ಬಂಧಿತ ಸರಗಳ್ಳರಿಂದ ವಶಪಡಿಸಿಕೊಂಡ ಮಾಲಿನೊಂದಿಗೆ ಕುದೂರು ಪೊಲೀಸರು. 
ರಾಜ್ಯ

ಮಹಿಳೆಯ ಚಿನ್ನದ ಸರ ಕದ್ದ ಇಬ್ಬರ ಸೆರೆ

ರೇಷ್ಮೆ ನಗರ ಡೆಸ್ಕ್

ಕುದೂರು :

ಸ್ಟ್ರೋಕ್ (ಲಕ್ವ) ಆದವರಿಗೆ ಔಷಧ ಕೊಡುವ ನೆಪದಲ್ಲಿ ತಿಪ್ಪಸಂದ್ರ ಹೋಬಳಿಯ ಗಂಗೋನಹಳ್ಳಿಗೆ ಬಂದು ಮಹಿಳೆಯ ಚಿನ್ನದ ಸರ ದೋಚಿದ್ದ ಇಬ್ಬರನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಆಗರದಹಳ್ಳಿ ಕ್ಯಾಂಪ್‌ನ ಸಿದ್ದರ ಕಾಲನಿ ನಿವಾಸಿ ಶ್ರೀನಿವಾಸ್ (32) ಹಾಗೂ ಭದ್ರಾವತಿ ತಾಲೂಕಿನ ಹಂಚಿನಸಿದ್ದಾಪುರದ ಸೋಮಶೇಖರ್(40) ಬಂಧಿತರು.

ದ ಸರವನ್ನು ಆ.20ರಂದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂ.ದಕ್ಷಿಣ ಜಿಲ್ಲೆಯ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಗೌಡ, ಅಪರ ಪೊಲೀಸ್ ಅಧೀಕ್ಷಕರಾದ ಎನ್.ಎಚ್ ರಾಮಚಂದ್ರಯ್ಯ ಹಾಗೂ ಡಿ.ಎಸ್ ರಾಜೇಂದ್ರ, ಮಾಗಡಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಪಿ. ರವಿ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು.
ಕುದೂರು ಇನ್‌ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳಾದ ಕೃಷ್ಣಮೂರ್ತಿ, ಭೀಮೇಶಯ್ಯ, ಪಿಎಸ್‌ಐಗಳಾದ ತಿಪ್ಪಯ್ಯ, ಶಿವಾನಂದ ಹಾಗೂ ಸಿಬ್ಬಂದಿ ಸೂರ್ಯ ಕುಮಾರ್, ರವಿ, ಶಿವರಾಜು, ಲೋಹಿತ್‌ಕುಮಾರ್, ದರ್ಶನ್, ಮಹಾದೇವ ಶೆಟ್ಟಿ, ಅಭಿಷೇಕ್, ಚಾಲಕ ಸಂತೋಷ್ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಮಹದೇವ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.