ಕೇಬಲ್​ ಡ್ರಮ್​ ಕದ್ದ ಇಬ್ಬರ ಸೆರೆ cable drum 
ರಾಜ್ಯ

ಕೇಬಲ್​ ಡ್ರಮ್​ ಕದ್ದ ಇಬ್ಬರ ಸೆರೆ cable drum

ಚಿಕ್ಕಬಳ್ಳಾಪುರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ತಲೆಮರೆಸಿಕೊಂಡವರಿಗಾಗಿ ಶೋಧ
ಚಿಂತಾಮಣಿ: ಪಿ.ಎಂ.ಕುಸುಮ್​&ಸಿ ಸೋಲಾರ್​ ಸ್ಕೀಮ್​ನಲ್ಲಿ ಸೋಲಾರ್​ ಪ್ಲಾಂಟ್​ ಕಾಮಗಾರಿ ಬಳಿ ಕೇಬಲ್​ ಕಳವು ಮಾಡಿದ್ದ ಆರು ಮಂದಿ ಖದೀಮರ ಪೈಕಿ ಇಬ್ಬರನ್ನು ಬಂಧಿಸಿರುವ ಬಟ್ಲಹಳ್ಳಿ ಪೊಲೀಸರು, 3.70 ಲಕ್ಷ ರೂ. ಹಾಗೂ ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ.cable drum
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಸ್ಟುಪಲ್ಲಿ ನಿವಾಸಿ ರಾಧಾಕೃಷ್ಣ(47), ಹೊಸೂರು ತಾಲೂಕು ಬೆಳತೂರು ಅಂಚೆ ಚೂಡಪುರಂ ವಿಒಸಿ ನಗರದ ನಿವಾಸಿ ಚಾಲಕ ಜನಾರ್ದನ್​ (32) ಬಂಧಿತರು.
ಪರಾರಿಯಾಗಿರುವವರ ಪೈಕಿ ಹೊಸೂರು ತಾಲೂಕು ಬೆಳತೂರು ಅಂಚೆ ಚೂಡಪುರಂ ವಿಒಸಿ ನಗರದ ನಿವಾಸಿ ಶಿವಕುಮಾರ್​(23) ವಿಳಾಸ ಪತ್ತೆ ಮಾಡಲಾಗಿದ್ದು, ತಲೆಮರೆಸಿಕೊಂಡಿರುವವರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
ಕೆಂಚಾರ್ಲಹಳ್ಳಿ ಪೊಲೀಸ್​ ಇನ್​ಸ್ಪೆಕ್ಟರ್​ ನಾರಾಯಣಸ್ವಾಮಿ, ಬಟ್ಲಹಳ್ಳಿ ಠಾಣೆ ಪಿಎಸ್​ಐ ಶಿವಕುಮಾರ್​, ಸಿಬ್ಬಂದಿ ವಿಶ್ವನಾಥ, ಸರ್ವೇಶ್​, ವೆಂಕಟೇಶ್​, ಪ್ರವಿಣ್​ ಕುಮಾರ್​, ನವೀನ್​ ಚಿಕ್ಕಬಳ್ಳಾಪುರ ಪೊಲೀಸ್​ ಅಧೀಕ್ಷಕರ ಕಚೇರಿ ರವೀಂದ್ರ ಕುಮಾರ್​ ಮುನಿಕೃಷ್ಣ ಕಾರ್ಯಾಚರಣೆ ಕೈಗೊಂಡಿದ್ದರು.
ಪ್ರಕರಣವೇನು?: ಚಿಂತಾಮಣಿ ತಾಲೂಕಿನ ನಲ್ಲಗುಟ್ಟಹಳ್ಳಿ ಬಳಿ 25 ಎಕರೆ ಪ್ರದೇಶದಲ್ಲಿ ಬೆಂಗಳೂರು ಅಮೃತ ಕನ್ಸ್​ಟ್ರಕ್ಷನ್​ ಪ್ರೆವೇಟ್​ ಲಿಮಿಟೆಡ್​ನಿಂದ ಪಿ.ಎಂ. ಕುಸುಮ್​&ಸಿ ಸೋಲಾರ್​ ಸ್ಕೀಮ್​ನಲ್ಲಿ ಸೋಲಾರ್​ ಪ್ಲಾಂಟ್​ ಕಾಮಗಾರಿ ಮಾಡುತ್ತಿದ್ದು, ಕಾಮಗಾರಿಗೆ ಸಂಬಂಧಿಸಿದಂತೆ ಫೆ.9ರಂದು ಮಧ್ಯಾಹ್ನ 7 ಕೇಬಲ್​ ಡ್ರಮ್​ ಸರಬರಾಜು ಆಗಿದ್ದು, ಈ ಪೈಕಿ ಸುಮಾರು 505 ಮೀಟರ್​ ಉದ್ದವಿರುವ 1 ಕೇಬಲ್​ ಡ್ರಮ್​ಅನ್ನು ಫೆ.16ರಂದು ಮಧ್ಯರಾತ್ರಿ ಕಳವು ಮಾಡಲಾಗಿತ್ತು. ಈ ಬಗ್ಗೆ ಪ್ರಾಜೆಕ್ಟ್​ ಮ್ಯಾನೇಜರ್​ ನೀಡಿದ ದೂರಿನ ಮೇಲೆ ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.