ಆನೇಕಲ್ನ ಶ್ರೀಸಾಯಿರಾಮ್ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಯೂನಿಯನ್ ಬ್ಯಾಂಕ್ ತನ್ನ 994ನೇ ಶಾಖೆ ಉದ್ಘಾಟಿಸಲಾಯಿತು. ಸಾಯಿರಾಮ್ ಶಿಕ್ಷಣ ಸಂಸ್ಥೆಗಳ ಸಿ.ಬಿ.ಒ.ಸತೀಶ್ಕುಮಾರ್, ಸಾಯಿರಾಮ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆದ ಸಿಇಒ ಡಾ. ಸಾಯಿ ಪ್ರಕಾಶ್ ಲಿಯೋ ಮುತ್ತು, ಕಾರ್ಯಕಾರಿ ಅಧಿಕಾರಿ ಡಾ.ಆರ್.ಅರುಣ್ ಕುಮಾರ್, ಮುಖ್ಯ ಲೆಕ್ಕಪತ್ರಾಧಿಕಾರಿ ಸುಬ್ಬರಾಜು ಇತರರಿದ್ದರು.
ಆನೇಕಲ್ : ಕಾಲೇಜು ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಗೆ ಸಹಾಯ ಆಗಬೇಕು ಎನ್ನುವ ನಿಟ್ಟಿನಲ್ಲಿ ಯೂನಿಯನ್ ಬ್ಯಾಂಕ್ ಆನೇಕಲ್ ಶ್ರೀಸಾಯಿರಾಮ್ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ 994ನೇ ಶಾಖೆಯನ್ನು ಸೋಮವಾರ ಉದ್ಘಾಟಿಸಿತು.
ಈ ವೇಳೆ ಮಾತನಾಡಿದ ಸಾಯಿರಾಮ್ ಶಿಕ್ಷಣ ಸಂಸ್ಥೆಗಳ ಸಿಇಒ ಸತೀಶ್ಕುಮಾರ್, ಸಾಯಿ ರಾಮ್ ಕಾಲೇಜಿಗೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಬಂದು ಶಿಕ್ಷಣ ಪಡೆಯುತ್ತಿದ್ದು, ಯಾವುದೇ ವಿದ್ಯಾರ್ಥಿಗಳು ಹಾಗೂ ಪಾಲಕರು ಇಲ್ಲಿಗೆ ಬಂದಾಗ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದರು.
ಹೊಸ ಶಾಖೆಯು ಅತ್ಯಾಧುನಿಕ ಸ್ವಯಂ ಸೇವಾ ಬ್ಯಾಂಕಿಂಗ್ ಸೌಲಭ್ಯ ಹೊಂದಿದ್ದು, ಗ್ರಾಹಕರಿಗೆ ಸುಲಭ ಮತ್ತು ವೇಗದ ಬ್ಯಾಂಕಿಂಗ್ ಅನುಭವ ನೀಡಲಿದೆ. 1904ರಿಂದಲೂ ವಿಶ್ವಾಸ ಮತ್ತು ಶ್ರೇಷ್ಠತೆ ಯೊಂದಿಗೆ ಸೇವೆ ಸಲ್ಲಿಸುತ್ತಿರುವ ಸಿಟಿ ಯೂನಿಯನ್ ಬ್ಯಾಂಕ್ ಈ ಹೊಸ ಶಾಖೆಯ ಮೂಲಕ ಈ ಭಾಗದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ನೀಡುವ ಗುರಿ ಹೊಂದಿದೆ ಎಂದರು.
ಸಾಯಿರಾಮ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆದ ಸಿಇಒ ಡಾ. ಸಾಯಿ ಪ್ರಕಾಶ್ ಲಿಯೋ ಮುತ್ತು ಮಾತನಾಡಿ, ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿರುವ ಸಿಟಿ ಯೂನಿಯನ್ ಬ್ಯಾಂಕ್ ಒಂದು ಶತಮಾನಕ್ಕೂ ಹೆಚ್ಚು ಕಾಲ ನಂಬಿಕೆ ಮತ್ತು ಪರಂಪರೆ ಮುಂದುವರಿಸಿಕೊಂಡು ಬಂದಿದೆ ಎಂದರು.
ಸಂಸ್ಥೆಯ ಟ್ರಸ್ಟಿ ಮತ್ತು ಪಿ ಆರ್ ಓ ಕೆ. ಪಟೇಲ್, ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಷಡಾಕ್ಷರಪ್ಪ,ಸಿ.ಎ.ಎಂ ಕೆ. ಗಜೇಂದ್ರ, ಸಾಯಿರಾಮ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ ರಾಜು, ಬ್ಯಾಂಕಿನ ಪ್ರಾದೇಶಿಕ ಅಭಿವೃದ್ಧಿ ವ್ಯವಸ್ಥಾಪಕ ಶಂಕರ್ ಸುಬ್ರಮಣಿಯನ್, ಈನೋಕ್ ಜಾರ್ಜ್, ಶಾಖಾ ಮುಖ್ಯಸ್ಥ ಪ್ರದಿಪ್ ಎಚ್.ಬಿ, ರಿಲೇಶನ್ಶಿಪ್ ಮ್ಯಾನೇಜರ್ ರೋಹಿತ್ ರೆಡ್ಡಿ ಬಿ.ಎಸ್, ಬೊಮ್ಮಸಂದ್ರ ಶಾಖೆಯ ಮುಖ್ಯಸ್ಥ ಶರವಣನ್ ಎ. ಉಪಸ್ಥಿತರಿದ್ದರು.