ರಾಯಚೂರಿನ ಬಂಗಿಕುಂಟಾದಲ್ಲಿ ಗ್ರಾಹಕರು ಹಣ್ಣು ಖರೀದಿ ಮಾಡುತ್ತಿವುದು. 
ರಾಜ್ಯ

ಬಿಸಿಲು ನಾಡಿನಲ್ಲಿ ವರ್ಷದ ಮೊದಲ ಹಬ್ಬ ಯುಗಾದಿ ಆಚರಣೆ

ರಾಯಚೂರು ಹಳತನ್ನು ಕಳಚಿ ಹೊಸ ಚಿಗುರು ಚಿಗುರಿ ಪರಿವರ್ತನೆಗೆ ಸಂಕೇತವಾಗುವ ಯುಗಾದಿ ಮತ್ತೆ ಬಂದಿದೆ. ಯುಗಾದಿ ಎಂದರೆ ಕೇವಲ ಪ್ರಕೃತಿ ಬದಲಾವಣೆ ಮಾತ್ರವಲ್ಲದೆ ಜೀವಿಗಳ ಬದುಕಿನ ಬದಲಾವಣೆಯ, ಅದರಲ್ಲೂ ಜನತೆ ನಮ್ಮ ವರ್ಷದ ಬದುಕಿಗೆ ಮುನ್ನುಡಿ ಬರೆಯುವ ಹಬ್ಬ. ಯುಗಾದಿ ಆಚರಣೆಗೆ ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟಿನಿಂದಾಗಿ ಅನೇಕ ಹೋಟೆಲ್‌ಗಳಲ್ಲಿ ಆಹಾರ ಪಾದರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ದಿನಸಿ ಪದಾರ್ಥಗಳ ಖರೀದಿ ಪ್ರಮಾಣ ಕುಸಿದಿದೆ. ಹೀಗಾಗಿ ಸಗಟು ದರದಲ್ಲಿ ಎಂದಿಗಿಂತ ಒಂದು-ಎರಡು ರೂ. ಕಡಿಮೆಗೆ ವ್ಯಾಪಾರಸ್ಥರಿಗೆ ದಿನಸಿ ಪದಾರ್ಥಗಳು ಸಿಗುತ್ತಿವೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ದಿನಸಿ ಪದಾರ್ಥಗಳ ಬೆಲೆ ಹೆಚ್ಚಿಸಿಲ್ಲ. ಹೋಟೆಲ್, ಕ್ಯಾಟರಿಂಗ್ ಉದ್ಯಮದ ವಹಿವಾಟು ಕುಸಿತದ ಪರಿಣಾಮ ತರಕಾರಿಗಳು ಅಗ್ಗವಾಗಿ ಸಿಗುತ್ತಿದೆ.

ಮಕ್ಕಳಿಗೆ ರಜೆ- ಹೆಚ್ಚಿದ ಸಂಭ್ರಮ
ಏಪ್ರಿಲ್ - ಮೇ ತಿಂಗಳಲ್ಲಿ ಯುಗಾದಿ ಬಂದಿದ್ದರೆ ಶಾಲಾ-ಕಾಲೇಜುಗಳ ಪ್ರವೇಶಾತಿಗಳೂ ಇರುತ್ತಿದ್ದವು. ಹೀಗಾಗಿ, ಗ್ರಾಹಕರಿಗೆ ಹಣದ ಅಗತ್ಯ ಹೆಚ್ಚಾಗಿರುತ್ತಿತ್ತು. ಈಗ ಬಹುತೇಕ ಮಕ್ಕಳಿಗೆ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿದೆ. ಇನ್ನು ಕೆಲ ಪರೀಕ್ಷೆ ನಡೆಯುತ್ತಿದ್ದರೂ, ವಾರಾಂತ್ಯದಲ್ಲಿ ಈ ಬಾರಿ ರಜೆ ಹೆಚ್ಚಳವಾಗಿರುವುದರಿಂದ ಅನೇಕರು ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡು ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ.

