಮಲ್ಲಪ್ಪ ಗುಂಡಳ್ಳಿ, ಚಂದ್ರು, ನಿಂಗಪ್ಪ ಖಾನಾಪುರ ಇತರರಿದ್ದರು.