ಚಿಂತಾಮಣಿ ತಾಲೂಕಿನ ಚೌಡದೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ವೆಂಕರೆಡ್ಡಿ ಅವರಿಗೆಚುನಾವಣಾಧಿಕಾರಿ ನಾಗರಾಜ್ ಪ್ರಮಾಣ ಪತ್ರ ವಿತರಣೆ ಮಾಡಿದರು.
ಚಿಂತಾಮಣಿ :ತಾಲೂಕಿನ ಚೌಡದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ನೂತನ ಅಧ್ಯಕ್ಷರಾಗಿ ವಿ. ವೆಂಕಟರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಶೈಲಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚೌಡದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾದ್ಯಕ್ಷ ಸ್ಥಾನಗಳಿಗೆ ವಿ.ವೆಂಕಟರೆಡ್ಡಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಎಸ್.ಸೈಲಾ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು, ಬೇರಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ನಾಗರಾಜ್ ಅವರು ಅಧಿಕೃತವಾಗಿ ೂಷಿಸಿದರು.
ಇತ್ತೀಚೆಗೆ ನಡೆದಿದ್ದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೂರು ದಶಕಗಳ ನಂತರ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ನೂತನ ಅಧ್ಯಕ್ಷ ವಿ.ವೆಂಕಟರೆಡ್ಡಿ ಮಾತನಾಡಿ, ಸಂದ ಪ್ರಗತಿ ಹಾಗೂ ಹಾಲಿನ ಉತ್ಪಾದಕರ ಹಿತರಕ್ಷಣೆಗೆ ಶ್ರಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ವಿ.ರಾಮಾಂಜನಪ್ಪ ಮತ್ತು ನಿರ್ದೇಶಕರು ಹಾಗೂ ಗ್ರಾಮದ ಮುಖಂಡರಾದ ಆನಂದ್, ಶ್ರೀರಾಮಪ್ಪ, ವೆಂಕಟರೆಡ್ಡಿ, ಮುನಿರೆಡ್ಡಿ, ಬಂಡಮೀದಹಳ್ಳಿ ವೆಂಕಟರೆಡ್ಡಿ, ಮುನಿಯಪ್ಪ, ನಾಗರಾಜ್, ಬೈರೆಡ್ಡಿ ಹಾಗೂ ಸಂದ ನಿರ್ದೇಶಕರು ಇದ್ದರು.