ವಿಜಯಪುರ ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿರುವ ಗಾಂಜಾ ಮತ್ತು ದ್ವಿಚಕ್ರ ವಾಹನ.
ವಿಜಯಪುರ: ಸಮೀಪದ ರಾಷ್ಟ್ರೀಯ ಹೆದ್ದಾರಿ 44ರ ಬುಳ್ಳಹಳ್ಳಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಮಂಗಳವಾರ ದ್ವಿಚಕ್ರ ವಾಹನ ನಿಲ್ಲಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಜಯಪುರ ಸಮೀಪದ ಆವತಿ ಗ್ರಾಮದ ಬಾಲಾಜಿ (23) ಹಾಗೂ ಬಾಲರಾಜ್ (53) ಬಂಧಿತರು. ಬಂಧಿತರಿಂದ 650 ಗ್ರಾಂ ತೂಕದ ಹಸಿ ಮತ್ತು ಒಣ ಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ವಿಜಯಪುರ ಠಾಣೆ ವೃತ್ತ ನಿರೀಕ್ಷಕ ಲಕ್ಷಿ$್ಮನಾರಾಯಣ್ ನೇತೃತ್ವದಲ್ಲಿ ಪಿಎಸ್ಐ ಸುನಿಲ್ಕುಮಾರ್, ಸಿಬ್ಬಂದಿ ಮಹ್ಮದ್ ಮುಕ್ತಿಯಾರ್, ರಾಮಾಂಜಿ, ಅಶ್ವತ್ಥರೆಡ್ಡಿ, ಪ್ರವಿಣ್, ಮಂಜುನಾಥ್ ಇದ್ದರು.