Tribute to Dr. P. Varuna Gowda
ಚಿಂತಾಮಣಿ: ಯುಪಿಎಸ್ಸಿ ಪರೀಕ್ಷೆಯಲ್ಲಿ ಡಾ.ಪಿ.ವರುಣ ಗೌಡ 462ನೇ ರ್ಯಾಂಕ್ ಪಡೆಯವ ಮೂಲಕ ನಮ್ಮ ತೇರ್ಗಡೆಯಾಗಿರುವುದು ಖುಷಿ ತಂದಿದೆ ಎಂದು ಯೋಗ ಗುರು ನಾರಾಯಣಪ್ಪ ಹೇಳಿದರು.
ನಾಗರಿಕ ಸೇವಾ ಪರೀಕ್ಷೆ 2026ರಲ್ಲಿ ಚಿಂತಾಮಣಿ ನಗರದ ರಾಜೀವನಗರ ಬಡಾವಣೆ ನಿವಾಸಿ ಡಾ.ಪಿ.ವರುಣಗೌಡ 462ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದುಕೊಟ್ಟ ಹಿನ್ನೆಲೆ ಅವರನ್ನು ಸಿಟಿಜನ್ ವೆಲ್ಫೇರ್ ಅಸೋಸಿಯೇಷನ್ ಸನ್ಮಾನಿಸಲಾಯಿತು.
ಅಸೋಸಿಯೇಷನ್ ಪದಾಧಿಕಾರಿಗಳಾದ ಕೃಷ್ಣಾರೆಡ್ಡಿ, ಶಂಕರರೆಡ್ಡಿ, ಶಿಕ್ಷಕರಾದ ಆಂಜನಪ್ಪ, ಮಂಜುನಾಥ್, ಬಿಎಎಂಟಿಸಿ ಶಂಕರರೆಡ್ಡಿ, ನಿವೃತ್ತ ಪೊಲೀಸ್ ಸತ್ಯನಾರಾಯಣ್, ಅಶ್ವತ್ಥರೆಡ್ಡಿ, ನಾರಾಯಣಸ್ವಾಮಿ, ಯೋಗ ಗುರು ನಾರಾಯಣಪ್ಪ ಇದ್ದರು.