Two killed in private bus collision
ಬೇತಮಂಗಲ: ಕೆಜಿಎಫ್ ತಾಲೂಕು ಬೇತಮಂಗಲ ಮತ್ತು ಸುಂದರ ಪಾಳ್ಯ ಮಧ್ಯದ ಪಿಲ್ಲ ಗುಂಡ್ಲಹಳ್ಳಿ ಕ್ರಾಸ್ ಬಳಿ ಭಾನುವಾರ ಖಾಸಗಿ ಬಸ್ ಬೈಕ್ಗೆ ಡಿಕ್ಕಿಯಾಗಿ ದ್ವಿಚಕ್ರವಾಹನ ಸವಾರರಿಬ್ಬರು ಮೃತಪಟ್ಟಿದ್ದಾರೆ. ಕೆಜಿಎಫ್ ಚಾಂಪಿಯನ್ ರ್ೀನ ನಿವಾಸಿ ವಿನಾಯಕಮೂರ್ತಿ(52) ಮತ್ತು ವಿಜಯ್ (54) ಮೃತರು.
ಬಸ್ಗೆ ದಾಖಲೆಗಳೇಇಲ್ಲ!
ಅಪಘಾತ ಮಾಡಿದ ಜಿಎಂಜಿ ಹೆಸರಿನ ಕೆಎ 20 ಎ3863 ಖಾಸಗಿ ಬಸ್ ಕೋಲಾರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 2004ರಲ್ಲಿ ನೋಂದಣಿ ಮಾಡಲಾಗಿದೆ. ಎ್ಸಿ 2025ರ ಸೆಪ್ಟೆಂಬರ್ಗೆ ಮುಕ್ತಾಯವಾಗಿದೆ, ಜನವರಿಗೆ ಟ್ಯಾಕ್ಸ್ ಮುಕ್ತಾಯವಾಗಿದೆ. ವಾಹನಕ್ಕೆ ವಿಮೆ ಕಳೆದ ಎರಡು ವರ್ಷಗಳ ಹಿಂದೆಯೇ ಮುಕ್ತಾಯವಾಗಿದೆ. ಆದರೂ ಬಸ್ ಓಡಿಸಲಾಗುತ್ತಿದೆ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಯಾವುದ್ಯಾವುದೋ ವಾಹನಗಳನ್ನು ಹಿಡಿಯುವ ಆರ್ಟಿಒ ಪೊಲೀಸ್ ಅಧಿಕಾರಿಗಳು ಇಂಥ ವಾಹನಗಳನ್ನು ಏಕಿ ಹಿಡಿದಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಬೈಕ್ ಸವಾರರು ಕೆಜಿಎ್ ನಿಂದ ಬೇತಮಂಗಲ ಮಾರ್ಗವಾಗಿ ತಮಿಳುನಾಡಿನ ಪ್ಯಾರ್ನ್ಯಟ ಭಟ್ ಕಡೆ ತೆರಳುತ್ತಿದ್ದರು. ಇದೇ ಮಾರ್ಗದಲ್ಲಿ ವಿ.ಕೋಟ ದಿಂದ ಕೆಜಿಎ್ನತ್ತ ಹೊರಟಿದ್ದ ಖಾಸಗಿ ಬಸ್ ಅತಿವೇಗವಾಗಿ ಬಂದ ಪರಿಣಾಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ನೇಹಿತರು ಸ್ಥಳದಲ್ಲೆ ಅಸುನೀಗಿದ್ದಾರೆ. ಬೇತಮಂಗಲ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಕುಟುಂಬ ಬೀದಿಪಾಲು: ಮೃತ ಪಟ್ಟ ಇಬ್ಬರೂ ದಿನಗೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಎರಡೂ ಕುಟುಂಬಗಳಿಗೆ ಇವರೇ ಆಧಾರ ಸ್ತಂಭವಾಗಿದ್ದರು. ಈಗ ಇಬ್ಬರೂ ಇಲ್ಲವಾಗಿರುವುದನ್ನು ಕಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಬಂದಿದ್ದಾಗ ಆಕ್ರಂದನ ಮುಗಿಲು ಮುಟ್ಟಿತ್ತು.