ಇಬ್ಬರು ಕಳ್ಳಿಯರ ಬಂಧನ 
ರಾಜ್ಯ

ಇಬ್ಬರು ಕಳ್ಳಿಯರ ಬಂಧನ

ಪ್ರಮುಖ ಮುಖ್ಯಾಂಶಗಳು

  • ಇಬ್ಬರು ಕಳ್ಳಿಯರ ಬಂಧನ
  • ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದ ಕಳ್ಳತನ ಪ್ರಕರಣ
  • ಕಟಕೋಳ ಪೊಲೀಸರಿಂದ ಆರೋಪಿಗಳ ಸೆರೆ
ಇಬ್ಬರು ಕಳ್ಳಿಯರ ಬಂಧನ
ಬೆಳಗಾವಿ: ಚಿನ್ನಾಭರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಗ್ಯಾಂಗವಾಡಿಯ ಉಮಾ ಚೌಗುಲೆ(40) ಹಾಗೂ ಆರತಿ ಚೌಗುಲೆ(28)ಯನ್ನು ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸರು ವಶಕ್ಲೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಮದುರ್ಗ ತಾಲೂಕಿನ ಬೀಡಕಿ ಗ್ರಾಮದ ಮಂಜುಳಾ ನರಗುಂದ ಲೋಕಾಪುರದಿಂದ ಸಾಲಹಳ್ಳಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೈಚೀಲದಲ್ಲಿದ್ದ 3 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನ ಹಾಗೂ 16 ಸಾವಿರ ರೂ. ಮೌಲ್ಯದ 80 ಗ್ರಾಂ ಬೆಳ್ಳಿ ಆಭರಣ ಕಳ್ಳುವಾಗಿರುವ ಕುರಿತು 2026 ಮೇ 14ರಂದು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.