ರಾಜ್ಯ

ಯುಜಿಸಿ ಮಾನ್ಯತೆ ಮತ್ತೊಂದು ಮೈಲಿಗಲ್ಲು

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಸಂಘದ ಅಧ್ಯಕ್ಷೆ ಡಾ.ದಾಕ್ಷಾಯಿಣಿ ಅವ್ವಾಜಿ ಸಂತಸ
  • ಬೀದರ್​ ಲಿಂಗರಾಜ ಅಪ್ಪ ಇಂಜಿನಿಯರಿಂಗ್​ ಕಾಲೇಜು
ಕಲಬುರಗಿ: ಶತಮಾನೋತ್ಸವ ಆಚರಿಸಿಕೊಂಡ ಶರಣಬಸವೇಶ್ವರ ವಿದ್ಯಾವರ್ಧಕ ಸಂದಡಿ ನಡೆಯುತ್ತಿರುವ ಬೀದರ್​ನ ಲಿಂಗರಾಜ ಅಪ್ಪ ಇಂಜಿನಿಯರಿಂಗ್​ ಕಾಲೇಜು, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದಿಂದ ಮಾನ್ಯತೆ ಪಡೆಯುವ ಮೂಲಕ ಬೀದರ್​ ಜಿಲ್ಲೆಯ ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ತನ್ನ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಹದಿನೈದು ವರ್ಷಗಳ ಹಿಂದೆ ಬೀದರ್​ ಜಿಲ್ಲೆಯ ಗೋರನಳ್ಳಿ ಗ್ರಾಮದಲ್ಲಿ ಸ್ಥಾಪನೆಯಾದ ಲಿಂಗರಾಜ ಅಪ್ಪ ಇಂಜಿನಿಯರಿಂಗ್​ ಕಾಲೇಜು, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಹಳ್ಳಿಗಳ ವಿದ್ಯಾರ್ಥಿಗಳು ಇಂಜಿನಿಯರಿಂಗ್​ ಕಾಲೇಜಿನಲ್ಲಿ ತಮ್ಮ ಆಯ್ಕೆಯ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್​ಗಳ ವೃತ್ತಿಪರ ತಾಂತ್ರಿಕ ಶಿಕ್ಷಣ ಪಡೆಯಲು ಅವಕಾಶ ಒದಗಿಸುವತ್ತ ಕಾರ್ಯನಿರ್ವಹಿಸುತ್ತಿದೆ.
ಯುಜಿಸಿ ಸೂಚಿಸಿದಂತೆ, ಲಿಂಗರಾಜ ಅಪ್ಪ ಇಂಜಿನಿಯರಿಂಗ್​ ಕಾಲೇಜು ಮೂಲಸೌಕರ್ಯ, ಶೈಕ್ಷಣಿಕ ಸಿಬ್ಬಂದಿ, ಆಡಳಿತ ಮತ್ತು ಗುಣಮಟ್ಟದ ಮಾನದಂಡಗಳಿಗೆ ಸಂಬಂಧಿಸಿದ ಎಲ್ಲಾ ಕಡ್ಡಾಯ ಅವಶ್ಯಕತೆ ಪೂರೈಸಿದ ನಂತರ ಯುಜಿಸಿ ಕಾಯ್ದೆಯ ಸೆಕ್ಷನ್​ 2(ಎಫ್​) ಅಡಿ ಈ ಕಾಲೇಜು ಮಾನ್ಯತೆಗೆ ಗುರುತಿಸಲಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ ಮಾನ್ಯತೆ ಪಡೆಯುವುದರಿಂದ ಕಾಲೇಜಿನ ಖ್ಯಾತಿ ಮತ್ತು ಶೈಕ್ಷಣಿಕ ಮಟ್ಟ ಹೆಚ್ಚಿಸುತ್ತದೆ. ಇದರಿಂದ ಕಾಲೇಜು ಉನ್ನತ ಶಿಕ್ಷಣದ ಗುಣಮಟ್ಟದ ಮಾನದಂಡ ಪೂರೈಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು, ಇತರ ಸಂಸ್ಥೆಗಳು ಮತ್ತು ಉದ್ಯೋಗ ನೀಡುವ ಸಂಸ್ಥೆಗಳಿಗೆ ಮನದಟ್ಟಾಗಲಿದೆ. ಇದರ ಫಲವಾಗಿ, ಯುಜಿಸಿ ಮಾನ್ಯತೆ ಪಡೆದ ಕಾಲೇಜು ನೀಡುವ ಪದವಿಗಳು ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ, ಸರ್ಕಾರಿ ಉದ್ಯೋಗ ಮತ್ತು ವಿವಿಧ ೇತ್ರಗಳಲ್ಲಿ ಉದ್ಯೋಗಾವಕಾಶಗಳಿಗೆ ಅಂಗೀಕರಿಸಲ್ಪಡುತ್ತವೆ.
ಕಾಲೇಜಿನ ಪ್ರಾಂಶುಪಾಲ ಪ್ರೊ.ವಿನೀತಾ ಪಾಟೀಲ್​ ಈ ಕುರಿತು ಹೇಳಿಕೆ ನೀಡಿ, ಪ್ರಸ್ತುತ ಕಾಲೇಜು ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರು ಪದವಿ ಮತ್ತು ನಾಲ್ಕು ಸ್ನಾತಕೋತ್ತರ ಕೋರ್ಸ್​ ನೀಡುತ್ತಿದೆ. ಇಂಜಿನಿಯರಿಂಗ್​ ಶಿಕ್ಷಣದ ಹೊಸ ಮತ್ತು ಉದಯೋನ್ಮುಖ ೇತ್ರಗಳನ್ನು ನೀಡುವ ಮೂಲಕ ಇಂಜಿನಿಯರಿಂಗ್​ ಶಿಕ್ಷಣವನ್ನು ಭವಿಷ್ಯದಲ್ಲಿ ವಿಸ್ತರಿಸುವ ಬಗ್ಗೆ ಅನೇಕ ಯೋಜನೆಗಳಿವೆ. ಯುಜಿಸಿ ಅನುಮತಿಯೊಂದಿಗೆ, ಕಾಲೇಜು ಈಗ ನ್ಯಾಕ್​ ಮಾನ್ಯತೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿದೆ ಎಂದು ತಿಳಿಸಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಾಯಿಣಿ ಅವ್ವಾಜಿ, ಲಿಂಗರಾಜ ಅಪ್ಪಾ ಇಂಜಿನಿಯರಿಂಗ್​ ಕಾಲೇಜಿಗೆ ಯುಜಿಸಿ ಮಾನ್ಯತೆ ದೊರೆತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿ, ಇದು ಕಾಲೇಜಿನ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ. ಈ ಸಾಧನೆಗಾಗಿ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. 
"

ಕಾಲೇಜಿನ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭ ಸೂಚಿಸುವ ಯುಜಿಸಿ ಮಾನ್ಯತೆ ಪಡೆಯಲು ಅಗತ್ಯ ಅವಶ್ಯಕತೆ ಪೂರೈಸುವಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಅವಿರತ ಶ್ರಮಿಸಿದ್ದಕ್ಕಾಗಿ ಸಂತಸ ತಂದಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಅಭಿನಂದನೆಗಳು. 

ಬಸವರಾಜ ದೇಶಮುಖ, 

ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂ.