ಬಸವಕಲ್ಯಾಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಮೊಬೈಲ್ ಬಿಡಿ&ಪುಸ್ತಕ ಹಿಡಿ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಖಂಡಾಳೆ ಮಾತನಾಡಿದರು. ಅನಿತಾ ಸಾವಳ್ಕರ್, ವಿಠ್ಠಲರೆಡ್ಡಿ, ಉದ್ಧವರಾವ ಉಪಾಸೆ, ಪರ್ವೇಜ್ ಮೋಮಿನ್ ಇದ್ದರು.
- ವಿದ್ಯಾರ್ಥಿಗಳಿಗೆ ಡಾ.ಬಸವರಾಜ ಖಂಡಾಳೆ ಕಿವಿಮಾತು
- ಬಸವಕಲ್ಯಾಣ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾರ್ಯಕ್ರಮ
ಬಸವಕಲ್ಯಾಣ: ಮೊಬೈಲ್ನಿಂದ ದೂರವಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಶ್ರೀ ಬಸವೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಸವರಾಜ ಖಂಡಾಳೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಬಾಲಕರ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ಏರ್ಪಡಿಸಿದ್ದ ಮೊಬೈಲ್ ಬಿಡಿ&ಪುಸ್ತಕ ಹಿಡಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮನೆಯಲ್ಲಿ ಮಕ್ಕಳು ಮೊಬೈಲ್ನಿಂದ ದೂರವಿರುವಂತೆ ಪಾಲಕರು ನೋಡಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಕುರಿತು ಶಾಲೆಯಲ್ಲಿ ಅರಿವು ಮೂಡಿಸಬೇಕಿದೆ ಎಂದರು.
ಉಪನ್ಯಾಸಕ ವಿಠ್ಠಲರೆಡ್ಡಿ ಮಾತನಾಡಿ, ಶ್ರಮವಹಿಸಿ ಓದುವುದರಿಂದ ಬದುಕು ರೂಪಿಸಿಕೊಳ್ಳುವ ಜತೆಗೆ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯ. ಪುಸ್ತಕ ಜ್ಞಾನ, ಸಂಸ್ಕಾರ ಬೆಳೆಸುವ ಜತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾಯೆರ್ ಅನಿತಾ ಸಾವಳ್ಕರ್ ಮಾತನಾಡಿ, ಗ್ರಂಥಾಲಯಗಳು ವಿದ್ಯಾರ್ಥಿಗಳ ಜೀವನ ರೂಪಿಸುವ ಜ್ಞಾನಕೇಂದ್ರಗಳು. ಮೊಬೈಲ್ ಬಿಟ್ಟು ಪುಸ್ತಕ ಹಿಡಿದು ಓದಬೇಕು. ಅಂದಾಗಲೇ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದರು.
ಪ್ರಮುಖರಾದ ಉದ್ಧವರಾವ ಉಪಾಸೆ, ಪರ್ವೇಜ್ ಮೋಮಿನ್, ಮಲ್ಲಿಕಾರ್ಜುನ ರೆಡ್ಡಿ, ರಾಜೇಂದ್ರ ಟಿಳೆ, ಎಂಡಿ ಶರೀಫ್, ರಫಿಯೊದ್ದೀನ್, ಸಂಜೀವ ಸೂರ್ಯವಂಶಿ, ಪ್ರವಿಣ್ ಸೋಮವಂಶಿ, ಸುಜಾತಾ ಖೈರಟಕರ್, ವಿಜಯಾ ಜಾಧವ್, ನಾಜಿಯಾ, ಹಮೀದಾ ಪಠಾಣ್, ವೀರಭದ್ರಪ್ಪ, ಮಂಜುಳಾ, ಅಲ್ಕಾ ಮಠಪತಿ, ಸುನಿತಾ ಕುಪ್ಪೆ, ವಿಶಾಲ, ಬಸವ ಇದ್ದರು. ಶೋಭಾ ಮಠಪತಿ ಸ್ವಾಗತಿಸಿದರು. ಎಂಡಿ ಲತೀಫ್ ವಂದಿಸಿದರು. ಡಾ.ಸಂಜೀವಕುಮಾರ ನಡುಕರ ನಿರೂಪಣೆ ಮಾಡಿದರು.