ಕಕ್ಕೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅರಣ್ಯ ಇಲಾಖೆ ನಿವೃತ್ತ ನೌಕರ ಮಾನಪ್ಪ ಬೂದಗುಂಪಿ ಅವರನ್ನು ಸನ್ಮಾನಿಸಲಾಯಿತು. ಬಸಯ್ಯ ಸ್ವಾಮಿ, ದೇವಿಂದ್ರಪ್ಪ ಸಜ್ಜನ್, ಮಹಾಂತಯ್ಯ ಸ್ವಾಮಿ, ಗಣೇಶ, ಸವಿತಾ, ರಾಜು, ಸುಭದ್ರಾ, ಮಹಾದೇವಿ, ಶೋಭಾ ಇತರರಿದ್ದರು.
- ಎಚ್ಎಂ ಬಸಯ್ಯ ಸ್ವಾಮಿ ಅನಿಸಿಕೆ
- ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕಕ್ಕೇರಾ: ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚು ಗಿಡ ಮರಗಳನ್ನು ನೆಟ್ಟು ಪೋಷಿಸಿದರೆ ಉತ್ತಮ ಪರಿಸರ ನಿರ್ಮಾಣವಾಗಿ ಮಳೆ, ಒಳ್ಳೆಯ ಗಾಳಿ ಪಡೆಯಲು ಸಾಧ್ಯ ಎಂದು ಮುಖ್ಯ ಶಿಕ್ಷಕ ಬಸಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸದ್ದಿ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಾವು ಸ್ವಚ್ಛ ಗಾಳಿ ಬೆಳಕಿನೊಂದಿಗೆ ಉಸಿರಾಡಲು ಕಾರಣ ಗಿಡಮರಗಳೇ ಎಂದರು.
ಅರಣ್ಯ ಇಲಾಖೆ ನಿವೃತ್ತ ನೌಕರ ಮಾನಪ್ಪ ಬೂದಗುಂಪಿ ಮಾತನಾಡಿ, 38 ವರ್ಷಗಳಿಂದ ಅರಣ್ಯ ಪಾಲಕನಾಗಿ ಸೇವೆ ಸಲ್ಲಿಸಿ ಗುಡ್ಡಗಾಡು ಪ್ರದೇಶ, ರಸ್ತೆ ಬದಿಯ ಮತ್ತು ಅರಣ್ಯದಲ್ಲಿನ ಗಿಡಮರಗಳನ್ನು ರಸಿದ್ದೇನೆ. ವಿದ್ಯಾರ್ಥಿಗಳು ಸಹ ಗಿಡಮರಗಳನ್ನು ನೆಟ್ಟು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕರಾದ ದೇವಿಂದ್ರಪ್ಪ ಸಜ್ಜನ್, ಮಹಾಂತಯ್ಯ ಸ್ವಾಮಿ, ಗಣೇಶ, ಮಂಜು, ರಾಜು ಬೊಮ್ಮನಳ್ಳಿ, ಶೋಭಾ ಬಡಿಗೇರ, ಸುಭದ್ರಾ ಜೋಶಿ, ಮಹಾದೇವಿ ಅರಳಳ್ಳಿ, ಮಂಜುಳಾ ಬಸಾಪುರ ಇದ್ದರು.
ಅರಣ್ಯ ಇಲಾಖೆಯಲ್ಲಿ ಸುದೀರ್ 38 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಫಾರೆಸ್ಟ್ ಮಾನಪ್ಪ ಎಂದೇ ಖ್ಯಾತರಾದ ಮಾನಪ್ಪ ಬೂದಗುಂಪಿ ಅವರಿಗೆ ಶಾಲಾ ಆಡಳಿತ ಮಂಡಳಿಯಿಂದ ಸಾಲು ಮರಗಳ ಸರದಾರ ಎಂಬ ಪ್ರಶಂಸನಾ ಪತ್ರ ನೀಡಿ ಸನ್ಮಾನ ಮಾಡಲಾಯಿತು.