ಹೊಸಕೋಟೆ ಠಾಣೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ವಿ.ಚಂದ್ರಕಾಂತ, ಹೊಸಕೋಟೆ ವಿಭಾಗದ ಪೊಲೀಸ್ ಡಿವೈಎಸ್ಪಿ ಮಲ್ಲೇಶ್, ಆರಕ್ಷಕ ನಿರೀಕ್ಷಕ ಗೋವಿಂದ್, ಪಿಎಸ್ಐ ಮುನಿರಾಜ್, ಸಿಬ್ಬಂದಿ ಗೋಪಾಲ ಕೃಷ್ಣ ಇತರರು ಇದ್ದರು.
ಹೊಸಕೋಟೆ : ಮೋಜು ಮಸ್ತಿಗಾಗಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಹೊಸಕೋಟೆ ಪೊಲೀಸರು, < 55 ಲಕ್ಷ ಮೌಲ್ಯದ 50 ವಿವಿಧ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆ ಮಾಲೂರಿನ ಕೆ.ನರಸಿಂಹಮೂರ್ತಿ (46), ಆತನ ಸ್ನೇಹಿತ ಪ್ರಸಾದ್ (32) ಬಂಧಿತರು. ಕಾಡುಗೋಡಿಯ ುಡ್ ಕಾಪೋರ್ರೇಷನ್ ಆ್ ಇಂಡಿಯಾ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಹಣದ ಅವಶ್ಯಕತೆ ಇದ್ದಾಗ ದ್ವಿಚಕ್ರವಾಹನ ಕದ್ದು ಆಂಧ್ರಪ್ರದೇಶದಲ್ಲಿರುವ ತನ್ನ ಸ್ನೇಹಿತ ಪ್ರಸಾದ್ಗೆ ನೀಡುತ್ತಿದ್ದ. ಕದ್ದ ಬೈಕ್ಗಳನ್ನು ಮಾರಾಟ ಮಾಡಿ ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಆರೋಪಿ ನರಸಿಂಹಮೂರ್ತಿ ಕೆಲ ವರ್ಷಗಳ ಹಿಂದೆ ಆಂಧ್ರದ ನಲ್ಲೂರಿನ ಬಳಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಸ್ನೇಹಿತನಾಗಿದ್ದ ಪ್ರಸಾದ್ ಕದ್ದ ಬೈಕ್ಗಳನ್ನು ಸ್ಥಳಿಯ ಗ್ರಾಮಸ್ಥರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿಸಿಕೊಡುವಲ್ಲಿ ಸಹಕಾರ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಹೊಸಕೋಟೆ ವಿಭಾಗದ ಡಿವೈಎಸ್ಪಿ ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಆರಕ್ಷಕ ನಿರೀಕ್ಷಕ ಗೋವಿಂದ್ ನೇತೃತ್ವದಲ್ಲಿ ಪಿಎಸ್ಐ ಮುನಿರಾಜ್, ಸಿಬ್ಬಂದಿ ಗೋಪಾಲ ಕೃಷ್ಣ, ಜಗನ್ನಾಥ, ಅಪ್ರೋಜ್, ದತ್ತಾತ್ರೇಯ, ರಮೇಶ್, ಬಸವರಾಜ ಬಕಾಲಿ, ಸತೀಶ್, ನಾರಾಯಣ, ಅಂಬರೀಶ ಕಾರ್ಯಾಚರಣೆ ನಡೆಸಿದ್ದರು.
ಚಿನ್ನಾಭರಣ ಕಳವು : ಈ ಹಿಂದೆ ನಲ್ಲೂರಿನ ಬಳಿ ಚಿನ್ನಾಭರಣ ಕಳವು ಪ್ರಕರಣದಲ್ಲಿ ಈ ಇಬ್ಬರೂ ಆರೋಪಿಗಳು ಕೈಚಳಕ ತೋರಿ ಸಿಕ್ಕಿ ಬಿದ್ದಿದ್ದು, ಆಂಧ್ರಪ್ರದೇಶದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೊಸಕೋಟೆಯಲ್ಲಿ ಬೈಕ್ ಕಳವು : ಹೊಸಕೋಟೆ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ದೂರು ಬಂದ ಕೂಡಲೇ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಪೊಲೀಸರು, ಕೆಲವೇ ಗಂಟೆಗಳಲ್ಲಿ ಬೈಕ್ ಹಾಗೂ ಕಳವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯದ ಇಂಚಿಂಚೂ ಬಾಯ್ಬಿಟ್ಟಿದ್ದಾನೆ. ನಂತರ ಪೊಲೀಸರು ನಲ್ಲೂರಿನ ಪ್ರಸಾದ್ ಹಾಗೂ ಕದ್ದ 50 ಬೈಕ್ಗಳ ಮಾಹಿತಿ ಪಡೆದು ವಶಕ್ಕೆ ಪಡೆದರು.
