Trusting in God will solve all problems.
ಕೊರಟಗೆರೆ: ಇಷ್ಟಾರ್ಥಗಳನ್ನು ದೇವರಲ್ಲಿ ಮೊರೆಯಿಡಬೇಕು. ನಾವು ದೇವರನ್ನು ನಂಬಿದರೆ ದೇವರು ನಮ್ಮನ್ನು ರಕ್ಷಿಸುತ್ತಾನೆ ಎಂದು ಶಿರಾ ತಾಲೂಕಿನ ಸ್ಪಟಿಕಪುರಿ ಮಹಾಸಂಸ್ಥಾನ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಜೆ.ಕೆ.ಪಾಳ್ಯದಲ್ಲಿ ಸೋಮವಾರ ಕಾಲಬೈರವೇಶ್ವರಸ್ವಾಮಿ ದೇವಾಲಯ ಸೇವಾ ಟ್ರಸ್ಟ್ನಿಂದ ಆಯೋಜಿಸಿದ್ದ 70ನೇ ವರ್ಷದ ಶ್ರೀ ಕಾಲಬೈರವಾಷ್ಟಮಿ ಪೂಜಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಾಲಭೈರೆವೇಶ್ವರ ಸ್ವಾಮಿ ಸನಾತನ ಕಲಾದಿಂದಲೂ ಇತಿಹಾಸ ಪ್ರಸ್ತಿದ್ಧ ದೇವಾಲಯವಾಗಿದ್ದು, ರಾಜ್ಯ ಮತ್ತು ರಾಷ್ಟ್ರದ ಪ್ರಬಲ ಸಮುದಾಯಗಳ ಆರಾದ್ಯ ದೈವವಾಗಿದೆ. ಸಮಾಜದಲ್ಲಿ ದುಷ್ಟರ ಸಂಹಾರಮಾಡಿ ಶಿಷ್ಟರನ್ನು ರಕ್ಷಿಸುವ ದೇವರಾಗಿದ್ದು, ಹುಲವಂಗಲದಲ್ಲಿ ನೆಲೆಸಿರುವ ಕಾಲಭೈರವೇಶ್ವರ ಇತಿಹಾಸ ಮತ್ತು ಪವಾಡಗಳನ್ನು ಸೃಷ್ಟಿಸಿರುವ ದೇವರಾಗಿದ್ದಾರೆ ಎಂದರು.
ಕಾರ್ಯಕ್ರಮಗಳನ್ನು ಕೇವಲ ಆಚರಣೆಗಾಗಿ ಮಾಡದೆ ಶ್ರದ್ಧಾ ಮತ್ತು ಭಕ್ತಿಪೂರ್ವಕವಾಗಿ ಮಾಡುವ ಮೂಲಕ ದೇವರನ್ನು ಸಂತೃಷ್ಟ ಮಾಡಬೇಕು ಎಂದು ಸೂಚಿಸಿದರು.
ಸ್ಥಳಿಯ ಮುಖಂಡರಾದ ರಾಮಚಂದ್ರಯ್ಯ, ಮೂಡ್ಲಗಿರಿಯಪ್ಪ, ಮುತ್ತುರಾಜು, ಶಿವಣ್ಣ, ಬೋಗಣ್ಣ, ಕಾಲಬೈರವೇಶ್ವರಸ್ವಾಮಿ ದೇವಾಲಯ ಸೇವಾ ಟ್ರಸ್ಟ್ನ ಪಧಾದಿಕಾರಿಗಳು, ಗ್ರಾಮಸ್ಥರು ನೂರಾರು ಭಕ್ತರು ಇದ್ದರು.