Triangular contest certain in Doddaballapura
ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಇದ್ದಾಗಲೇ ಜಿಲ್ಲೆಯ ಸಾಮಾನ್ಯ ಮೀಸಲ ಕ್ಷೇತ್ರಗಳಲ್ಲೊಂದಾದ ದೊಡ್ಡಬಳ್ಳಾಪುರ ೇತ್ರದ ಚುನಾವಣಾ ಲೆಕ್ಕಾಚಾರಕ್ಕೆ ನಿಧಾನವಾಗಿ ಬಿಸಿ ಏರುತ್ತಿದೆ.
ಧೀರಜ್ಗೆ ಮತ್ತೆ ಒಲಿಯುತ್ತಾ ದೊಡ್ಡಬಳ್ಳಾಪುರ?
2023ರ ಚುನಾವಣೆಯಲ್ಲಿ ಯಾರ ಊಹೆಗೂ ನಿಲುಕದಂತೆ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಕ್ಷೇತ್ರದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಮತಗಳಿಂದ ಜಯಗಳಿಸಿ ಕಮಲ ಅರಳಿಸಿದ್ದರು. ಸಿಕ್ಕ ಅವಕಾಶವನ್ನು ಕೈತುಂಬಾ ಬಾಚಿಕೊಂಡಿರುವ ಧೀರಜ್ ಮುನಿರಾಜು, ೇತ್ರಾದ್ಯಂತ ಹಲವು ಕಾಮಗಾರಿಗಳನ್ನು ಮಾಡಿಸಿದ್ದಾರೆ. ವಿಪಕ್ಷದಲ್ಲಿದ್ದರೂ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಯೋಜನೆಗಳನ್ನು ತಾಲೂಕಿನಲ್ಲಿ ಮುಂದುವರಿಸಲು ಕಾಯೋರ್ನ್ಮುಖರಾಗಿದ್ದಾರೆ. ಚುನಾವಣಾ ಪೂರ್ವದಲ್ಲಿ ಆರಂಭಿಸಿದ್ದ ಸಾಮಾಜಿಕ ಸೇವೆಗಳೂ ಮುಂದುವರಿದಿರುವುದು, ಕಾರ್ಯಕರ್ತರು ಒಗ್ಗಟ್ಟಾಗಿರುವುದರಿಂದ ಮತ್ತೆ ಧೀರಜ್ಗೆ ಕ್ಷೇತ್ರ ಸುಲಭದ ತುತ್ತಾಗಲಿದೆ ಎನ್ನುವ ವಾತಾವರಣ ಇದೆ. ಆದರೆ ಭ್ರಷ್ಟ್ರಾಚಾರ ಸಹಿಸಲ್ಲ ಎಂದು ಧೀರಜ್ ಮುನಿರಾಜು ಹೇಳುತ್ತಿದ್ದರೂ ಉಪವಿಭಾಗಾಧಿಕಾರಿ, ತಾಲೂಕು, ಉಪನೋಂದಣಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿನ ಲಂಚಗುಳಿತನ ಜನರಿಗೆ ಬೇಸರ ತರಿಸಿದೆ. ಇದಕ್ಕೆ ಯಾವ ರೀತಿ ಬೆಲೆ ತೆರಲಿದ್ದಾರೆ ಎಂದು ಕಾಲವೇ ನಿರ್ಣಯಿಸಲಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಭಾರಿ ಮತಗಳ ಅಂತರದಿಂದ ಕ್ಷೇತ್ರವನ್ನು ವಶಕ್ಕೆ ಪಡೆದಿದೆ. ಮತ್ತದೆ ಹುರುಪಿನಲ್ಲಿರುವ ಕಮಲ ಮುಂದಿನ ಅಖಾಡದಲ್ಲಿಯೂ ಖುರ್ಚಿ ಉಳಿಸಿಕೊಳ್ಳಲು ಸನ್ನದ್ಧವಾಗಿದೆ.
ಕಾಂಗ್ರೆಸ್ ಗತವೈಭವ ಮರುಕಳಿಸುವುದೇ?
