ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದವರನ್ನು ಬೇಗೂರು ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದಿರುವುದು. 
ರಾಜ್ಯ

ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಇಬ್ಬರ ಬಂಧನ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ
  • ಬೇಗೂರು ಪೊಲೀಸರು ಕಾರ್ಯಾಚರಣೆ
ಗುಂಡ್ಲುಪೇಟೆ: ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದವರನ್ನು ತಾಲೂಕಿನ ಬೇಗೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮಾಲು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ಸಂಜೆ ಗೂಡ್ಸ್ ಆಟೋದಲ್ಲಿ ಅಕ್ಕಿಯನ್ನು ಹೊರೆಯಾಲ ರಸ್ತೆಯಲ್ಲಿ ಸಾಗಾಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೇಗೂರು ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎಚ್.ಕೆ.ನವೀನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಂಬರ್ ಫ್ಲೇಟ್ ಇಲ್ಲದ ಟಾಟಾ ಏಸ್ ಆಟೋವನ್ನು ಪರಿಶೀಲಿಸಿದಾಗ ಆಟೋದಲ್ಲಿ 3 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿದೆ.
ಆಟೋ ಚಾಲಕ ನಂಜನಗೂಡು ತಾಲೂಕಿನ ಹಲ್ಲರೆಯ ಮಹಮದ್ ಅಲಿಷಾ ಹಾಗೂ ಮತ್ತೊಬ್ಬ ಹೊರೆಯಾಲ ಗ್ರಾಮದ ಅಜಿತ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.