ವಿವಿಧ ಠಾಣೆಯಲ್ಲಿ ದೂರು ದಾಖಲು : ದ್ವಿಚಕ್ರ ವಾಹನ ಕದ್ದು ಸಿಕ್ಕಿಬಿದ್ದ ನರಸಿಂಹಮೂರ್ತಿ ವಿರುದ್ಧ ಹೊಸಕೋಟೆ ಠಾಣೆಯಲ್ಲಿ 5, ಮಾಲೂರಿನಲ್ಲಿ 18, ಬಂಗಾರಪೇಟೆಯಲ್ಲಿ 6, ಕಾಡುಗೋಡಿಯಲ್ಲಿ 5, ಕೋಲಾರ ನಗರದಲ್ಲಿ 1, ಬೇತಮಂಗಲದಲ್ಲಿ 1, ಕಾಟನ್ಪೇಟೆ ಠಾಣೆಯಲ್ಲಿ 1 ಹಾಗೂ ಇತರ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿವೆ.
ಮಾಲೀಕರಿಗೆ ವಾಪಸ್ : ರಾಜ್ಯದ ವಿವಿಧ ಜಿಲ್ಲೆಗಳ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿರುವ ವರದಿ ಬಂದಿದ್ದು, ಬೈಕ್ ಕಳೆದುಕೊಂಡವರಿಗೆ ಆಯಾ ಠಾಣೆ ಅಧಿಕಾರಿಗಳ ಮೂಲಕ ವಾಹನಗಳನ್ನು ಮರಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂ.ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ವಿ.ಚಂದ್ರಕಾಂತ ತಿಳಿಸಿದ್ದಾರೆ.
ಪೊಲೀಸರ ಕ್ರಮಕ್ಕೆ ಶ್ಲಾನೆ : ಹೊಸಕೋಟೆ ಪೊಲೀಸರ ಕಾರ್ಯಾಚರಣೆಗೆ ಶ್ಲಾನೆ ವ್ಯಕ್ತಪಡಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ವಿ.ಚಂದ್ರಕಾಂತ ಅವರು ಮುಂದಿನ ಜಿಲ್ಲಾ ಪೊಲೀಸ್ ಪರೇಡ್ನಲ್ಲಿ ಹೊಸಕೋಟೆ ಪೊಲೀಸರಿಗೆ ಪ್ರಶಂಸಾ ಪತ್ರ ಹಾಗೂ ಬಹುಮಾನ ನೀಡುವುದಾಗಿ ಘೋಷಿಸಿದರು.
ಬ್ರಹ್ಮರಥೋತ್ಸವ ನಿರ್ವಹಣೆಗೆ ಮೆಚ್ಚುಗೆ : ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಶ್ರೀ ದ್ರೌಪದಾಂಬಾ ದೇವಿ ಕರಗ ಮಹೋತ್ಸವದಲ್ಲಿ ಪೊಲೀಸ್ ಇಲಾಖೆ ನಿರ್ವಹಿಸಿದ ಕಾರ್ಯಕ್ಷಮತೆ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ರಥೋತ್ಸವದಲ್ಲಿ ಸರಗಳವು, ದ್ವಿಚಕ್ರವಾಹನ ಕಳವು, ದೊಂಬಿ, ಗಲಾಟೆ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಈ ಬಾರಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಡಿವೈಎಸ್ಪಿ ಮಲ್ಲೇಶ್ ಅವರ ಕಾರ್ಯತಂತ್ರ ಕಾರಣವಾಗಿದೆ. ಈ ಬಾರಿ ನೂತನ ರಥದಲ್ಲಿ ಮೆರವಣೆಗೆ ಮಾಡುವುದರಿಂದ ಸಮಸ್ಯೆ ರಹಿತ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ ಎಂದಿದ್ದರು. ಅದರಂತೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಶಾಸಕ ಶರತ್ ಬಚ್ಚೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಎಂ.ವಿ.ಚಂದ್ರಕಾಂತ ತಿಳಿಸಿದರು.