ಕ್ಷೇತ್ರದಲ್ಲಿ ಆರ್.ಎಲ್.ಜಾಲಪ್ಪ ಆದಿಯಾಗಿ ಕಾಂಗ್ರೆಸ್ನ ಗಟ್ಟಿ ನೆಲೆಯಾಗಿ ದೀರ್ಕಾಲದ ಆಡಳಿತ ನಡೆಸಿರುವ ಕಾಂಗ್ರೆಸ್ಗೆ ಕಳೆದ ಚುನಾವಣೆಯಲ್ಲಿ ನಿರೀೆಯೇ ಇಲ್ಲದಂತೆ ಭಾರಿ ಹಿನ್ನಡೆಯಾಗಿ ಆಕಾಶವೇ ನೆಲಕ್ಕುರುಳಿದಂತೆ ಭಾಸವಾಗಿದೆ. ಚುನಾವಣೆ ಕಳೆದು 3 ವರ್ಷಗಳಾದರೂ ಮೈಕೊಡವಿ ನಿಲ್ಲದ ಕಾಂಗ್ರೆಸ್ ಮುಖಂಡರ ಬಗ್ಗೆ ಕಾರ್ಯಕರ್ತರಿಗೆ ನೋವಿದೆ. ಮತ್ತೊಂದೆಡೆ ನಾನೇ ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಗಟ್ಟಿಯಾಗಿ ಹೇಳುತ್ತಿದ್ದರೂ ಕಾರ್ಯಕರ್ತರ ಮನಸ್ಸು ಮಾತ್ರ ಅಭ್ಯರ್ಥಿ ಬದಲಾವಣೆಯನ್ನು ಬಯಸುತ್ತಿರುವಂತಿದೆ. ಹೊಸ ಮುಖಕ್ಕೆ ಮಣೆ ಹಾಕಿದರೆ ಕಾರ್ಯಕರ್ತರಿಗೆ ಹೊಸ ಹುರುಪು, ಉತ್ಸಾಹ ಮೂಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಕ್ಷೇತ್ರದ ಸಾಂಪ್ರದಾಯಿಕ ಮತ ಒಟ್ಟುಗೂಡಿಸುವುದರ ಜತೆಗೆ ಪಂಚ ಗ್ಯಾರಂಟಿಗಳು ಮತಗಳಾಗಿ ಪರಿವರ್ತನೆಯಾದರೆ ಕಾಂಗ್ರೆಸ್ ಮತ್ತೊಂದು ವಿಜಯದ ಮಾಲೆ ಧರಿಸುವುದು ನಿಸ್ಸಂದೇಹ. ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವ ಸಮಯದಲ್ಲೂ ನಿಂತ ನೀರಿನಂತಾಗಿರುವ ಕಾಂಗ್ರೆಸ್ ಸಂಟನೆಗೆ ಒತ್ತು ನೀಡಿದರೆ ಕೈ ಕಾರ್ಯಕರ್ತರಿಗೆ ಶಕ್ತಿ ಬರಲಿದೆ.
ಮತ್ತೊಂದೆಡೆ ಕ್ಷೇತ್ರದಲ್ಲಿ ದೀರ್ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಪಡೆಯಲು ಹರಸಾಹಸ ಪಡುತ್ತಿದೆ. ಇನ್ನು ಚುನಾವಣೆಯಿಂದ ಚುನಾವಣೆಗೆ ತನ್ನ ಶಕ್ತಿ( ಮತ ಪ್ರಮಾಣ)ಯನ್ನು ಹೆಚ್ಚಿಸಿಕೊಳ್ಳುತ್ತಿರುವ ಜನತಾದಳಕ್ಕೆ ಎನ್ಡಿಎ ಮೈತ್ರಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ದಳಪತಿಗಳ ನಿಲುವು, ಲೆಕ್ಕಾಚಾರವೇನು?