ಹಣ್ಣುಗಳ ಬೆಲೆ ಏರಿಕೆ:
ಈ ಬಾರಿ ಬೇಸಿಗೆ ಪ್ರಾರಂಭದಲ್ಲಿ ಬಿಸಿಲಿನ ತಾಪಮಾನ 41.1ಡಿಗ್ರಿ ಸೇ. ಇರುವುದರಿಂದ ಗ್ರಾಹಕರು ಕೇವಲ ಬೆಳಗ್ಗೆ ಹಾಗು ಸಂಜೆ ಮಾತ್ರ ಆಗಮಿಸುತ್ತಿದ್ದು, ನಗರದ ಮಾರುಕಟ್ಟೆಯಲ್ಲಿ ಹಬ್ಬದ ಆಚರಣೆಗೆ ಆಗತ್ಯವಾದ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಹಬ್ಬಕ್ಕೆ ಅಗತ್ಯವಾಗಿ ಬೇಕಾಗಿದ್ದ ವಿವಿಧ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ, ಖರ್ಜೂರ ಸೇರಿ ವಿವಿಧ ಹಣ್ಣುಗಳು ದರ ಗಗನಕ್ಕೆ ಏರಿದ್ದು, ಕೆಜಿ. ಹಣ್ಣಿಗೆ 100 ರಿಂದ 150 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ತೆಂಗಿನ ಕಾಯಿಯಲ್ಲೂ ದರ ಹೆಚ್ಚಾಗಿದ್ದು, ಒಂದು ಕಾಯಿಗೆ 40 ರಿಂದ 50ರ ವರೆಗೆ ಮಾರಾಟವಾಗಿದೆ. ವರ್ಷದ ಮೊದಲ ಹಬ್ಬವಾದ ಯುಗಾದಿಗೆ ವ್ಯಾಪಾರ ಹೆಚ್ಚಾಗಲಿದೆ ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇದ್ದು,ಆದರೆ ಬಿಸಿಲು ಹೆಚ್ಚಳವಾಗಿರುವುದರಿಂದ ಕೇಲವರು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ವ್ಯಾಪಾರಿಗಳಲ್ಲಿ ನಿರಾಸೆ ಮೂಡಿಸಿದೆ.
ಇಳಿಕೆ ಕಂಡ ದಿನಸಿ ಪದಾರ್ಥಗಳು
ಯುಗಾದಿ ಹಬ್ಬವೆಂದರೆ ಎಲ್ಲಾರ ಮನೆಯಲ್ಲಿಯೂ ಹೋಳಿಗೆ ಸವಿಯುವುದು ಸಾಮಾನ್ಯವಾಗಿದೆ. ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟಿನಿಂದಾಗಿ ಅನೇಕ ಹೋಟೆಲ್‌ಗಳಲ್ಲಿ ಆಹಾರ ಪಾದರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಆಹಾರ ತಯಾರು ಮಾಡುತ್ತಿರುವುದರಿಂದ ಕಡಿಮೆ ಬೆಲೆಗೆ ದಿನಸಿ ಪದಾರ್ಥಗಳು ದೊರೆಯುತ್ತಿವೆ. ಜಿಲ್ಲಾ ಕೇಂದ್ರದಲ್ಲಿ ತೊಗರಿ ಬೆಳೆ ಕೆ.ಜಿ 110 ಮಾರಾಟವಾಗುತ್ತಿದೆ. ಉಳಿದಂತೆ ಮೈದಾ ಹಿಟ್ಟಿಗೆ 40, ರವೇ 40, ಹಾಗೂ ಬೆಲ್ಲ ಕೆಜಿಗೆ 55 ,ಪಟಗ 120 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಪದಾರ್ಥಗಳ ಬೆಲೆ ತೀವ್ರ ಕುಸಿದಿದೆ.
ಜವಳಿ ವ್ಯಾಪಾರ ಜೋರು
ಈ ಬಾರಿ ಯುಗಾದಿ ಹಾಗೂ ರಂಜಾನ್ ಂದು ದಿನ ಹಾಸುಪಾಸಿನಲ್ಲಿ ಬಂದಿದೆ. ಜತೆಗೆ ಮಳೆ, ಬೆಳೆಯು ಚನ್ನಾಗಿ ಆಗಿರುವುದರಿಂದ ಗ್ರಾಮೀಣ ಭಾಗದ ರೈತರು ಕುಟುಂಬ ಸಮೇತರಾಗಿ ಮನೆಮಂದಿಗೆಲ್ಲ ಬಟ್ಟೆ ಖರೀದಿ ಮಾಡಲು ಆಗಮಿಸುತ್ತಿರುವುದರಿಂದ ಹಬ್ಬದ ವಾತಾವರಣಕ್ಕೆ ಮತ್ತಷ್ಟು ರಂಗು ನೀಡಿದೆ. ಹಿಂದೂ ಧರ್ಮದ ಮೊದಲ ಹಬ್ಬದ ಅಂಗವಾಗಿ ಬಟ್ಟೆ ಖರೀದಿಯಲ್ಲಿ ಜನತೆ ಹೆಚ್ಚು ಆಸಕ್ತಿ ತೋರಿದ್ದು, ಈ ಬಾರಿ ಜವಳಿ ಅಂಗಡಿ ಬಟ್ಟೆ ಖರೀದಿ ಜೋರಾಗಿ ಖಂಡು ಬಂದಿತ್ತು.