ಪ್ರಮುಖ ಮುಖ್ಯಾಂಶಗಳು
ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅಧ್ಯಕ್ಷತೆಯಲ್ಲಿ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದ್ದು, ಹಿರಿಯ ಪತ್ರಕರ್ತೆ ಸರಿತಾ ರೈ 2025ನೇ ಸಾಲಿನ ವಿಶೇಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಗೆ ಡಿ. ಕುಮಾರ ಸ್ವಾಮಿ, ಬನಶಂಕರ ಆರಾಧ್ಯ, ಹೇಮಾ ವೆಂಕಟ್, ವೈ.ಎಲ್. ಮಂಜುನಾಥ್, ಅನಂತ ನಾಡಿಗ್, ಗುರುರಾಜ್ ವಾಮನರಾವ್ ಜಮಖಂಡಿ, ಎಂ.ಎಂ. ಪಾಟೀಲ್, ಎಲ್. ವಿವೇಕಾನಂದ, ಆರ್.ಪಿ. ಭರತ್ರಾಜ್ ಸಿಂಗ್, ಪ್ರೊ. ಪೂರ್ಣಾನಂದ, ಮೊಹಮ್ಮದ್ ಅಸದ್, ತುಂಗರೇಣುಕಾ, ಮೊಹಿಯುದ್ದೀನ್ ಪಾಷಾ, ರುದ್ರಪ್ಪ ಅಸಂಗಿ, ಸತೀಶ್ ಆಚಾರ್ಯ, ಸೋಮಶೇಖರ್ ಪಡುಕೆರೆ, ಗುಲ್ನಾರ್ ಮಿಝಾ, ಗಣೇಶ ಹೆಗಡೆ ಇಟಗಿ, ಎಚ್.ಎನ್. ಆರತಿ, ಕೆ. ಲಕ್ಷ್ಮಣ, ಉಮಾ ಅನಂತ್, ಮಂಜುನಾಥ ಮಹಾಲಿಂಗಪೂರ, ಟಿ. ಮಂಜುನಾಥ, ಪ್ರತಿಮಾ ನಂದಕುಮಾರ್, ಅಮಿತ್ ಉಪಾಧ್ಯೆ, ಪ್ರಭುಸ್ವಾಮಿ ನಾಟೇಕರ್, ಎನ್. ಸಿದ್ದೇಗೌಡ, ಸಂಜೀವ ಕಾಂಬ್ಳೆ, ಕೆ.ಆರ್. ನೀಲಕಂಠ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದೆ.
ದತ್ತಿ ಪ್ರಶಸ್ತಿಗಳು: ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಗೆ ಕೊಪ್ಪಳದ ಸುವರ್ಣ ಗಿರಿ ಪತ್ರಿಕೆ, ಅತ್ಯುತ್ತಮ ಮಾನವೀಯ ವರದಿಗೆ ಮೈಸೂರು ದಿಗಂತ ಪ್ರಶಸ್ತಿಗೆ ಬೆಳಗಾವಿಯ ಸಂತೋಷ ಈ. ಚಿನಗುಡಿ, ಅಭಿಮಾನಿ ಪ್ರಶಸ್ತಿಗೆ ಸಿಂಧನೂರಿನ ಚಂದ್ರಶೇಖರ ಬೆನ್ನೂರು, ಪ್ರಜಾ ಸಂದೇಶ ಪ್ರಶಸ್ತಿಗೆ ಕೊಪ್ಪಳದ ವೈ. ನಾಗರಾಜು, ಡಾ. ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ಡಾ. ಎ. ನಾರಾಯಣ, ಅರಗಿಣಿ ಪ್ರಶಸ್ತಿಗೆ ಚೇತನ್ ನಾಡಿಗೇರ, ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿಗೆ ಸಿದ್ದೇಶ್ ತ್ಯಾಗಟೂರು, ಸಿ.ವಿ. ರಾಜಗೋಪಾಲ್ ಪ್ರಶಸ್ತಿಗೆ ಪ್ರಹ್ಲಾದ್ ಕುಳಲಿ, ಕೆಯುಡಬ್ಲ್ಯುಜೆ ಪ್ರಶಸ್ತಿಗೆ ಕೆ. ಆನಂದ ಶೆಟ್ಟಿ ಆಯ್ಕೆಯಾಗಿದ್ದಾರೆ.