ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಓಡಿಸುತ್ತಿದ್ದ ಸವಾರರಿಗೆ ಎಸ್ಪಿ ಕುಶಾಲ್‌ ಚೌಕ್ಸೆ ಸಂಚಾರಿ ನಿಯಮ ಬಗ್ಗೆ ಮನವರಿಕೆ ಮಾಡಿಕೊಡುತ್ತಿರುವುದು 
ರಾಜ್ಯ

ಹೆಲ್ಮೆಟ್‌ ಹಾಕಲು ದ್ವಿಚಕ್ರ ವಾಹನ ಸವಾರರ ಸಬೂಬು, ದಾಖಲೆಯ ದಂಡ

ಚಿಕ್ಕಬಳ್ಳಾಪುರ:ಆಸ್ಪತ್ರೆಗೆ ತೆರಳಬೇಕಾಗಿರುವ ಹಿನ್ನೆಲೆಯಲ್ಲಿ ಮರೆತು ಬಂದೆ, ದೂರ ಏನೂ ಹೋಗದೇ ಇಲ್ಲಿಯೇನಿಲ್ಲಿಸುತ್ತಿರುವೆ, ಇದ್ದಕ್ಕಿದ್ದಂತೆ ತಡೆದರೆ ಹೇಗೆ?, ಹಣ ವಸೂಲಿ ಕೊಡುವ ಆದ್ಯತೆಯನ್ನು ಮೊದಲುಹದಗೆಟ್ಟ ರಸ್ತೆಯನ್ನು ಸರಿಪಡಿಸಿ, ಸುಮ್ಮನೆ ಕಿರಿಕಿರಿಯಾಗುತ್ತದೆ, ನನ್ನ ಹತ್ತಿರ ಹಣ ಇಲ್ಲ ಏನುಮಾಡುವುದು?.

ಇವು ಚಿಕ್ಕಬಳ್ಳಾಪುರಜಿಲ್ಲೆಯ ವಿವಿಧೆಡೆ ವಾಹನ ಸಂಚಾರದ ವೇಳೆ ಹೆಲ್ಮೆಟ್‌ ಧರಿಸದೇ ನಿಯಮ ಉಲ್ಲಂಘಿಸಿದವರಿಗೆ ದಂಡವಿಧಿಸಲು ಪೊಲೀಸರು ಮುಂದಾದಾಗ ಕೇಳಿ ಬಂದ ಮಾತುಗಳು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ಚೌಕ್ಸೆ ಆದೇಶದ ಹಿನ್ನೆಲೆಯಲ್ಲಿ ಗಲ್ಲಿ ಗಲ್ಲಿಯಲ್ಲೂ ವಾಹನಗಳ ಪರಿಶೀಲನಾ ಕಾರ್ಯವನ್ನು ಸಿಬ್ಬಂದಿಕೈಗೊಂಡರು. ಹೆಲ್ಮೆಟ್‌ ಧರಿಸದವರಿಗೆ ೫೦೦ ದಂಡ ಶುಲ್ಕ ವಿಧಿಸಿದರು. ಇದರ ಬಿಸಿ ತಾ.ಪಂ.ಮಾಜಿಅಧ್ಯಕ್ಷ, ನಗರಸಭಾ ಮಾಜಿ ಸದಸ್ಯ, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರಿಗೆ ತಟ್ಟಿತು.

ಜಿಲ್ಲೆಯಲ್ಲಿಡಿ.೧೨ ರಿಂದ ದ್ವಿಚಕ್ರ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಸವಾರರು ಹೆಲ್ಮೆಟ್‌ ಧರಿಸಿರುವುದನ್ನುಖಾತ್ರಿಪಡಿಸಿಕೊಳ್ಳುವ ಹಾಗೂ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕೆಲಸವನ್ನು ಮತ್ತಷ್ಟುಕಟ್ಟುನಿಟ್ಟಾಗಿ ಕೈಗೊಳ್ಳಲಾಗುತ್ತಿದೆ.

*ಒಂದೇ ದಿನ ೧೨೪೩ಪ್ರಕರಣ*

ಜಿಲ್ಲೆಯಲ್ಲಿಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡಿದಕ್ಕೆ ಸಂಬಂಧಿಸಿದಂತೆ ಶುಕ್ರವಾರ ೧೨೪೩ಪ್ರಕರಣಗಳನ್ನು ದಾಖಲಿಸಿ, ಬರೋಬ್ಬರಿ ೬,೨೩,೫೦೦ ರೂ ದಂಡವನ್ನು ವಿಧಿಸಲಾಗಿದೆ.

ಹೆಲ್ಮೆಟ್‌ಧರಿಸದಿರುವುದಕ್ಕೆ ಸಂಬಂಧಿಸಿದಂತೆ ಮಾತ್ರ ವಾಹನ ಸವಾರೊಬ್ಬರಿಗೆ ತಲಾ ೫೦೦ ರೂ ದಂಡ ವಿಧಿಸಬಹುದು.ಅದರಂತೆ ಹೆಚ್ಚಿಗೆ ಈ ನಿಯಮ ಉಲ್ಲಂಘನೆಗೆ ಶುಕ್ರವಾರ ಆದ್ಯತೆ ನೀಡಲಾಗಿತ್ತು. ನಿರ್ದಾಕ್ಷಿಣ್ಯಕ್ರಮ ಎಚ್ಚರಿಕೆಯ ಮೊದಲ ದಿನವಾಗಿದ್ದ ಹಿನ್ನೆಲೆಯಲ್ಲಿ ಕೆಲವೆಡೆ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಬಳಿಕ ಶುಲ್ಕ ಪಾವತಿಸಲು ಕಷ್ಟಪಟ್ಟವರಿಗೆ ಹೆಲ್ಮೆಟ್‌ ಖರೀದಿಸಲು ಇಲ್ಲವೇ ಬೇರೆ ಕಡೆ ಇಟ್ಟಿದ್ದರೆಸ್ಥಳಕ್ಕೆ ತೆಗೆದುಕೊಂಡು ಬರಲು ಹೇಳಿ ದಂಡ ವಿನಾಯಿತಿ ನೀಡಲಾಗಿದೆ. ಇದರ ನಡುವೆ ೧೨೪೩ ಪ್ರಕರಣದಾಖಲಾಗಿ, ೬,೨೩,೫೦೦ ರೂ ದಂಡ ವಸೂಲಿಯಾಗಿದೆ.