ಪ್ರತಿ ಚುನಾವಣೆಯಲ್ಲಿ ಜೆಡಿಎಸ್ಗೆ ಹಿನ್ನಡೆಯಾಗುತ್ತಿದ್ದರೂ ತನ್ನ ಮತ ಪ್ರಮಾಣವನ್ನು ಹಿಗ್ಗಿಸಿಕೊಂಡು ಹೋಗುತ್ತಿರುವ ದಳಪತಿಗಳಿಗೆ ೇತ್ರದಲ್ಲಿ ತನ್ನದೆಯಾದ ವೋಟ್ ಬ್ಯಾಂಕ್ ಹೊಂದಿದೆ. ಆದರೆ ಪಕ್ಷಕ್ಕೆ ಟಿಕೆಟ್ ವಿಚಾರ ಗೊಂದಲದ ಗೂಡಾಗಿದೆ. ಕಾರ್ಯಕರ್ತರು ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಿದರೆ ಎನ್ಡಿಎ ಮೈತ್ರಿಯಡಿ ಟಿಕೆಟ್ ತರುವುದು ನನ್ನ ಜವಾಬ್ದಾರಿ ಎಂದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಮಾತಿಗೆ ಮಣೆ ಹಾಕಿ ಸಂಟನೆಯಲ್ಲಿ ಮಗ್ನರಾಗಿದ್ದಾರೆ ಕಾರ್ಯಕರ್ತರು.
2013ರ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಸಿಗದೆ ನಿರಾಸೆಗೊಂಡಿದ್ದ ಜೆಡಿಎಸ್ ಮುಖಂಡ ಬಿ.ಮುನೇಗೌಡ ಐದನೇ ಬಾರಿಗೂ ಚುನಾವಣಾ ಯುದ್ಧಕ್ಕೆ ಸಜ್ಜಾಗಿದ್ದಾರೆ. ಜೆಡಿಎಸ್ನಲ್ಲಿ ಅವಕಾಶ ಸಿಗದಿದ್ದರೆ ಮತ್ತೊಮ್ಮೆ ಪೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.
ಬಿ.ಮುನೇಗೌಡ ಕಿಂಗ್ ಇಲ್ಲವೆ ಕಿಂಗ್ಮೇಕರ್!
2008ರ ಉಪಚುನಾವಣೆ ಸೇರಿ ನಾಲ್ಕು ಸಾರ್ವತ್ರಿಕ ಚುನಾವಣೆಯಲ್ಲಿ ಅದೃಷ್ಟ ಪರೀೆಗಿಳಿದಿದ್ದ ಬಿ.ಮುನೇಗೌಡ ಅವರಿಗೆ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಕಿಂಗ್ ಮೇಕರ್ ಆಗಿದ್ದಾರೆ. ಆದರೆ ಪ್ರತಿ ಚುನಾವಣೆಯಲ್ಲಿಯೂ ವೈಯಕ್ತಿಕ ಮತ ಬ್ಯಾಂಕ್ ಬೆಳೆಸಿಕೊಂಡಿರುವ ಮುನೇಗೌಡ ಅವರಿಗೆ ಈ ಬಾರಿಯಾದರೂ ಜಯದ ಲ್ಮ ಒಲಿಯುತ್ತಾಳಾ? ಎನ್ನುವುದು ನಿಗೂಢ. ಜೆಡಿಎಸ್ನಿಂದ ಟಿಕೆಟ್ ಸಿಗದಿದ್ದರೆ ಮತ್ತೊಮ್ಮೆ ಪೇತರ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ. ಈ ಮೂಲಕ ಕಿಂಗ್ ಅಥವಾ ಕಿಂಗ್ ಮೇಕರ್ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಜಾತಿ ರಾಜಕಾರಣಕ್ಕಿಲ್ಲ ಪ್ರಾಮುಖ್ಯತೆ
ಕ್ಷೇತ್ರದಲ್ಲಿ ಈವರಗೆ ನಡೆದ ಚುನಾವಣೆಗಳಲ್ಲಿ ಜಾತಿ ರಾಜಕಾರಣ ನಗಣ್ಯವಾಗಿದೆ. ಆರ್.ಎಲ್.ಜಾಲಪ್ಪ, ನರಸಿಂಹಸ್ವಾಮಿ, ಆರ್.ಜಿ.ವೆಂಕಟಾಚಲಯ್ಯ, ಧೀರಜ್ ಮುನಿರಾಜು ಇದಕ್ಕೆ ಸಾ. ಒಕ್ಕಲಿಗ, ಕುರುಬ, ಪರಿಶಿಷ್ಟ ಜಾತಿ, ಪಂಗಡ, ಮುಸ್ಲಿಂ, ದೇವಾಂಗ ಸಮುದಾಯದ ಮತಗಳು ಕ್ಷೇತ್ರದಲ್ಲಿ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.