Udusalamma Devi Chariot Festival is a success
ತುರುವೇಕೆರೆ: ಪಟ್ಟಣದ ಗ್ರಾಮದೇವತೆ ಉಡುಸಲಮ್ಮ ದೇವಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ನೆರವೇರಿತು.
ಸೋಮವಾರ ಮಧ್ಯಾಹ್ನ ಉಡುಸಲಮ್ಮ ದೇವಿಯನ್ನು ಉತ್ಸವದೊಂದಿಗೆ ಕರೆತಂದು ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಕೂರಿಸಿ ಪೂಜೆ ನೆರವೇರಿಸಲಾಯಿತು. ರಥದ ನಾಲ್ಕು ಚಕ್ರಕ್ಕೆ ಹಾಗೂ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಉಗ್ಗೆದನ್ನವನ್ನು ನೈವೇದ್ಯ ಮಾಡಿ, ದೇವಿಗೆ ಮಹಾ ಮಂಗಳಾರತಿ ಮಾಡಲಾಯಿತು. ನಂತರ ನೆರದಿದ್ದ ಸಾವಿರಾರು ಭಕ್ತರು ದೇವಿಯ ಜಯಘೋಷದೊಂದಿಗೆ ಬಿಸಿಲಿನ ತಾಪವನ್ನು ಲೆಕ್ಕಿಸದೆ ರಥ ಎಳೆದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ದವನ, ಬಾಳೆ ಹಣ್ಣು ತೂರಿ ತಮ್ಮ ಹರಕೆ ಈಡೇರುವಂತೆ ಪ್ರಾರ್ಥಿಸಿದರು.
ಗುಡಿಗೌಡರಾದ ಟಿ.ಕೆ.ಶ್ರೀನಿವಾಸ್, ಧರ್ಮದರ್ಶಿಗಳಾದ ಟಿ.ಎನ್.ಶಶಿಶೇಖರ್, ಟಿ.ಎಸ್.ಲಕ್ಷ್ಮೀನರಸಿಂಹ, ಪರಶುರಾಮಯ್ಯ, ಚಂದ್ರೇಖರ್, ನವೀನ್, ಟಿ.ಪ್ರಾಣೇಶ್, ಅರ್ಚಕರಾದ ರಾಮಚಂದ್ರಯ್ಯ, ಪುನೀತ್ ಇದ್ದರು