ಮರಕುಂಬಿ ಗ್ರಾಮದಲ್ಲಿ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ಜಾತ್ರೆ ಅಂಗವಾಗಿ ಚಂಡಿಕಾಹೋಮ ಜರುಗಿತು. ಅಮರ ಸಿದ್ಧೇಶ್ವರ ಸ್ವಾಮೀಜಿ, ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶ, ಜಿ.ಬಿ.ಬಾಬು, ಮಹಾಂತೇಶ ಕೌಜಲಗಿ ಇತರರಿದ್ದರು.
ಬೈಲಹೊಂಗಲ: ಸಕಾಲಕ್ಕೆ ಮಳೆ, ಬೆಳೆ ಸಮೃದ್ಧವಾಗಿ ಅನ್ನದಾತನ ಅಭಿವೃದ್ಧಿಯಾಗಲಿ. ಲೋಕಕಲ್ಯಾಣವಾಗಿ ಜನರ ಸಕಲ ಸಂಕಷ್ಟಗಳು ದೂರವಾಗಿ ದೇವಿ ಆಶೀರ್ವಾದದಿಂದ ಸರ್ವರ ಇಷ್ಟಾರ್ಥ ಸಾಕಾರಗೊಳ್ಳಲೆಂಬ ಸದುದ್ದೇಶದಿಂದ ಚಂಡಿಕಾಹೋಮ ನೆರವೇರಿಸಲಾಗುತ್ತಿದೆ ಎಂದು ದೇವಸ್ಥಾನ ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶ ತಿಳಿಸಿದರು.
ತಾಲೂಕಿನ ಸುಕ್ಷೇತ್ರ ಮರಕುಂಬಿ ಗ್ರಾಮದಲ್ಲಿ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ವಿಶ್ವದ ಅತಿ ಎತ್ತರದ 179 ಅಡಿ ಶಿವಲಿಂಗ ಪ್ರತಿಷ್ಠಾಪಿಸುವ ಮಧ್ಯ ಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಂಡಿಕಾಹೋಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲೇ ಅತಿ ಎತ್ತರದ ಹಿರಿಮೆಗೆ ನೂತನ ಶಿವಲಿಂಗ ಪಾತ್ರವಾಗಲಿದೆ. 500 ಕಿ.ಮೀ. ದೂರದ ಗೌಡಗೆರೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರಲು ಭಕ್ತರು ಎದುರಿಸುತ್ತಿದ್ದ ಸಮಸ್ಯೆ ಮನಗಂಡು ದೇವಿಯಲ್ಲಿ ಸಂಕಲ್ಪ ಮಾಡಿ ಇಲ್ಲಿ ಶ್ರೀಚಕ್ರ, ಶ್ರೀ ಲಕ್ಷಿ$್ಮ ಸಾಲಿಗ್ರಾಮದೊಂದಿಗೆ ಚಾಮುಂಡೇಶ್ವರಿ ಪ್ರತಿಷ್ಠಾಪಿಸಲಾಗಿದೆ. ಮರಕುಂಬಿ ಹಾಗೂ ಸುತ್ತಲಿನ ಗ್ರಾಮಸ್ಥರ ಸಹಕಾರ ಅಪಾರವಾಗಿದೆ. ದೇವಿ ದರ್ಶನ ಭಾಗ್ಯದಿಂದ ಭಕ್ತರು ಸಂತುಷ್ಟರಾಗುತ್ತಿದ್ದಾರೆ ಎಂದರು.
ಗೌಡಗೆರೆಯ ಪವಾಡ ಬಸವಪ್ಪನ ಉತ್ಸವ ಭಕ್ತರ ಮನಸೂರೆಗೊಂಡಿತು. ಶ್ರೀ ಸಿದ್ಧಾರೂಢ ಬಳಗದ ವತಿಯಿಂದ ಭಕ್ತರಿಗೆ ಅಂಬಲಿ ವಿತರಿಸಲಾಯಿತು. ಸೋಮವಾರ ರಾತ್ರಿಯಿಂದ ಚಂಡಿಕಾಹೋಮದ ಪೂಜಾ ಕೈಂಕರ್ಯಗಳು ಶಾಸೊಕ್ತವಾಗಿ ನೆರವೇರಿದವು. ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ಮಂಗಳವಾರ ಬೆಳಗ್ಗೆ ಚಂಡಿಕಾ ಹೋಮ ಜರುಗಿತು.
ಮುರಗೋಡದ ನೀಲಕಂಠ ಸ್ವಾಮಿಜಿ, ಅಂಕಲಗಿ ಅಮರ ಸಿದ್ಧೇಶ್ವರ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರಮಠದ ಚಿದಾನಂದ ಸ್ವಾಮೀಜಿ, ದೇವಸ್ಥಾನದ ಕಾರ್ಯದರ್ಶಿ ಜಿ.ಬಿ.ಬಾಬು, ಯಶವಂತ, ಭೂದಾನಿ ಮಹಾಂತೇಶ ಕೌಜಲಗಿ, ಕಾರ್ತಿಕ ಪಾಟೀಲ, ನವೀನ ದೇಸಾಯಿ, ಮುಖಂಡರಾದ ಗಂಗಪ್ಪ ಕುರಬೆಟ್ಟ, ಬಸವರಾಜ ಕೌಜಲಗಿ, ಸೋಮಲಿಂಗಪ್ಪ ಬೋಗೂರ, ಈಶ್ವರ ಕೌಜಲಗಿ, ಅಡಿವೆಪ್ಪ ಮುರಕಿಬಾಂವಿ, ಈಶ್ವರ ಕೊಪ್ಪದ, ವಿರೂಪಾ ವಾಲಿ,
ಶಿವಾನಂದ ಕೌಜಲಗಿ, ಮಹೇಶ ಕಾಜಗಾರ, ಚಂದನ ಕೌಜಲಗಿ, ರವಿ ಕುರಬೆಟ್ಟ, ರಾಹುಲ ಕೌಜಲಗಿ, ಗದಿಗೆಯ್ಯ ಆರಾದ್ರಿಮಠ ಇತರರಿದ್ದರು.