ಗಾಯತ್ರಿ ಶಾಂತೇಗೌಡ ಮತ್ತು ಉಮಾಶ್ರೀ 
ರಾಜ್ಯ

ಸಚಿವರ ಪ್ರಮಾಣವಚನಕ್ಕೂ ಮುನ್ನ ಮತ್ತೆ ಟ್ವಿಸ್ಟ್; ಗಾಯತ್ರಿ ಶಾಂತೇಗೌಡಗೆ ಕೊಕ್ ಸಾಧ್ಯತೆ; ಉಮಾಶ್ರೀ ಪರ ಸಿದ್ದರಾಮಯ್ಯ ಬ್ಯಾಟಿಂಗ್ | Umashree

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ಸೇರುವ ನೂತನ ಸಚಿವರು ಯಾರೆಂಬ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಲ್ಲಿ ಮತ್ತೊಮ್ಮೆ ಮಹತ್ವದ ಬದಲಾವಣೆ ನಡೆಯುವ ಸಾಧ್ಯತೆ ಇದೆ. ಗಾಯತ್ರಿ ಶಾಂತೇಗೌಡ ಬದಲಿಗೆ ಉಮಾಶ್ರೀಗೆ(Umashree) ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಎಐಸಿಸಿ ಬಿಡುಗಡೆ ಮಾಡಿದ 20 ಸಚಿವರ ಪಟ್ಟಿಯಲ್ಲಿ ನೂತನ ಎಂಎಲ್​ಸಿ ಗಾಯತ್ರಿ ಶಾಂತೇಗೌಡ ಹೆಸರಿತ್ತು. ಆದರೆ, ಕೊನೇ ಕ್ಷಣದಲ್ಲಿ ಟ್ವಿಸ್ಟ್​ ಎನ್ನುವಂತೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಜಿ ಸಚಿವೆ ಮತ್ತು ಎಂಎಲ್​ಸಿ ಉಮಾಶ್ರೀ ಪರ ಬ್ಯಾಟ್ ಬೀಸಿದ್ದು, ಸ್ವತಃ ಗಾಯತ್ರಿ ಶಾಂತೇಗೌಡ ಅವರಿಗೆ ಕಾಲ್ ಮಾಡಿ ಸಚಿವ ಸ್ಥಾನದಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ.
ಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿರುವ ಸಿದ್ದರಾಮಯ್ಯನವರು, ನೂತನ ಸಚಿವರ ಪಟ್ಟಿಯಿಂದ ಗಾಯತ್ರಿ ಅವರ ಹೆಸರು ತೆಗದು ಉಮಾಶ್ರಿ ಅವರನ್ನು ಸೇರಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಸಚಿವ ಸ್ಥಾನದ ಆಸೆಯಲ್ಲಿದ್ದ ಮೊದಲ ಬಾರಿ ಎಂಎಲ್​ಸಿ ಆಗಿದ್ದ ಗಾಯತ್ರಿಯವರಿಗೆ ನಿರಾಶೆ ಉಂಟಾಗಿದೆ.
ನೂತನ ಸಚಿವರ ಪಟ್ಟಿ
1. ಪಿ.ಎಂ.ನರೇಂದ್ರಸ್ವಾಮಿ
2. ಶಿವರಾಜ್ ತಂಗಡಗಿ
3. ರುದ್ರಪ್ಪ ಲಮಾಣಿ
4. ಕೆ.ಎಸ್.ಬಸವಂತಪ್ಪ
5. ಬಿ.ನಾಗೇಂದ್ರ
6. ಟಿ.ರಘುಮೂರ್ತಿ
7. B. Z. ಜಮೀರ್ ಅಹಮದ್ ಖಾನ್
8. ರಿಜ್ವಾನ್ ಅರ್ಷದ್
9. ಸಂತೋಷ್ ಲಾಡ್
10. ಮಧು ಬಂಗಾರಪ್ಪ
11. ಪುಟ್ಟರಂಗಶೆಟ್ಟಿ
12. ಎಸ್​.ಎಸ್​. ಮಲ್ಲಿಕಾರ್ಜುನ್​ ( ಆರಂಭದಲ್ಲಿ ಮಂಕಾಳ ವೈದ್ಯರ ಹೆಸರಿತ್ತು)
13. ಡಾ. ಅಜಯ್ ಸಿಂಗ್
14. ಎನ್. ಚಲುವರಾಯ ಸ್ವಾಮಿ
15. ಕೆ.ಎಂ.ಶಿವಲಿಂಗೇಗೌಡ
16. ಎಚ್.ಸಿ.ಬಾಲಕೃಷ್ಣ
17. ಶ್ರೀಮತಿ. ಗಾಯತ್ರಿ ಶಾಂತೇಗೌಡ
18. ಬಸವರಾಜ ರಾಯರೆಡ್ಡಿ
19. ವಿಜಯಾನಂದ ಕಾಶಪ್ಪನವರ್
20. ಲಕ್ಷ್ಮಣ ಸವದಿ

ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವು ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ನಡೆಯಲಿದ್ದು, ಸಿದ್ಧತೆಗಳು ನಡೆಯುತ್ತಿವೆ. ಪಕ್ಷದ ಹೈಕಮಾಂಡ್ ನಾಯಕರು ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವಾಗ ಜಾತಿ, ಧರ್ಮ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಹಾಗೂ ವಿವಿಧ ಸಾಮಾಜಿಕ ವರ್ಗಗಳ ನಡುವಿನ ಸಮತೋಲನವನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಆರು ಮಂದಿಗೆ ಪುನಃ ಅವಕಾಶ ಕಲ್ಪಿಸಿಕೊಡಲಾಗಿದೆ. ಸದ್ಯಕ್ಕೆ ನೂತನ ಸಚಿವರು ಯಾರೆಂದು ತಿಳಿದಿದ್ದು, ಇನ್ನೂ ಯಾರಿಗೆ ಯಾವ ಖಾತೆ ಎಂಬ ಸಸ್ಪೆನ್ಸ್​ ಮಾತ್ರ ಹಾಗೇ ಉಳಿದಿದೆ.