ಬುಕ್ಕಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಪಂದನ- 2026 ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪ್ರೊ.ಧರಣೇಂದ್ರ ಕುವಾರಿ, ನಿವೃತ್ತ್ತ ಪ್ರಾಂಶುಪಾಲ ಮಂಜುನಾಥ್, ಸಹಾಯಕ ಪ್ರಾಧ್ಯಾಪಕರಾದ ಎ.ಎಂ.ಸತೀಶ್ ಇತರರು ಇದ್ದರು. 
ರಾಜ್ಯ

ಪದವಿ ಶಿಕ್ಷಣ ಭವಿಷ್ಯದ ಅಡಿಗಲ್ಲು

 ಬುಕ್ಕಾಪಟ್ಟಣ :

ಪದವಿ ಶಿಕ್ಷಣ ಭವಿಷ್ಯದ ಅಡಿಗಲ್ಲು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ವಾಡದೆ ಅಧ್ಯಯನದಲ್ಲಿ ತೊಡಗಿದರೆ ನಿರ್ದಿಷ್ಟಗುರಿ ತಲುಪಲು ಸಾಧ್ಯ ಎಂದು ಬುಕ್ಕಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪ್ರೊ.ಧರಣೇಂದ್ರ ಕುವಾರಿ ಹೇಳಿದರು.

ಹೋಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಪಂದನ- 2026 ಕಾಲೇಜಿನ ಕ್ರೀಡೆ ಹಾಗೂ ಸಾಂಸ್ಕೃತಿಕ ವಿವಿಧ ಸಮಿತಿಗಳಿಗೆ ಚಾಲನೆ ನೀಡಿ ಮಾತನಾಡಿ, ಮೂರು ವರ್ಷಗಳ ಕಾಲೇಜು ಪದವಿ ಶಿಕ್ಷಣವು ವಿದ್ಯಾರ್ಥಿಗಳ ಜೀವನಕ್ಕೆ ಭದ್ರವಾದ ಅಡಿಗಲ್ಲಾಗುತ್ತದೆ.
 ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ, ಸ್ಪೋಕನ್ ಇಂಗ್ಲಿಷ್ ತರಬೇತಿ ಹಾಗೂ ಕಂಪ್ಯೂಟರ್ ಶಿಕ್ಷಣವನ್ನು ನಿರಂತರವಾಗಿ ನಡೆಸಲಾಗುವುದು ಎಂದರು.
ಹಿರಿಯ ಪ್ರಾಧ್ಯಾಪಕ ಡಾ.ಎಸ್.ಆರ್.ಹನುಮಂತರಾಯ ಕಾಲೇಜಿನ ಶೈಕ್ಷಣಿಕ ವಾತಾವರಣ ಮತ್ತು ಲಭ್ಯವಿರುವ ಸೌಲಭ್ಯಗಳ ಕುರಿತು ವಾಹಿತಿ ನೀಡಿದರು.
ನಿವೃತ್ತ್ತ ಪ್ರಾಂಶುಪಾಲ ಮಂಜುನಾಥ್, ಸಹಾಯಕ ಪ್ರಾಧ್ಯಾಪಕರಾದ ಎ.ಎಂ.ಸತೀಶ್, ಎನ್.ವಿಜಯ್, ಎನ್.ಮಹೇಶ್, ಎನ್.ಲೋಕೇಶ್, ಶಾರ್ವರಿ, ಅಮೃತಾ,ಖಲೀದಾ ಖಾನಂ, ಡಾ.ಮಂಜುನಾಥ್, ಅಧೀಕ್ಷಕ ಪುಟ್ಟಲಿಂಗಪ್ಪ, ಉಪನ್ಯಾಸಕರಾದ ನಾಗರಾಜು, ಹರೀಶ್, ಅನ್ನಪೂರ್ಣ ಇತರರು ಇದ್ದರು.