ಹುಬ್ಬಳ್ಳಿ- ಧಾರವಾಡ ರಸ್ತೆಯ ರಾಯಾಪುರ ಬಳಿ ಬೈಕ್​ ಅಪಘಾತ  
ರಾಜ್ಯ

ಬೈಕ್​ ಸವಾರರಿಬ್ಬರು ಸಾವು

ಮಂಜುನಾಥ ಅಂಗಡಿ
ಧಾರವಾಡ: ಹುಬ್ಬಳ್ಳಿ- ಧಾರವಾಡ ರಸ್ತೆಯ ರಾಯಾಪುರ ಬಳಿ ಬೈಕ್​ ಅಪಘಾತ ಸಂಭವಿಸಿ ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಟನೆ ಭಾನುವಾರ ರಾತ್ರಿ 12 ಸುಮಾರಿಗೆ ನಡೆದಿದೆ. ವಿಜಯಪುರದ ಪ್ರಜ್ವಲ್​ (26) ಹುಬ್ಬಳ್ಳಿಯ ಶಂಕರ (26) ಮೃತ ಯುವಕರು. ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ವೇಳೆ ಬೈಕ್​ ಸ್ಕಿಡ್​ ಆಗಿ ಬಿದ್ದ ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ. ಧಾರವಾಡ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಧಾರವಾಡ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.