ನ್ಯಾಯಾಲಯದ ವಕೀಲರ ಸಂಘದಲ್ಲಿ ವಕೀಲರ ಸಂಘದಿಂದ ಆಯೋಜಿಸಿದ್ದ Lawyer ವಕೀಲರ ದಿನಾಚರಣೆ 
ರಾಜ್ಯ

ವಕೀಲರ ಪ್ರಾಮಾಣಿಕತೆಯಿಂದ ವಿಶ್ವಾಸ ಹೆಚ್ಚಳ Lawyer

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಶ್ರೇಣಿ ಅಪರ ನ್ಯಾಯಾಧೀಶ ಮುಜಫರ್​.ಎ.ಮಂಜರಿ ಅಭಿಮತ
ಬಂಗಾರಪೇಟೆ: ಸಮಾಜದಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಎಂದರೆ ವಕೀಲ ವೃತ್ತಿ. ವಕೀಲರು ಕಕ್ಷಿದಾರರ ನಂಬಿಕೆ ವಿಶ್ವಾಸ ಹಾಗೂ ಪ್ರಾಮಾಣಿಕತೆಯ ಪ್ರತಿಕವಾಗಿ ಕಾರ್ಯ ನಿರ್ವಹಿಸುವವರು Lawyer ಎಂದು ಹಿರಿಯ ಶ್ರೇಣಿ ಅಪರ ನ್ಯಾಯಾಧೀಶ ಮುಜಫರ್​.ಎ.ಮಂಜರಿ ಹೇಳಿದರು.
ನಗರದ ನ್ಯಾಯಾಲಯದ ವಕೀಲರ ಸಂಘದಲ್ಲಿ ವಕೀಲರ ಸಂಘದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆಯಲ್ಲಿ ಮಾತನಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ, ನ್ಯಾಯಾಧೀಶ ನಟೇಶ್​ ಮಾತನಾಡಿ, ಎಲ್ಲ ವಕೀಲರಿಗೆ ವಕೀಲರ ದಿನದ ಶುಭಾಶಯ ಕೋರಿದರು.
ನ್ಯಾಯಾಲಯದಲ್ಲಿ ರಾಜಿ ಸಂದಾನಗಳ ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಎಲ್ಲ ವಕೀಲರು ಶ್ರಮಿಸುತ್ತಿರುವುದು ಸ್ವಾಗತಾರ್ಹ. ಇದರಿಂದ ಸಾರ್ವಜನಿಕರಿಗೆ ನ್ಯಾಯಾಲಯದ ಮೇಲೆ ಇರುವ ನಂಬಿಕೆ ಇನ್ನಷ್ಟ್ಟು ಹೆಚ್ಚುತ್ತದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಕುಮದಿನಿ ಹಾಗೂ ತಿಮ್ಮರಾಜು, ಹಿರಿಯ ವಕೀಲ ಎಂ.ನಂಜುಂಡಪ್ಪ, ಜಯಪ್ರಕಾಶ್​, ಅಮರೇಶ್​, ಕೆ.ಸಿ.ಪ್ರಸಾದ್​ ರಾಮೇಗೌಡ, ಬಂಗಾರಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್​.ನಾರಾಯಣಪ್ಪ, ಕಾರ್ಯದರ್ಶಿ ಎಂ.ವಿಜಯಕುಮಾರ್​, ಉಪಾಧ್ಯಕ್ಷ ಆನಂದ್​. ಖಜಾಂಚಿ ಮಂಜುನಾಥ್​, ಸದಸ್ಯರಾದ ರವಿಚಂದ್ರ, ಅಭಿಲಾಷ್​, ವಕೀಲರಾದ, ಆರ್​.ರಮೇಶ್​, ರಂಗನಾಥ್​, ಅಮರೇಶ್​, ರಂಜಿತ್​, ಆಕಾಶ್​, ತನೂಜ್​, ಮಹಿಳಾ ವಕೀಲರಾದ ಚೆನ್ನಮ್ಮ, ಸರಸ್ವತಿ, ನಂದಿನಿ, ದಾಕ್ಷಾಯಿಣಿ, ಸುಮಾ ಇತರರು ಇದ್ದರು