Unidentified body found in agricultural ditch 
ರಾಜ್ಯ

ಕೃಷಿಹೊಂಡದಲ್ಲಿ ಅಪರಿಚಿತ ಶವ ಪತ್ತೆ

ಚಿಂತಾಮಣಿ: ಮುರಗಮಲ್ಲಾ ಗ್ರಾಮದ ಹೊರವಲಯದ ಕೃಷಿ ಹೊಂಡದಲ್ಲಿ ಶನಿವಾರ ಸುಮಾರು 45 ವರ್ಷ ವಯಸ್ಸಿನ ಅಪರಿಚಿತ ಶವ ಪತ್ತೆಯಾಗಿದೆ. ಗ್ರಾಮದ ಎಂ.ಕೆ.ನಾಗರಾಜ್​ ಶನಿವಾರ ಬೆಳಗ್ಗೆ ತೋಟದಲ್ಲಿ ಸುತ್ತಾಡಿಕೊಂಡು ಕೃಷಿ ಹೊಂಡದ ಬಳಿ ಬಂದಾಗ ಶವ ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಿಯರ ನೆರವಿನೊಂದಿಗೆ ಶವ ಹೊರತೆಗೆದು, ಮರಣೋತ್ತರ ಪರೀೆಗೆ ಕಳುಹಿಸಿದರು. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.