Two arrested for gambling 
ರಾಜ್ಯ

ಜೂಜಾಡುತ್ತಿದ್ದ ಇಬ್ಬರ ಸೆರೆ

ಚಿಕ್ಕಬಳ್ಳಾಪುರ ಡೆಸ್ಕ್

ಚಿಂತಾಮಣಿ: ತಾಲೂಕಿನ ಚಿಕ್ಕಪುರದ ಕೆರೆ ಅಂಗಳದಲ್ಲಿ ಜೂಜಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 3,500 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ದೊಡ್ಡಬೊಮ್ಮನಹಳ್ಳಿಯ ವೀರಭದ್ರಪ್ಪ (65) ಮತ್ತು ಚಿಕ್ಕಪುರಯ ರಮೇಶ್​ (46) ಬಂಧಿತರು. ಖಚಿತ ಮಾಹಿತಿ ಮೇರೆಗೆ ಇನ್​ಸ್ಪೆಕ್ಟರ್​ ಎಸ್​.ಶಿವರಾಜು ಮಾರ್ಗದರ್ಶನದಲ್ಲಿ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.

ಚಿನ್ನಿ ಮತ್ತು ಬುಜ್ಜಿ ಅಲಿಯಾಸ್​ ಮುರಳಿ ಎಂದು ಗುರುತಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.