ಸೇಡಂನಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಉತ್ಸವ ಹಾಗೂ ಧರ್ಮಸಭೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರೂ ಆದ ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸಿದ್ಧವಿರ ಶಿವಾಚಾರ್ಯ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಡಾ.ಶರಣಪ್ರಕಾಶ ಪಾಟೀಲ್​, ಬಸವರಾಜ ಪಾಟೀಲ್​, ರಾಜಕುಮಾರ ಪಾಟೀಲ್​, ಶರಣು ಮೋದಿ ಇತರರಿದ್ದರು. 
ರಾಜ್ಯ

ಧರ್ಮದ ಇತಿಹಾಸ ಅರಿತುಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆ
  • ಸೇಡಂನಲ್ಲಿ ಅದ್ದೂರಿ ಬಸವ ಜಯಂತಿ, ಧರ್ಮಸಭೆ
ಸೇಡಂ: ಸಮಾಜದಲ್ಲಿನ ಪ್ರತಿಯೊಬ್ಬರೂ ಧರ್ಮದ ಇತಿಹಾಸ ಅರಿತುಕೊಳ್ಳುವುದು ಅವಶ್ಯವಾಗಿದ್ದು, ನಮ್ಮ ಸಂಸತಿ ಅರಿತಾಗ ಮಾತ್ರ ಯಶಸ್ವಿ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ಅಖಿಲ ಭಾರತ ವೀರಶೈವ&ಲಿಂಗಾಯತ ಮಹಾಸಭಾ ಅಧ್ಯಕ್ಷರೂ ಆದ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಮಾತೃಛಾಯ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ವೀರಶೈವ&ಲಿಂಗಾಯತ ಮಹಾಸಭಾ ಹಾಗೂ ಬಸವ ಜಯಂತ್ಯುತ್ಸವ ಸಮಿತಿಯಿಂದ ಆಯೋಜಿಸಿದ್ದ ಬಸವ ಜಯಂತಿ, ಸಾಮೂಹಿಕ ಲಿಂಗಪೂಜೆ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಸಮಾಜದಲ್ಲಿ ಅಂದಕಾರ, ಮೌಢ್ಯತೆ, ಅಸ್ಪಶ್ಯತೆ ಇತ್ತು, ಅದನ್ನು ಹೊಡೆದುಹಾಕುವ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಅವಿರತವಾಗಿ ಶ್ರಮಿಸಿದ್ದರು. ಕಲ್ಯಾಣದಲ್ಲಿನ ಅನುಭವ ಮಂಟಪಕ್ಕೆ 770 ಶರಣರನ್ನು ಕರೆತಂದು ಸಮಾನತೆಗಾಗಿ ವಚನ ಕ್ರಾಂತಿ ಮಾಡಿದ್ದರು. ಅಂತಹ ಮಹಾನ ವ್ಯಕ್ತಿಯ ಜಯಂತಿ ಸೇಡಂನಲ್ಲಿ ಸಾಮೂಹಿಕ ಲಿಂಗಪೂಜೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಿರುವುದು ಅವಿಸ್ಮರಣೀಯ ಎಂದರು.
ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇಂದಿನ ಸಮಾಜದಲ್ಲಿ ಜಾತಿಯ ಭೇದವಿಲ್ಲದೆ ಮನುಷ್ಯನಿಗೆ ಇಷ್ಟಲಿಂಗ ಪೂಜೆಯ ಅವಶ್ಯಕತೆ ಇದೆ. 12ನೇ ಶತಮಾನದ ವೈಚಾರಿಕ ಕ್ರಾಂತಿ ಸಾಮಾನ್ಯವಾದುದ್ದಲ್ಲ, ನುಡಿದಂತೆ ನಡೆದ ಶರಣರು ಅನುಭವ ಮಂಟಪದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು. ಸರ್ವರ ಸಹಮತದಿಂದ ಹೊರ ಹೊಮ್ಮಿರುವ ವಚನ ಸಾಹಿತ್ಯ ಸಮಾಜ ತಿದ್ದುವ ಶಕ್ತಿ ಹೊಂದಿದೆ ಎಂದು ತಿಳಿಸಿದರು.
ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ ಮಾತನಾಡಿದರು. ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸಿದ್ಧವಿರ ಶಿವಾಚಾರ್ಯ, ಶ್ರೀ ಪಂಚಾಕ್ಷರ ಸ್ವಾಮೀಜಿ, ತೊಟ್ನಳ್ಳಿಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಕರುಣೇಶ್ವರ ಶಿವಾಚಾರ್ಯ, ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯ, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶ್ರೀ ಅಭಿನವ ಗವಿಸಿದ್ಧಲಿಂಗೇಶ್ವರ ಶಿವಾಚಾರ್ಯ, ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಶ್ರೀ ಶಂಭುಲಿಂಗೇಶ್ವರ ಸ್ವಾಮೀಜಿ, ಶ್ರೀ ಚಿಕ್ಕಶಿವಲಿಂಗೇಶ್ವರ ದೇವರು, ಶ್ರೀ ಕೇದಾರಲಿಂಗ ದೇವರು ಸಾನ್ನಿಧ್ಯ, ಮಹಾಸಭಾ ತಾಲೂಕು ಅಧ್ಯಕ್ಷ ರಾಜಶೇಖರ ನೀಲಂಗಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ, ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ವೀರಶೈವ ಲಿಂಗಾಯತ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್​ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಮಹಾತ್ಮ ಬಸವೇಶ್ವರ ಚಾರಿಟೇಬಲ್​ ಟ್ರಸ್ಟ್​ ಅಧ್ಯಕ್ಷ ಶಿವಕುಮಾರ ಪಾಟೀಲ್​ ತೆಲ್ಕೂರ, ವೀರಶೈವ ಮಹಿಳಾ ಫೌಂಡೇಷನ್​ ಅಧ್ಯೆ ಚನ್ನಮ್ಮ ಪಾಟೀಲ್​, ಉತ್ಸವ ಸಮಿತಿ ಅಧ್ಯಕ್ಷ ಸಿದ್ದಣ್ಣಗೌಡ ಶೆಟ್ಟಿ, ಪ್ರಮುಖರಾದ ಡಾ.ಭಾಗ್ಯಶ್ರೀ ಪಾಟೀಲ್​, ಸಂತೋಷಿರಾಣಿ ಪಾಟೀಲ್​ ತೆಲ್ಕೂರ ಇತರರಿದ್ದರು.
ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಈಶ್ವರ ಖಂಡ್ರೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಯುವ ಟಕದಿಂದ ಬಸವ ಪುತ್ಥಳಿಯೊಂದಿಗೆ ಬಸವೇಶ್ವರ ವೃತ್ತದಿಂದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದವರೆಗೆ ಕಾರು ಮತ್ತು ಬೈಕ್​ ರ್ಯಾಲಿ ನಡೆಸಲಾಯಿತು. ಸಂಗಣ್ಣ ಅಲ್ದಿ ಸ್ವಾಗತಿಸಿದರು. ವೀರೇಶ ಹೂಗಾರ ನಿರೂಪಣೆ ಮಾಡಿ, ವಂದಿಸಿದರು.
2 ಸಾವಿರಕ್ಕೂ ಅಧಿಕ ಜನರಿಂದ ಲಿಂಗಪೂಜೆ
ಸೇಡಂನಲ್ಲಿ ವೀರಶೈವ&ಲಿಂಗಾಯತ ಮಹಾಸಭಾ ಹಾಗೂ ಬಸವ ಜಯಂತ್ಯುತ್ಸವ ಸಮಿತಿಯಿಂದ ಧರ್ಮ ಕಾರ್ಯಗಳ ಮೂಲಕ ಬಸವ ಜಯಂತಿ ಆಚರಿಸಲಾಯಿತು. ಯಾವುದೇ ವಾದ್ಯ ಮೇಳ, ಡಿಜೆ ಹಾಡಿಗೆ ಆಸ್ಪದ ನೀಡಲಿಲ್ಲ. ಸಂಜೆ ಮಾತೃಛಾಯ ಕಾಲೇಜು ಮೈದಾನದಲ್ಲಿ ಬಸವ ಉತ್ಸವ ಸಮಿತಿಯಿಂದ ತೊಟ್ನಳ್ಳಿಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಮ್ಮಿಕೊಳ್ಳಲಾಗಿತ್ತು. ಸುಮಾರು 2 ಸಾವಿರಕ್ಕೂ ಅಧಿಕ ಜನ ಪೂಜೆಯಲ್ಲಿ ಭಾಗಿಯಾಗಿ ಭಕ್ತಿ ಸಲ್ಲಿಸಿದರು.

ಮುಂದಿನ ವರ್ಷದ ಬಸವ ಜಯಂತಿ ವೇಳೆಗೆ ಬಸವಕಲ್ಯಾಣದಲ್ಲಿ 742 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪವನ್ನು ಲೋಕಾರ್ಪಣೆಗೊಳಿಸಲಾಗುವುದು. ಅಲ್ಲಿನ 770 ಕಂಬಗಳಿಗೆ ಶರಣರ ಹೆಸರನ್ನು ಹಾಕಿಸುವ ಮೂಲಕ ಇತಿಹಾಸ ಮರುಸ್ಥಾಪಿಸುವ ಕೆಲಸ ಮಾಡಲಾಗುತ್ತಿದೆ. ಇದರೊಟ್ಟಿಗೆ ಇಷ್ಟಲಿಂಗ ಪೂಜಾ ತರಬೇತಿ ಕೇಂದ್ರವೂ ಆರಂಭಿಸಲಾಗುತ್ತಿದೆ.