ಕನಕಪುರ ತಾಲೂಕು ಚಿಕ್ಕಮುದವಾಡಿಯಲ್ಲಿ ಜೆಡಿಎಸ್ ಮುಖಂಡರಿಂದ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿ.ಪ್ರಕಾಶ್, ಜಿ.ಟಿ.ಜಯಮೂರ್ತಿ, ಶಿವಲಿಂಗಯ್ಯ, ಕೆಂಚಪ್ಪ, ಪ್ರದೀಪ್ ಇದ್ದರು.  
ರಾಜ್ಯ

ಚಿಕ್ಕಮುದವಾಡಿಯಲ್ಲಿ ಚೆನ್ನಮ್ಮಗೆ ಶ್ರದ್ಧಾಂಜಲಿ

ಕನಕಪುರ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ದಿ. ಚೆನ್ನಮ್ಮ ಅವರ ನಿಧನಕ್ಕೆ ಚಿಕ್ಕಮುದವಾಡಿಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಗ್ರಾಮಸ್ಥರು ಬಸ್ ನಿಲ್ದಾಣದ ಬಳಿ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕರ್ತ ಮುಖಂಡರು, ಅಭಿಮಾನಿಗಳು ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಜೆಡಿಎಸ್ ಮುಖಂಡ ಸಿ.ಪ್ರಕಾಶ್, ಜಿ.ಟಿ.ಜಯಮೂರ್ತಿ, ಶಿವಲಿಂಗಯ್ಯ, ಮಾತನಾಡಿ, ಚೆನ್ನಮ್ಮನವರ ನಿಧನ ದೇವೇಗೌಡರ ಕುಟುಂಬಕ್ಕಷ್ಟೆ ಅಲ್ಲ, ಅಭಿಮಾನಿಗಳಿಗೂ ತೀವ್ರ ಆಘಾತ ತಂದಿದೆ. ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದರು.
ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಜೆಡಿಎಸ್ ಮುಖಂಡ ಸಿ.ಪ್ರಕಾಶ್, ಜಿ.ಟಿ.ಜಯಮೂರ್ತಿ, ಶಿವಲಿಂಗಯ್ಯ, ಕೆಂಚಪ್ಪ, ಪ್ರದೀಪ್, ಮಹದೇವನಾಯ್ಕ, ಚಂದ್ರಮ್ಮ, ಜಗದೀಶ್, ನರಸಿಂಹನಾಯ್ಕ, ವೆಂಕಟರಮಣಸ್ವಾಮಿ, ದ್ಯಾವೇಗೌಡ ಇತರರು ಇದ್ದರು.