ಡಿ ಗ್ರೂಪ್ ನೌಕಕರೇ ಇಲ್ಲಿ ವೈದ್ಯರು!
ವೈದ್ಯರಿಲ್ಲದ ಕಾರಣ ರೋಗಿಗಳಿಗೆ ವೈದ್ಯಕಿಯ ಸೇವೆಗಳು ಗಗನ ಕುಸುಮವಾಗಿವೆ. ತಾಲೂಕು ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಆಗಮಿಸುತ್ತಾರೆ. ಆದರೆ ಆಸ್ಪತ್ರೆ ಆಡಳಿತ ಮಂಡಳಿ ರ್ನಿಲಕ್ಷ$್ಯಕ್ಕೆ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಪರೋಕ್ಷವಾಗಿ ಸಾಥ್ ನೀಡುತ್ತಿರುವುದರಿಂದ ಇಲ್ಲಿನ ವೈದ್ಯರ ಕರ್ತವ್ಯ ಲೋಪದ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಪಾಳಯ ಕರ್ತವ್ಯದಲ್ಲಿ ಕನಿಷ್ಠ ಇಬ್ಬರು ವೈದ್ಯರಾದರೂ ಇರುವುದು ಕಡ್ಡಾಯ. ಆದರೆ ಅಧಿಕಾರಿಗಳು, ವೈದ್ಯರ ಕುಮ್ಮಕ್ಕಿನಿಂದ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಮನೆಗೆ ಹೋಗಿ ಮಲುಗುವ ಆಚಾರ ರೂಢಿ ಮಾಡಿಕೊಂಡಿದ್ದಾರೆ.ಅಫಘಾತ, ಹೃದಯಘಾತ, ಹಾವು ಕಡಿತ ಸೇರಿ ಇತರ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನಿಮಿತ್ತ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ವೈದ್ಯರ ಬದಲಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆರೋಗ್ಯ ಸಹಾಯಕರೇ ಲಸಿಕೆ ಹಾಕಿ ಔಷಧ ಕೊಟ್ಟು ಚಿಕಿತ್ಸೆ ನೀಡುತ್ತಾರೆ. ಎಂಬಿಬಿಎಸ್ ಅಥವಾ ವೈದ್ಯಕಿಯ ವ್ಯಾಸಂಗ ಮಾಡದ ಆರೋಗ್ಯ ಸಹಾಯಕರು, ಡಿ ಗ್ರೂಪ್ ನೌಕಕರು ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಫಲಕಾರಿ ಆಗದೆ ಕೊನೆ ಉಸಿರು ಎಳೆಯುವಂತಾಗಿದೆ.
ತಾಲೂಕು ಕೇಂದ್ರದಿಂದ 35 ಕಿ.ಮಿ ದೂರದ ಹಳ್ಳಿಗಳಿಂದ ಬಾಗೇಪಲ್ಲಿ ಆಸ್ಪತ್ರೆಗೆ ಕರೆತಂದರೆ ಚಿಕಿತ್ಸೆ ನೀಡಲು ವೈದ್ಯರು ಇಲ್ಲ, ಆರೋಗ್ಯ ಸಹಾಯಕರೇ ಎಲ್ಲ ರೀತಿಯ ಚಿಕಿತ್ಸೆ ಕೊಟ್ಟು ಬಡವರ ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ವೈದ್ಯರು ಇಲ್ಲದ ಆಸ್ಪತ್ರೆ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂಬಂತಿದೆ.
> ಸುಧಾಕರ್, ಮೃತಳ ಸಂಬಂಧಿ
ಕರೆ ಸ್ವೀಕರಿಸದ ಜಿಲ್ಲಾಧಿಕಾರಿ
ಬಾಗೇಪಲ್ಲಿ ಆಸ್ಪತ್ರೆಯಲ್ಲಿ ತಾಂಡವಾಡುತ್ತಿರುವ ಸಮಸ್ಯೆಗಳು ಹಾಗೂ ಇಬ್ಬರು ರೋಗಿಗಳು ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಲು ಹತ್ತಾರು ಬಾರಿ ಕರೆ ಮಾಡಿದರೂ ಜಿಲ್ಲಾಧಿಕಾರಿ ಜಿ.ಪ್ರಭು ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ.ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾಗಿರುವ ಜಿಲ್ಲಾಧಿಕಾರಿ ರ್ನಿಲಕ್ಷ$್ಯ ಮಾಡಿದರೆ ಸಾರ್ವಜನಿಕರ ಗೋಳು ಕೇಳುವವರು ಯಾರು ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ.