Two jewellery thieves arrested, gold jewellery seized
ಗೌರಿಬಿದನೂರು: ನಗರದ ಮಾದನಹಳ್ಳಿಯಲ್ಲಿ ಜ.27ರಂದು ನಡೆದಿದ್ದ ಸರಗಳ್ಳತನ ಪ್ರಕರಣ ಸಂಬಂಧ ಇಬ್ಬರು ಸರಗಳ್ಳರನ್ನು ಬಂಧಿಸಿ ಚಿನ್ನಾಭರಣ, ಬೈಕ್ ವಶಪಡಿಸಿಕೊಳ್ಳಲಾಗಿದೆ.
ಆಂಧ್ರ ಮೂಲದ ಎಸ್.ಕೆ. ಕೃಪಾರಾವ್, ಮಲ್ಲೇಲ ಕೊಂಡಾರೆಡ್ಡಿ ಬಂಧಿತರು. 65 ಗ್ರಾಂ ಬಂಗಾರದ ಮಾಂಗಲ್ಯ ಸರಗಳು, 2 ಬೈಕ್ಗಳನ್ನು ಸೋಮವಾರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜ.27ರಂದು ಮಾದನಹಳ್ಳಿ ಲಕ್ಷ$್ಮಮ್ಮ (70) ಎಂಬುವವರು 22 ಗ್ರಾಂ ಮಾಂಗಲ್ಯಸರ, ಲಕ್ಷಿ$್ಮ ಬೊಟ್ಟು, ಚೈನ್ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಿದರು. ದೂರಿನ ಮೇರೆಗೆ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಕೃಪಾರಾವ್ ವಿರುದ್ಧ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಸರಕಳ್ಳತನ, ಮಲ್ಲೇಲ ಕೊಂಡಾರೆಡ್ಡಿ ವಿರುದ್ಧ 30ಕ್ಕೂ ಹೆಚ್ಚು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಕುಶಾಲ ಚೌಕ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಜಗನ್ನಾಥ್ ರೈ, ಡಿವೈಎಸ್ಪಿ ಆರ್.ಪ್ರಕಾಶ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಆರೋಪಿಗಳನ್ನು ಬಂಧಿಸಿದ್ದಾರೆ.