ಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಗವಿಸಿದ್ದಪ್ಪ ಗೊಂದಿಹೊಸಹಳ್ಳಿ ಮಾತನಾಡಿದರು. ಮುಖಂಡರಾದ ಗುಡದಪ್ಪ ಮೇಟಿ, ಹನುಮಪ್ಪ ನಾಗಣ್ಣವರ, ಯಲ್ಲಪ್ಪ ಹುಬ್ಬಳ್ಳಿ, ಲಕ್ಕಪ್ಪ ನಿಟ್ಟಾಲಿ, ನಿಂಗಪ್ಪ ಕರಿಗಾರ, ರುದ್ರಪ್ಪ ಅಳವಂಡಿ ಇತರರಿದ್ದರು. 
ರಾಜ್ಯ

ರೋಗ ಲಕ್ಷಣಗಳಿದ್ದಲ್ಲಿ ಚಿಕಿತ್ಸೆ ಅಗತ್ಯ

ಅಳವಂಡಿ: ಸಾಂಕ್ರಾಮಿಕ ರೋಗ ತಡೆಗೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಗವಿಸಿದ್ದಪ್ಪ ಗೊಂದಿಹೊಸಹಳ್ಳಿ ತಿಳಿಸಿದರು.
ಹಟ್ಟಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ, ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಹಟ್ಟಿ ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಸೋಮವಾರ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಡುಕದೊಂದಿಗೆ ವಿಪರೀತ ಜ್ವರ, ತಲೆನೋವು, ಮೈ ಕೈ ನೋವು, ವಾಕರಿಕೆ ಹಾಗೂ ವಾಂತಿ, ಅತಿಯಾದ ಸುಸ್ತು, ವಿಪರೀತ ಬೆವರು ಮಲೇರಿಯಾದ ಲಕ್ಷಣಗಳಾಗಿದ್ದು, ಇವು ಕಂಡುಬಂದಲ್ಲಿ ತ್ವರಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು.
22 ಅಳವಂಡಿ01